Chief Editor
Manohar. R (Manu)
Photo Journalist
chitrataramanu@gmail.com
+91 9845549026
ದಿಗ್ಗಜ ಕಲಾವಿದರ ಅಭಿಮಾನಿಗಳಿಂದ ಫಸ್ಟ್ ಡೇ ಫಸ್ಟ್ ಶೋ ಟ್ರೇಲರ್ ರಿಲೀಸ್...ಕನ್ನಡ ಚಿತ್ರರಂಗದ ಸುತ್ತ ಸಾಗುವ ಸಿನಿಮಾ -ಗಿರೀಶ್ ಹೊಸ ಪ್ರಯತ್ನದ ಫಸ್ಟ್ ಡೇ ಫಸ್ಟ್ ಶೋ ಟ್ರೇಲರ್ ರಿಲೀಸ್
Posted date: 22 Sun, Jun 2025 05:39:39 PM
ಕನ್ನಡ‌ ಚಿತ್ರರಂಗ ನಿಧಾನವಾಗಿ ಬದಲಾಗುತ್ತಿದೆ. ಜನ ಥಿಯೇಟರ್ ಗೆ ಬರ್ತಿಲ್ಲ.‌ ಮನೆ‌ಮಂದಿ ಕುಳಿತು ಒಟಿಟಿಯಲ್ಲಿಯೇ ಸಿನಿಮಾ ನೋಡುವ ಕಾಲಘಟ್ಟಕ್ಕೆ ತಲುಪಿದ್ದೇವೆ. ಹೀಗಾಗಿ ಚಿತ್ರಮಂದಿರದ‌ ಸಂಪ್ರದಾಯ‌‌ ಕೊಂಚವಾಗಿ ಮರೆಯುತ್ತಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಅದರಲ್ಲಿಯೂ ಫಸ್ಟ್ ಡೇ ಫಸ್ಟ್ ಶೋ ಎಂಬ ಸಂಸ್ಕೃತಿ ಇತ್ತೀಚೆಗೆ ಕಡಿಮೆಯಾಗುತ್ತಿದೆ‌. ಈ ಬೆಳವಣಿಗೆ ನಡುವೆ ಕನ್ನಡ ಚಿತ್ರರಂಗದ ಸುತ್ತ ಸಾಗುವ ಫಸ್ಟ್ ಡೇ ಫಸ್ಟ್ ಶೋ ಎಂಬ ಚಿತ್ರವೀಗ ಬೆಳ್ಳಿಪರದೆಗೆ ಎಂಟ್ರಿ‌ ಕೊಡಲು ಸಜ್ಜಾಗಿದೆ.
 
ಕನ್ನಡ‌ ಚಿತ್ರರಂಗದ ಭರವಸೆ ನಿರ್ದೇಶಕ ಗಿರೀಶ್ ಹೊಸ ಪ್ರಯತ್ನವೇ ಫಸ್ಟ್ ಡೇ ಫಸ್ಟ್ ಶೋ. ಈ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನ ಕಲಾವಿದರ‌ ಸಂಘದಲ್ಲಿ ನಿನ್ನೆ ಜರುಗಿತು. ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಡಾ.ರಾಜ್ ಕುಮಾರ್ , ವಿಷ್ಣುವರ್ಧನ್, ಶಂಕರ್ ನಾಗ್ ಹಾಗೂ ಅಂಬರೀಶ್ ಅವರ ಅಭಿಮಾನಿಗಳು ಸಾಥ್ ಕೊಟ್ಟಿದ್ದು ವಿಶೇಷವಾಗಿತ್ತು. 
 
ನಿರ್ಮಾಪಕ ಸಾರಾ ಗೋವಿಂದ್, ವೀರಕಪುತ್ರ ಶ್ರೀನಿವಾಸ್, ಮಾಲ್ಗುಡಿ ಡೇಸ್ ಖ್ಯಾತಿಯ ಮಂಜುನಾಥ್ ಹಾಗೂ ಅಂಬಿ ಅಭಿಮಾನಿಗಳಾದ ಬೇಲೂರು ಸೋಮಶೇಖರ್ ಹಾಗೂ ರುದ್ರೇಗೌಡ್ರು ಇಡೀ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ಮಾಸ್ಟರ್ ಮಂಜುನಾಥ್ ಫಸ್ಟ್ ಡೇ ಫಸ್ಟ್ ಶೋ ಚಿತ್ರಕ್ಕೆ ಬಹಳ ಬೆಂಬಲವಾಗಿ ನಿಂತಿದ್ದು, ಜಪಾನ್ ಟೋಕಿಯೋದಿಂದ ಟ್ರೇಲರ್ ನೋಡಿ ವಿಡಿಯೋ‌ ಮಾಡಿದ್ದರು. ಅಲ್ಲದೇ‌ ನಿನ್ನೆ ನಡೆದ ಕಾರ್ಯಕ್ರಮದಲ್ಲಿಯೂ ಭಾಗಿ ಗಿರೀಶ್ ವಿಭಿನ್ನ ಪ್ರಯತ್ನಕ್ಕೆ ಸಂಪೂರ್ಣ ಬೆಂಬಲ ಕೊಟ್ಟಿದ್ದಾರೆ.
 
