Chief Editor
Manohar. R (Manu)
Photo Journalist
chitrataramanu@gmail.com
+91 9845549026
``ಕಾಲೇಜ್ ಕಲಾವಿದ`` ಟ್ರೈಲರ್ ಬಿಡುಗಡೆ ಮಾಡಿದ ಖಳನಟ ಕೋಟೆ ಪ್ರಭಾಕರ್
Posted date: 29 Thu, May 2025 12:02:32 PM
ಬೆಳ್ಳಿ ಪರದೆ ಮೇಲೆ ಮತ್ತೊಂದು ಮ್ಯೂಸಿಕಲ್ ಲವ್ ಸ್ಟೋರಿ ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಯುವ ಪಡೆಗಳ ತಂಡ ಸೇರಿಕೊಂಡು ಸಿದ್ದಪಡೆಸಿರುವಂತಹ ಚಿತ್ರ "ಕಾಲೇಜ್ ಕಲಾವಿದ". ನಗರದ  ಎಸ್. ಆರ್. ವಿ . ಪ್ರಿವ್ಯೂ ಥಿಯೇಟರ್ನಲ್ಲಿ ನಾಲ್ಕು ಹಾಡುಗಳನ್ನ ತೋರಿಸುವ ಮೂಲಕ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮವನ್ನು ಚಿತ್ರತಂಡ ಆಯೋಜನೆ ಮಾಡಿತ್ತು. ಈ ಒಂದು ಕಾರ್ಯಕ್ರಮಕ್ಕೆ ಖಳನಟ ಕೋಟೆ ಪ್ರಭಾಕರ್ , ನಟ ನಿರ್ದೇಶಕ ನಾಗೇಂದ್ರ ಅರಸ್, ನಟರಾದ ಪ್ರಥಮ್ , ದಿನೇಶ್ ,
ಜಯ ಕರ್ನಾಟಕ ಮುಖ್ಯಸ್ಥರಾದ  ಜಗದೀಶ್ ಸೇರಿದಂತೆ ಅನೇಕ ಗಣ್ಯರು ಆಗಮಿಸಿ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದರು. 
 
ಈ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದಂತ ಖಳನಟ ಕೋಟೆ ಪ್ರಭಾಕರ್ ಮಾತನಾಡುತ್ತಾ ನನ್ನ ಚಿತ್ರ ಜೀವನದಲ್ಲಿ ಇದೇ ಮೊದಲ ಬಾರಿಗೆ ಚಿತ್ರ ಒಂದರ ಟ್ರೈಲರ್ ಬಿಡುಗಡೆ ಮಾಡಿದ್ದು ,  ಇದು ನನಗೆ ಮರೆಯಲಾಗದ ಸಂದರ್ಭ, ನಾನು ಈ ಚಿತ್ರದಲ್ಲಿ ಆಕ್ಟ್ ಮಾಡಿಲ್ಲ , ಆದರೂ ಈ ತಂಡ ಪ್ರೀತಿಯಿಂದ ನನ್ನನ್ನ ಕರೆದರು ಹಾಗಾಗಿ ಬಂದೆ , ಈ ಕಾಲೇಜ್ ಕಲಾವಿದ ಚಿತ್ರ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು. ಮತ್ತೊಬ್ಬ ಅತಿಥಿ ನಾಗೇಂದ್ರ ಅರಸ್ ಮಾತನಾಡುತ್ತಾ ಈ ಚಿತ್ರದ ಸಂಕಲನಾದ ಕೆಲಸವನ್ನ ನನ್ನ ಶಿಷ್ಯ ಮಹೇಶ್ ಮಾಡುತ್ತಿದ್ದಾನೆ. ಹಾಗೆಯೇ ಈ ಚಿತ್ರವನ್ನ ನೋಡಿದ ಮೇಲೆ ನಾನೇ ಈ ಚಿತ್ರದ ಟ್ರೈಲರ್ ಅನ್ನ ಎಡಿಟ್ ಮಾಡಿದೆ. ಖಂಡಿತ ಈ ಮ್ಯೂಸಿಕಲ್ ಲವ್ ಚಿತ್ರದಲ್ಲಿ ಬಹಳಷ್ಟು ತಿರುವುಗಳಿದೆ , ಚಿತ್ರ ಸಕ್ಸಸ್ ಕಾಣಲಿ ಎಂದು ಶುಭ ಹಾರೈಸಿದರು. ನಟ ಪ್ರಥಮ್ ಕೂಡ ಎಂದಿನಂತೆ ತನ್ನ ಅಬ್ಬರದ ಮಾತಿನಲ್ಲೇ ಎಲ್ಲರ ಗಮನವನ್ನು ಸೆಳೆಯುತ್ತಾ ಚಿತ್ರದ ಕಲಾವಿದರು , ತಂತ್ರಜ್ಞಾನರ ಶ್ರಮದ ಬಗ್ಗೆ ಮಾತನಾಡುತ್ತಾ ಚಿತ್ರ ಯಶಸ್ವಿ ಕಾಣಲಿ ಎಂದು ಶುಭ ಹಾರೈಸಿದರು. ಹಾಗೆಯೇ ಜಯ ಕರ್ನಾಟಕದ ಮುಖ್ಯಸ್ಥರಾದ ಜಗದೀಶ್ ಮಾತನಾಡುತ್ತಾ ನಿರ್ಮಾಪಕ ತರುಣ್ ಶರ್ಮ 30ವರ್ಷದ ಸ್ನೇಹಿತ. ಈ ಚಿತ್ರದ ಟ್ರೈಲರ್ ಬಹಳ ಸೊಗಸಾಗಿ ಬಂದಿದೆ. ಹಾಗೆಯೇ ಡ್ರಗ್ ವಿಚಾರದ ಕುರಿತು ಈ ಚಿತ್ರದಲ್ಲಿ ಹೇಳಿದ್ದು , ಇವತ್ತಿನ ಕಾಲೇಜು ವಿದ್ಯಾರ್ಥಿಗಳ ಕಥೆಯು ಇದೆ. ಈ ಚಿತ್ರಕ್ಕೆ  ರಾಜ್ಯದ ನಮ್ಮ ಜಯ ಕರ್ನಾಟಕ ಸಂಘಟನೆ ಸಂಪೂರ್ಣ ಬೆಂಬಲ ನೀಡಲಿದೆ. ಚಿತ್ರಕ್ಕೆ ಶುಭವಾಗಲಿ ಎಂದರು. ಇನ್ನುಳಿದಂತೆ ಚಾಮರಾಜ್ ಫೈಟ್ ಮಾಸ್ಟರ್, ನಟ ದಿನೇಶ್ ಸೇರಿದಂತೆ ಹಲವಾರು ಚಿತ್ರತಂಡದ ಶ್ರಮವನ್ನ ಮೆಚ್ಚಿಕೊಳ್ಳುತ್ತಾ ಚಿತ್ರ ಯಶಸ್ವಿ ಆಗಲಿ ಎಂದು ಶುಭ ಹಾರೈಸಿದರು. 
