Chief Editor
Manohar. R (Manu)
Photo Journalist
chitrataramanu@gmail.com
+91 9845549026
ಹಾರರ್ ಥ್ರಿಲ್ಲರ್ ಪೈನಾ
Posted date: 27 Fri, Jun 2025 08:23:40 AM
1800ಕ್ಕೂ ಹೆಚ್ಚು ಚಿತ್ರಗಳಿಗೆ ಸಾಹಸ ಸಂಯೋಜಕರಾಗಿ ಸೇವೆ ಸಲ್ಲಿಸಿರುವ ಕೌರವ ವೆಂಕಟೇಶ್ `ನೋ ಕೋಕೇನ್` ಚಿತ್ರದ ಮೂಲಕ ನಿರ್ದೇಶಕರಾಗಿದ್ದು, ಈಗ ಪೈನಾ ಸಿನಿಮಾಕ್ಕೆ ಚಿತ್ರಕಥೆ, ಸಾಹಸ ಸಂಯೋಜಿಸಿ, ಎರಡನೇ ಬಾರಿ ನಿರ್ದೇಶನದ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಕಾನಿಷ್ಕ ಪಿಕ್ಚರ‍್ಸ್ ಬ್ಯಾನರ್ ಅಡಿಯಲ್ಲಿ ಆರ್.ಕನಿಷ್ಕ ಮತ್ತು ಆರ್.ವೇದಿಶ್ ಬಂಡವಾಳ ಹೂಡುತ್ತಿದ್ದಾರೆ. ಕೌರವ ವೆಂಕಟೇಶ್ ಶಿಷ್ಯರಾಗಿದ್ದ ಡಿ.ಎಸ್.ಎಸ್.ಗೋವಿಂದರಾಜು ದೇವನಹಳ್ಳಿ ಹಾಗೂ ಲಾಫಿಂಗ್ ಪೀಕಾಕ್ ಪ್ರೊಡಕ್ಷನ್ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ.
 
ಗುರುವಾರದಂದು ಸಾಣೆಗುರನಹಳ್ಳಿಯ ಶ್ರೀ ಗಣೇಶ ದೇವಸ್ಥಾನದಲ್ಲಿ ಮುಹೂರ್ತ ಸಮಾರಂಭ ನಡೆಯುತು. ಜಂಬದ ಹುಡುಗಿ ಖ್ಯಾತಿ, ಡೇರಿಂಗ್ ಸ್ಟಾರ್ ಪ್ರಿಯಾಹಾಸನ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಡಾ.ಲೀಲಾಮೋಹನ್-ಚಿರಾಗ್ ಚಾಲುಕ್ಯ ನಾಯಕರು. ಮಧುಶ್ರೀ-ತೃಪ್ತಿಬಸವರಾಜು ನಾಯಕಿಯರು. ಮುಸ್ಲಿಂ ವೇಷಧಾರಿಯಾಗಿ ಯೋಗರಾಜಭಟ್, ವಾಸ್ತುತಜ್ಞನಾಗಿ ರಂಗಾಯಣರಘು, ತಂದೆಯಾಗಿ ಸಾಧುಕೋಕಿಲ ಮುಂತಾದವರು ನಟಿಸುತ್ತಿದ್ದಾರೆ.
 
ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕರು `ಪೈನಾ` ಮಗುವಿನ ಹೆಸರು. ಇದರಿಂದಲೇ ಚಿತ್ರವು ಶುರುವಾಗಿ ಕೊನೆಗೆ ಏನಾಗುತ್ತದೆ ಎಂಬುದನ್ನು ತೋರಿಸಲಾಗುತ್ತಿದೆ. ಹಾರರ್, ಥ್ರಿಲ್ಲರ್ ಅಂಶಗಳು ಹೆಚ್ಚಾಗಿ ಇರುವುದರಿಂದ ಸಣ್ಣ ಎಳೆ ಬಿಟ್ಟುಕೊಟ್ಟರೂ ಕಥೆಯ ಸಾರಾಂಶ ತಿಳಿಯುತ್ತದೆ. ಅದರಿಂದ ಕುತೂಹಲವನ್ನು ಕಾಯ್ದಿರಿಸಲಾಗಿದೆ. ಚಿಕ್ಕಮಗಳೂರು, ಬೆಂಗಳೂರು ಸುತ್ತಮುತ್ತ ಒಂದೇ ಹಂತದಲ್ಲಿ ಚಿತ್ರೀಕರಣ ಮುಗಿಸಲು ಯೋಜನೆ ಹಾಕಲಾಗಿದೆ. ಐದು ಆಕ್ಷನ್, ಎರಡು ಹಾಡುಗಳು ಇರಲಿದೆ. ಶೇಕಡ 50ರಷ್ಟು ಗ್ರಾಫಿಕ್ಸ್ ಇರುವುದು ವಿಶೇಷ. ಮಾಧ್ಯಮದವರ ಪ್ರೋತ್ಸಾಹ ಬೇಕೆಂದು ಕೌರವ ವೆಂಕಟೇಶ್ ಕೋರಿಕೊಂಡರು.
 
ಸಂಗೀತ ಕಲ್ಕಿ ಅಭಿಷೇಕ್, ಛಾಯಾಗ್ರಹಣ ಮುಂಜಾನೆ ಮಂಜು, ಕಥೆ ವಿ.ರವಿಚಂದ್ರನ್, ಸಂಕಲನ ಲೋಹಿತ್, ಸಾಹಿತ್ಯ ಭರ್ಜರಿ ಚೇತನ್‌ಕುಮಾರ್-ವಿಕ್ರಂ  ಅವರದಾಗಿದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಹಾರರ್ ಥ್ರಿಲ್ಲರ್ ಪೈನಾ - Chitratara.com
Copyright 2009 chitratara.com Reproduction is forbidden unless authorized. All rights reserved.