Chief Editor
Manohar. R (Manu)
Photo Journalist
chitrataramanu@gmail.com
+91 9845549026
ನಾತಿಚರಾಮಿಯ ಗೌರಿ ಮಂಸೋರೆಯ ದೂರ ತೀರ ಯಾನದಲಿ
Posted date: 27 Fri, Jun 2025 08:18:56 AM
ಮಂಸೋರೆ ನಿರ್ದೇಶಿಸಿರುವ ದೂರ ತೀರ ಯಾನ ಸಿನೆಮಾ ಇದೇ ಜುಲೈ 11 ರಂದು ರಾಜ್ಯದಾದ್ಯಂತ ತೆರೆಕಾಣುತ್ತಿದೆ. ಈಗಾಗಲೇ ಬಿಡುಗಡೆ ಆಗಿರುವ ಸಿನೆಮಾದ ಎರಡು ಹಾಡುಗಳು ಜನರ ಮನ್ನಣೆ ಗಳಿಸುತ್ತಿವೆ. ಸಿನೆಮಾ ಆರಂಭದಿಂದ ಇಲ್ಲಿಯವರೆಗೂ ನಾಯಕಿ ಮತ್ತು ನಾಯಕನ ಪಾತ್ರಗಳನ್ನು ಹೊರತುಪಡಿಸಿ ಉಳಿದ ತಾರಾಗಣದ ಪರಿಚಯ ಮಾಡಿಸದೇ ಬಂದಿದ್ದ ಸಿನೆಮಾ ತಂಡ ಈಗ ಉಳಿದ ಪಾತ್ರಗಳ ಪರಿಚಯ ಆರಂಭಿಸಿದ್ದಾರೆ. ಅದರಲ್ಲಿ ಮೊದಲ ಪಾತ್ರ ಗೌರಿ.  ಈ ಪಾತ್ರದಲ್ಲಿ ನಟಿಸಿರುವವರು ಕನ್ನಡದ ಖ್ಯಾತ ನಟಿ ಶೃತಿ ಹರಿಹರನ್.
 
ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಮೈಲಿಗಲ್ಲು ಸ್ಥಾಪಿಸಿದ ಸಿನೆಮಾ “ನಾತಿಚರಾಮಿ”. ಮಂಸೋರೆ ನಿರ್ದೇಶನ ಮಾಡಿದ್ದ ಈ ಸಿನೆಮಾ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಒಂದೇ ಸಿನೆಮಾಗೆ ಐದು ರಾಷ್ಟ್ರ ಪ್ರಶಸ್ತಿಗಳನ್ನು ಪಡೆಯುವ ಮೂಲಕ ಇತಿಹಾಸವನ್ನು ಸೃಷ್ಟಿಸಿತ್ತು. ಇದು ಕೇವಲ ಪ್ರಶಸ್ತಿಯ ಕಾರಣಕಷ್ಟೇ ಅಲ್ಲದೇ ಈ ಸಿನೆಮಾದ ಕಥಾ ವಸ್ತುವೂ ಹೆಚ್ಚು ಚರ್ಚಿತವಾಗಿ, ನೆಟ್ ಫ್ಲಿಕ್ಸ್ ಮೂಲಕ ದೇಶ ವಿದೇಶದ ಸಿನಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಸಿನೆಮಾದಲ್ಲಿ ಗೌರಿ ಪಾತ್ರ ಮಾಡಿದ್ದ ಶೃತಿ ಹರಿಹರನ್ ಮತ್ತೆ ಮಂಸೋರೆ ಅವರ ಹೊಸ ಸಿನೆಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ . ಅವರ ಪಾತ್ರ ಪರಿಚಯದ ವಿಡಿಯೋ ಒಂದನ್ನು ಚಿತ್ರತಂಡ ಬಿಡುಗಡೆಗೊಳಿಸಿದೆ.

 ನಾತಿಚರಾಮಿಯ ದಿಟ್ಟ ಮಹಿಳೆ `ಗೌರಿ` ಕನ್ನಡ ಚಿತ್ರರಂಗದಲ್ಲೇ ಒಂದು ಐಕಾನಿಕ್ ಪಾತ್ರ . ಕನ್ನಡ ಸಿನೆಮಾಗಳಲ್ಲಿ ನಿರ್ದೇಶಕರು ತಮ್ಮದೇ ಸಿನೆಮಾದ ಪಾತ್ರಗಳನ್ನು ಮತ್ತೊಂದು ಸಿನೆಮಾದಲ್ಲಿ ತರುವುದರ ಮೂಲಕ ತಮ್ಮದೇ ಆದ ಸಿನೆಮಾ ಪ್ರಪಂಚವನ್ನು ಸೃಷ್ಟಿಸಿರುವುದು ಅಪರೂಪ. ಅಂತಹ ಅಪರೂಪದ ಜಗತ್ತನ್ನು ಮಂಸೋರೆಯವರು ತಮ್ಮ ದೂರ ತೀರ ಯಾನದಲ್ಲಿ ಸೃಷ್ಟಿರುವ ಪ್ರಯತ್ನವನ್ನು ಈ ವಿಡಿಯೋದಲ್ಲಿ ಕಾಣಬಹುದು. ಇಂತಹ ಅಚ್ಚರಿ ನೀಡಿರುವ ಮಂಸೋರೆ ಮತ್ತು ಗೌರಿ ಕಾಂಬಿನೇಶನ್ ತೆರೆಯ ಮೇಲೆ ಯಾವ ರೀತಿ ಮ್ಯಾಜಿಕ್ ಮಾಡಲಿದ್ದಾರೆ ಎಂಬ ಕುತೂಹಲ ಅವರ ಪ್ರೇಕ್ಷಕ ವರ್ಗದಲ್ಲಿ ದೂರ ತೀರ ಯಾನ ಸಿನೆಮಾದ ಬಗ್ಗೆ ಕುತೂಹಲ ಹೆಚ್ಚಿಸುವಂತೆ ಮಾಡಿದೆ.
 
ದೂರ ತೀರ ಯಾನ ಸಿನೆಮಾ ಸೆನ್ಸಾರ್ ಪೂರ್ಣಗೊಳಿಸಿ ಯು/ಎ ಪ್ರಮಾಣ ಪತ್ರವನ್ನು ಪಡೆದಿದ್ದು ಪ್ರಚಾರ ಕಾರ್ಯಗಳಲ್ಲಿ ನಿರತವಾಗಿದೆ, ಕನ್ನಡದ ಖ್ಯಾತ ನಟರಾದ ಕಿಚ್ಚ ಸುದೀಪ್ ರವರು ಜೂನ್ 28 ಶನಿವಾರ, ಬೆಳಗ್ಗೆ 11 ಗಂಟೆಗೆ ಡಿಜಿಟಲ್ ಮೂಲಕ  ಸಿನೆಮಾದ ಟ್ರೈಲರ್ ಅನಾವರಣಗೊಳಿಸಲಿದ್ದಾರೆ.

 

Kannada Cinema's Latest Wallpapers
Kannada Cinema's Latest Videos
Kannada Movie/Cinema News - ನಾತಿಚರಾಮಿಯ ಗೌರಿ ಮಂಸೋರೆಯ ದೂರ ತೀರ ಯಾನದಲಿ - Chitratara.com
Copyright 2009 chitratara.com Reproduction is forbidden unless authorized. All rights reserved.