 
ಈ ಚಿತ್ರದ ನಿರ್ದೇಶಕ ಸಂಜಯ್ ಮಳವಳ್ಳಿ ಮಾತನಾಡುತ್ತಾ ನಾನು ಚಿತ್ರೋದ್ಯಮದಲ್ಲಿ 15 ಕ್ಕೂ ಹೆಚ್ಚು ಚಿತ್ರಗಳಲ್ಲಿ ಸಹಾಯಕ , ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ನಾನು ಬರಹಗಾರ ಹಾಗೂ ಚಿತ್ರ ಸಾಹಿತಿಯು ಕೂಡ, ನನ್ನ ಗುರುಗಳಾದ ಮಂಡ್ಯ ರಮೇಶ್ ಮಾರ್ಗದರ್ಶನದಲ್ಲಿ ಸಾಗಿ ಬಂದು , ಈಗ ನನ್ನ ಮೊದಲ ನಿರ್ದೇಶನದ ಪ್ರಯತ್ನವಾಗಿ ಕಾಲೇಜ್ ಕಲಾವಿದ ಚಿತ್ರವನ್ನು ಸಿದ್ಧಪಡಿಸಿದ್ದೇನೆ. ಇದೊಂದು ಪ್ರೇಮಮಯ ಚಿತ್ರ. ಮ್ಯೂಸಿಕಲ್ ಜರ್ನಿರುವ ಈ ಚಿತ್ರದಲ್ಲಿ ಡ್ರಗ್ಸ್ ವಿಚಾರವೂ ಒಳಪಟ್ಟಿದೆ. ಕಾಲೇಜು ವಿದ್ಯಾರ್ಥಿಗಳ ಸ್ನೇಹ , ಪ್ರೀತಿ , ಸಂಬಂಧ , ಹಾಸ್ಯ , ಫೈಟ್ ಸೇರಿದಂತೆ ಮನೋರಂಜನೆಯ ಎಲ್ಲಾ ಅಂಶವನ್ನು ಒಳಗೊಂಡಿರುವಂತಹ ಚಿತ್ರ ಇದಾಗಿದೆ.  ಬೆಂಗಳೂರು, ಚಿಕ್ಕಮಗಳೂರು ಸೇರಿದಂತೆ ಹಲವು ಸುಂದರ ತಾಣಗಳಲ್ಲಿ ಚಿತ್ರಿಕರಿಸಲಾಗಿದೆ.  ಇಂದು ಚಿತ್ರದ ಟ್ರೈಲರ್ ಅನ್ನ ಬಿಡುಗಡೆ ಮಾಡಿದ್ದೇವೆ. ಮುಂದಿನ ತಿಂಗಳು ಜೂನ್ 6 ರಂದು ರಾಜ್ಯಾದ್ಯಂತ  ನಮ್ಮ ಚಿತ್ರ ಬಿಡುಗಡೆ ಆಗಲಿದೆ ಎಲ್ಲರೂ ನೋಡಿ ಸಹಕರಿಸಿ ಎಂದು ಕೇಳಿಕೊಂಡರು.  ಈ ಚಿತ್ರದ ನಿರ್ಮಾಪಕರಾದ ತರುಣ್ ಶರ್ಮ ಮಾತನಾಡುತ್ತಾ ನಾನು  ಐರನ್ ಅಂಡ್  ಸ್ಟೀಲ್ ಬಿಸಿನೆಸ್ ಮಾಡುತ್ತಿದ್ದೇನೆ. ನನಗೆ  ಚಿತ್ರ ನಿರ್ಮಾಣ ಮಾಡುವ ಆಸೆ, ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ಈಗ ಸಿನಿಮಾ ಚೆನ್ನಾಗಿ ಬಂದಿದೆ.  ಜೂನ್ 6 ರಂದು ಸುಮಾರು 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಶಾಲಿನಿ ಆರ್ಟ್ಸ್  ಡಿಸ್ಟ್ರಿಬುಷನ್ ಮೂಲಕ ನಮ್ಮ ಚಿತ್ರವನ್ನ ಬಿಡುಗಡೆ ಮಾಡುತ್ತಿದ್ದೇವೆ. ಹಾಗೆಯೇ ನಿರ್ದೇಶಕರು ಈ ಚಿತ್ರದಲ್ಲಿ ಒಂದು ವಿಲ್ಲನ್ ಪಾತ್ರ ಇದೆ ಅದನ್ನ ನೀವೇ ಮಾಡಿ ಎಂದರು , ಹಾಗಾಗಿ ನಾನು ಒಪ್ಪಿಕೊಂಡು ಮಾಡಿದ್ದೇನೆ. ನನ್ನ ಪಾತ್ರ ಹೇಗಿದೆ ಎಂಬುದನ್ನು ನೀವೆಲ್ಲರೂ ನೋಡಿ ಹೇಳಬೇಕು , ಮುಂದೆಯೂ ಚಿತ್ರ ನಿರ್ಮಾಣ ಮಾಡುತ್ತೇನೆ. ಅವಕಾಶ ಸಿಕ್ಕರೆ ಬೇರೆ ಚಿತ್ರಗಳಲ್ಲೂ ಕೂಡ ನಟಿಸುತ್ತೇನೆ ಎನ್ನುತ್ತಾ , ನಮ್ಮ ಚಿತ್ರವನ್ನ ನೋಡಿ ಹರಿಸಿ ಎಂದರು.
