`ಗೋಧಿ ಬಣ್ಣ ಸಾಧಾರಣ ಮೈಕಟ್ಟು`, `ಕವಲುದಾರಿ`, ಹಾಗೂ `ಸಪ್ತ ಸಾಗರದಾಚೆ ಎಲ್ಲೋ` ಚಿತ್ರಗಳ ಮೂಲಕ ವಿಶಿಷ್ಟ ಕಥಾನಕಗಳ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ ನಿರ್ದೇಶಕ ಹೇಮಂತ್ ಎಂ ರಾವ್, ಈಗ ತಮ್ಮ ಮುಂದಿನ ಚಿತ್ರ `666 ಆಪರೇಷನ್ ಡ್ರೀಮ್ ಥಿಯೇಟರ್` ಮೂಲಕ ಮತ್ತೊಮ್ಮೆ ನಿರ್ದೇಶನದ ಹಾದಿಯಲ್ಲಿ.
ಧನಂಜಯ ಕೆ.ಎ ಅವರ ಅಭಿನಯದಲ್ಲಿ ಮೂಡಿಬರಲಿರುವ ಈ ಚಿತ್ರವು, 70ರ ದಶಕದ ಶೈಲಿ ಚಿತ್ರದ ವೈಶಿಷ್ಟ್ಯತೆಯಾಗಿದೆ, ಕರುನಾಡ ಚಕ್ರವರ್ತಿ ಡಾ. ಶಿವರಾಜಕುಮಾರ್ ಅವರ ಶಕ್ತಿಯುತ ಪಾತ್ರ, ಪ್ರೇಕ್ಷಕರ ಮನಸ್ಸಿನಲ್ಲಿ ಸಂಚಲನ ಮೂಡಿಸಲಿದೆ!
ಈ ಚಿತ್ರವನ್ನು ಡಾ. ವೈಶಾಖ್ ಜೆ ಗೌಡ ಅವರು ವೈಶಾಖ್ ಜೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಮೂಡಿ ಬರಲಿದೆ.
`666 ಆಪರೇಷನ್ ಡ್ರೀಮ್ ಥಿಯೇಟರ್` ಚಿತ್ರತಂಡದಲ್ಲಿ ಚರಣ್ ರಾಜ್ ಸಂಗೀತ ಸಂಯೋಜನೆ, ಅದ್ವೈತ ಗುರುಮೂರ್ತಿ ಛಾಯಾಗ್ರಹಣ, ಮತ್ತು ವಿಶ್ವಾಸ್ ಕಾಶ್ಯಪ್ ಕಲಾ ನಿರ್ದೇಶನವನ್ನು ನಿರ್ವಹಿಸುತ್ತಿದ್ದಾರೆ.
ಚಿತ್ರದ ಶುಭಾರಂಭಕ್ಕೆ ಸಜ್ಜಾಗಿರಿ – `666 ಆಪರೇಷನ್ ಡ್ರೀಮ್ ಥಿಯೇಟರ್`