ಟ್ರೇಲರ್ ಬಿಡುಗಡೆ ಬಳಿಕ ನಿರ್ದೇಶಕರಾದ ಗಿರೀಶ್ ಮಾತನಾಡಿ, ನಾನು‌ ಒಂದ್ ಕಥೆ ಹೇಳ್ಲಾ ಸಿನಿಮಾ ಮೂಲಕ ಇಂಡಸ್ಟ್ರೀಗೆ ನಿರ್ದೇಶಕನಾಗಿ ಹೆಜ್ಜೆ ಇಟ್ಟೆ. ಆ ಬಳಿಕ ವಾವ್ ಎಂಬ ಸಿನಿಮಾ ಮಾಡಿದೆ. ಕಳೆದ ವರ್ಷ ಶಾಲಿವಾಹನ ಶಕೆ‌ ಎಂಬ ಚಿತ್ರ ಮಾಡಿದೆ. ಈಗ ಫಸ್ಟ್ ಡೇ‌ ಫಸ್ಟ್ ಶೋ ಎಂಬ ಚಿತ್ರ ಮಾಡಿದ್ದೇನೆ. ನನ್ನ ನಾಲ್ಕು ಸಿನಿಮಾಗಳು ಬೇರೆ ರೀತಿ ಅಭಿರುಚಿ ಚಿತ್ರಗಳು. ಫಸ್ಟ್ ಡೇ ಫಸ್ಟ್ ಶೋ ಕಥೆ ಅನ್ನುವುದಕ್ಕಿಂತ ಇಡೀ ಚಿತ್ರರಂಗವನ್ನು ಪ್ರತಿನಿಧಿಸುವ  ಸೆಲೆಬ್ರೆಷನ್ ಅಂದುಕೊಳ್ಳಬಹುದು. ಕನ್ನಡ ಚಿತ್ರರಂಗರ ಬಗ್ಗೆ ಪಾಸಿಟಿವ್ ಕ್ರಿಯೇಟ್ ಆಗಲಿ ಎಂದು ಮಾಡಿರುವ ಚಿತ್ರ ಇದು ಎಂದರು.
 
ಇದೊಂದು ಚಿತ್ರರಂಗವನ್ನು ಹಾಗೂ ಎಲ್ಲಾ ನಟರ ಅಭಿಮಾನಿಗಳನ್ನ ಒಗ್ಗೂಡಿಸಿ ಚಿತ್ರಮಂದಿರಗಳ  ಪರಂಪರೆಯನ್ನೂ ಚಿತ್ರರಸಿಕರಿಗೆ ತಲುಪಿಸುವ ಈ ಒಂದು ವಿಬಿನ್ನ ಪ್ರಯತ್ನಕ್ಕೆ ಕರ್ನಾಟಕ ವಾಣಿಜ್ಯಮಂಡಳಿ ಪದಾಧಿಕಾರಿಗಳು ಮತ್ತು ಭಾಮಾ ಗಿರೀಶ್ ರವರ ಬೆಂಬಲ ಕೊಟ್ಟಿದ್ದಾರೆ. 
 
ಪ್ರಕಾಶ್ ರೈ ಅದ್ಭುತ ಕಂಠಸಿರಿಯ ನಿರೂಪಣೆಯಲ್ಲಿ ಶುರುವಾಗುವ ಫಸ್ಟ್ ಡೇ ಫಸ್ಟ್ ಶೋ ಟ್ರೇಲರ್ ಆಕರ್ಷಕವಾಗಿದೆ. ಚಿತ್ರದಲ್ಲಿ
ಗಿರೀಶ್ ಜಿ, ಜೀವಿತಾ ವಸಿಷ್ಟ, ರೋಹಿತ್ ಶ್ರೀನಾಥ್, ಅನಿರುದ್ಧ ಶಾಸ್ತ್ರಿ, ಬಿಎಂ ವೆಂಕಟೇಶ್, ರೇಷ್ಮಾ ಲಿಂಗರಾಜಪ್ಪ, ಗಿಲ್ಲಿ ನಟ, ದಶವರ ಚಂದ್ರು, ಹರೀಶ್ ಅರಸು, ಶೋಭಿತಾ ಶಿವಣ್ಣ, ಶ್ಯಾಮ್, ಗಣೇಶ್, ಪ್ರಶಾಂತ್ ವೈಎನ್ ನಟಿಸಿದ್ದಾರೆ.
 
ಗಿರೀಶ್ ಕನಸಿಗೆ ಊರ್ಮಿಳಾ ಕಿರಣ್ ಸಾಥ್ ಕೊಟ್ಟಿದ್ದು, ಚಿತ್ರಕ್ಕೆ ಹಣ ಹಾಕಿದ್ದಾರೆ. ಯೋಗೇಶ್ ಶ್ರೀನಿವಾಸ್, ಮಧು ಕುಮಾರ್, ಸುನಿಲ್ ಸಿಬಿ, ವರುಣ್ ಜೆ ಮತ್ತು ಭಾಸ್ಕರ್ ಸಿಎಸ್ ಸಹ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ. ಉಜ್ವಲ್ ಚಂದ್ರ ಸಂಕಲನ, ರಾಕೇಶ್ ಸಿ ತಿಲಕ್ ಹಾಗೂ ಅರುಣ್ ಕುಮಾರ್ ಛಾಯಾಗ್ರಹಣ , ಸ್ವಾಮಿನಾಥನ್ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ದಿಗ್ಗಜ ಕಲಾವಿದರ ಅಭಿಮಾನಿಗಳಿಂದ ಫಸ್ಟ್ ಡೇ ಫಸ್ಟ್ ಶೋ ಟ್ರೇಲರ್ ರಿಲೀಸ್...ಕನ್ನಡ ಚಿತ್ರರಂಗದ ಸುತ್ತ ಸಾಗುವ ಸಿನಿಮಾ -ಗಿರೀಶ್ ಹೊಸ ಪ್ರಯತ್ನದ ಫಸ್ಟ್ ಡೇ ಫಸ್ಟ್ ಶೋ ಟ್ರೇಲರ್ ರಿಲೀಸ್ - Chitratara.com
Copyright 2009 chitratara.com Reproduction is forbidden unless authorized. All rights reserved.