 
ನಟ ಆರಾವ್ ಸೂರ್ಯ ಮಾತನಾಡುತ್ತಾ ನಾನು 2016ರಲ್ಲಿ ಸಿನಿಮಾಗಳಲ್ಲಿ ನಟಿಸುತ್ತಾ ಬಂದೆ , ತದನಂತರ ಸೀರಿಯಲ್ ಗಳಲ್ಲಿ ಅಭಿನಯಿಸಿದೆ.  ಈಗ ಮತ್ತೆ  ಸಿನಿಮಾಗೆ  ಎಂಟ್ರಿ ಮಾಡಿದ್ದೇನೆ. ಇದೊಂದು ಸುಂದರ ಲವ್ ಸಬ್ಜೆಕ್ಟ್ ,  ಈ ಚಿತ್ರದಲ್ಲಿ ನಾನೊಬ್ಬ ಸ್ಕೆಚ್ ಆರ್ಟಿಸ್ಟ್ , ಕಾಲೇಜು ವಿದ್ಯಾರ್ಥಿಯಾಗಿ ನನ್ನದೊಂದು ಗೆಳೆಯರ  ಗುಂಪು , ಅಮ್ಮನ ಪ್ರೀತಿ , ಸ್ನೇಹಿತರ ಸಹಕಾರದ ನಡುವೆ ಮುದ್ದಾದ  ಹುಡುಗಿ ನನ್ನ ಮನಸ್ಸಿಗೆ ಪ್ರವೇಶ ಆದಾಗ ಆಗುವ ಏರಿಳಿತ ಕಥೆಯೇ ಜೊತೆಗೆ ಡ್ರಗ್ಸ್ ವಿಚಾರ ಸೇರಿದಂತೆ ಹಲವು ಘಟನೆಗಳು ಚಿತ್ರದ ಹೈಲೈಟ್ ಆಗಲಿದೆ. ಸಾಂಗ್ , ಫೈಟ್ , ಕಾಮಿಡಿ ಎಲ್ಲವೂ ಸೊಗಸಾಗಿ ಮೂಡಿಬಂದಿದೆ.  ಹಾಡುಗಳು ನಮ್ಮ ಚಿತ್ರದ ಹೈಲೈಟ್ , ನಟನೆಗೆ ಒಳ್ಳೆ ಅವಕಾಶ ಸಿಕ್ಕಿದೆ ನೀವೆಲ್ಲರೂ ನಮ್ಮ ಚಿತ್ರವನ್ನ ನೋಡಿ ಹರಿಸಿ ಎಂದರು. ಈ ಚಿತ್ರದಲ್ಲಿ ನಾಯಕಿಯಾಗಿ ಚೈತ್ರ  ಅಭಿನಯಿಸಿದ್ದು , ಬೇರೆ ಚಿತ್ರದ ಚಿತ್ರೀಕರಣದ ಕಾರಣ ಪತ್ರಿಕಾಗೋಷ್ಠಿಗೆ ಬರಲಿಲ್ಲ ,  ಬಿಡುಗಡೆಯ ಪ್ರಚಾರ ಸಮಯಕ್ಕೆ ಬರುತ್ತಾರೆ ಎಂದಿದೆ ಚಿತ್ರತಂಡ. ಇನ್ನು ಈ ಚಿತ್ರದ ಮತ್ತೊಂದು ಪ್ರಮುಖ ಪಾತ್ರದಲ್ಲಿ ಕಾಮಿಡಿ ನಟ ಹುಲ್ಲಿ ಕಾರ್ತಿಕ್ ಅಭಿನಯಿಸಿದ್ದು , ಹಿರಿಯ ನಟ ರಮೇಶ್ ಭಟ್ , ನಟಿ  ಹರಿಣಿ ಸೇರಿದಂತೆ ಹಲವಾರು ಕಲಾವಿದರು ಅಭಿನಯಿಸಿದ್ದಾರೆ. 
