Chief Editor
Manohar. R (Manu)
Photo Journalist
chitrataramanu@gmail.com
+91 9845549026
ಉಗಾಂಡದ ಗೆಟ್ಟೇ ಕಿಡ್ಸ್ ``45`` ಚಿತ್ರಕ್ಕೆ ಪ್ರಚಾರಕ್ಕೆ ಆಗಮನ
Posted date: 10 Tue, Jun 2025 11:22:10 AM
ಉಗಾಂಡದ ವೈರಲ್ ಡ್ಯಾನ್ಸ್ ಮಕ್ಕಳ ತಂಡ “ಗೆಟ್ಟೋ ಕಿಡ್ಸ್” ಇದೇ ಮೊದಲ ಬಾರಿಗೆ ಕನ್ನಡದ ಚಿತ್ರವೊಂದರ ಪ್ರಮೋಷನ್‍ಗಾಗಿ ಆಗಮಿಸುತ್ತಿದ್ದಾರೆ. ಅದುವೇ “ ಬಹುನಿರೀಕ್ಷಿತ “ 45” ಚಿತ್ರಕ್ಕಾಗಿ. ಈಗಾಗಲೇ ವಿವಿಧ ಕಾರಣಗಳಿಂದ ಸದ್ದು ಮಾಡಿರುವ ಚಿತ್ರಕ್ಕೆ ಇದೀಗ ಮತ್ತಷ್ಟು ಬಲಬಂದಂತಾಗಲಿದೆ.
 
ಸಂಗೀತ ಮಾಂತ್ರಿಕ ಅರ್ಜುನ್ ಜನ್ಯಾ ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿರುವ ಬಹುತಾರಾಗಣ ಮತ್ತು ಬಹುಕೋಟಿ ವೆಚ್ಚದ ಸಿನಿಮಾವನ್ನು ಕನ್ನಡ ಚಿತ್ರರಂಗದಲ್ಲಿ ಸದಭಿರುಚಿಯ ಚಿತ್ರ ನಿರ್ಮಾಪಕ ಎಂದೇ ಖ್ಯಾತಿ ಪಡೆದಿರುವ ಎಂ. ರಮೇಶ್ ರೆಡ್ಡಿ ಚಿತ್ರಕ್ಕೆ ಧಾರಾಳವಾಗಿ ಖರ್ಚು ಮಾಡಿದ್ದಾರೆ .ಅದರ ಭಾಗವಾಗಿ ಉಗಾಂಡ ಗೆಟ್ಟೋ ಕಿಡ್ಸ್ ಡಾನ್ಸ್ ತಂಡವನ್ನು ಕರೆಸುತ್ತಿದ್ದಾರೆ.
 
ಚಿತ್ರದ ಕುರಿತು ಮಾಹಿತಿ ಹಂಚಿಕೊಂಡ ನಿರ್ಮಾಪಕ ರಮೇಶ್ ರೆಡ್ಡಿ ಅವರು, “45” ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಎಲ್ಲಾ ಅಂದುಕೊಂಡಂತೆ ಆದರೆ ಆಗಸ್ಟ್ ತಿಂಗಳಲ್ಲಿ ಚಿತ್ರ ತೆರೆಗೆ ಬರಲಿದೆ. ಇದಕ್ಕೂ ಮುನ್ನ ಉಗಾಂಡದ ಡ್ಯಾನ್ಸ್ ವೈರಲ್ ಡ್ಯಾನ್ಸ್ ತಂಡ  ಗೆಟ್ಟೋ ತಂಡವನ್ನು ಕನ್ನಡಕ್ಕೆ ಕರೆಸಲಾಗುತ್ತಿದೆ. ಕನ್ನಡ ಚಿತ್ರರಂಗದಲ್ಲಿ ಇದೊಂದು ವಿಭಿನ್ನ ಪ್ರಯತ್ನ ಎಂದಿದ್ಧಾರೆ.
 
“ಉಗಾಂಡ” ದ ವೈರಲ್ ಡ್ಯಾನ್ಸ್ ತಂಡವನ್ನು ಪ್ರಚಾರಕ್ಕಾಗಿ ಕರೆಸುತ್ತಿದ್ದೇವೆ, ಇದೇ 15ರಿಂದ ಹಾಡಿನ ಚಿತ್ರೀಕರಣ ನಡೆಯಲಿದ್ದು ಖ್ಯಾತ ನೃತ್ಯ ಸಂಯೋಜಕ ಜಾನಿ ಮಾಸ್ಟರ್  ಪ್ರಮೋಷನ್‍ನಲ್ ಹಾಡಿಗೆ ಮಕ್ಕಳಿಗೆ ನೃತ್ಯ ಸಂಯೋಜನೆ ಮಾಡಲಿದ್ದು  ಶಿವರಾಜ್ ಕುಮಾರ್, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಭಾಗಿಯಾಗಲಿದ್ದಾರೆ. ಹಾಡಿಗಾಗಿ ದೊಡ್ಡಮಟ್ಟದಲ್ಲಿ ಸೆಟ್ ಹಾಕಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
 
ನಿರ್ದೇಶಕ ಅರ್ಜುನ್ ಜನ್ಯ ಪ್ರತಿಕ್ರಿಯಿಸಿ ಉಗಾಂಡದ  “ಗೆಟ್ಟೋ ಕಿಡ್ಸ್” ಲಕ್ಷಾಂತರ ಅನುಯಾಯಿಗಳನ್ನು ಜಗತ್ತಿನಾದ್ಯಂತ ಹೊಂದಿದೆ. ಇದೇ ಮೊದಲ ಬಾರಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹಾಡಿನ ಚಿತ್ರೀಕರಣ ನಡೆಸಲಿದೆ. ಜಾಗತಿಕ ಮಟ್ಟದಲ್ಲಿ ಹಾಡಿನ ಚಿತ್ರೀಕರಣ ನಡೆಸಲಾಗುತ್ತಿದೆ. ಸರಿ ಸುಮಾರು 2.5 ಕೋಟಿ ವೆಚ್ಚದಲ್ಲಿ ಪ್ರಮೋಷನಲ್ ಹಾಡಿನ ಚಿತ್ರೀಕರಣ ನಡೆಸಲಾಗುತ್ತಿದೆ. ಹಾಡು ಕಲರ್‍ಫುಲ್ ಆಗಿರಲಿದೆ. ಗೆಟ್ಟೋ ಕಿಡ್ಸ್ ತಂಡದ ಮೂಲಕ ಅಂತರಾಷ್ಟ್ರೀಯ ಸ್ಪರ್ಶವನ್ನು ಹಾಡಿಗೆ ನೀಡಲಾಗುತ್ತಿದೆ ಎಂದಿದ್ಧಾರೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಉಗಾಂಡದ ಗೆಟ್ಟೇ ಕಿಡ್ಸ್ ``45`` ಚಿತ್ರಕ್ಕೆ ಪ್ರಚಾರಕ್ಕೆ ಆಗಮನ - Chitratara.com
Copyright 2009 chitratara.com Reproduction is forbidden unless authorized. All rights reserved.