 
ಇದೊಂದು ಮ್ಯೂಸಿಕಲ್ ಲವ್ ಜರ್ನಿ ಚಿತ್ರವಾಗಿದ್ದು , ಸಂಗೀತ ನಿರ್ದೇಶಕ ಸೂರಜ್ ಜೋಯಿಸ್ ಮಾತನಾಡುತ್ತಾ ಇದು ನನ್ನ  13ನೇ ಫಿಲಂ. ಈ ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು , ಎರಡು ಹಾಡನ್ನು ನಾನೇ ಹಾಡಿದ್ದೇನೆ. ನಿರ್ದೇಶಕರು ಹೇಳಿದಂತೆ ನಾನು ಕೆಲಸ ಮಾಡಿದ್ದೇನೆ. ಎಲ್ಲಾ ಕ್ರೆಡಿಟ್ ಅವರಿಗೆ ಸಲ್ಲಬೇಕು , ಹಾಡುಗಳು , ಹಿನ್ನೆಲೆ ಸಂಗೀತವು ಉತ್ತಮವಾಗಿ ಮೂಡಿ ಬಂದಿದೆ. ವಿಶೇಷವಾಗಿ ಈ ಚಿತ್ರಕ್ಕಾಗಿ ಥೀಮ್ ಮ್ಯೂಸಿಕ್  ಮಾಡಿದ್ದೇವೆ. ನನ್ನ ಹಿಂದಿನ ಎಲ್ಲಾ ಚಿತ್ರಕ್ಕಿಂತ ಈ ಚಿತ್ರ ಬಹಳ ವಿಶೇಷವಾದದ್ದು, ಸಂಭಾಷಣೆ , ಹಾಸ್ಯ , ಆಕ್ಷನ್ ಎಲ್ಲವೂ ಉತ್ತಮವಾಗಿ ಬಂದಿದೆ ಎಂದರು. ಆನಂದ್ ಸುಂದರೇಶ್ ಛಾಯಾಗ್ರಾಹಣ , ಬಾಲ ನೃತ್ಯ ನಿರ್ದೇಶನವಿರುವ  ಈ ಚಿತ್ರವು ಜೂನ್ 6 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈಗಾಗಲೇ ಚಿತ್ರ ತಂಡ ಕಾಲೇಜು ಸೇರಿದಂತೆ ಹಲವುಡೆ ಪ್ರಚಾರದ ಕಾರ್ಯವನ್ನು ಆರಂಭಿಸಿದ್ದು, ಬಿಡುಗಡೆಗೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ``ಕಾಲೇಜ್ ಕಲಾವಿದ`` ಟ್ರೈಲರ್ ಬಿಡುಗಡೆ ಮಾಡಿದ ಖಳನಟ ಕೋಟೆ ಪ್ರಭಾಕರ್ - Chitratara.com
Copyright 2009 chitratara.com Reproduction is forbidden unless authorized. All rights reserved.