Chief Editor
Manohar. R (Manu)
Photo Journalist
chitrataramanu@gmail.com
+91 9845549026
ಅವನಿರಬೇಕಿತ್ತು... ಇಬ್ಬರಿಗೂ ಒಂದೇ ಹೆಸರು ತಂದಿಟ್ಟ ಫಜೀತಿ..
Posted date: 28 Sat, Jun 2025 11:25:51 AM
ಹಾಡುಗಳಿಂದಲೇ ಕ್ಯೂರಿಯಾಸಿಟಿ ಹೆಚ್ಚಿಸಿದ ಚಿತ್ರ ಅವನಿರಬೇಕಿತ್ತು.  ಅಶೋಕ್ ಸಾಮ್ರಾಟ್ ನಿರ್ದೇಶನದ ಈ ಚಿತ್ರದಲ್ಲಿ ಒಂದೇ ಹೆಸರಿರುವ, ಅವರ ತಂದೆಯ ಹೆಸರೂ ಒಂದೇ ಆಗಿರುವ  ವ್ಯಕ್ತಿಗಳಿಬ್ಬರು ಎದುರಿಸುವ ಕಾನೂನಾತ್ಮಕ ತೊಡಕುಗಳು, ತೊಂದರೆ, ಸಮಸ್ಯೆಗಳ ಬಗ್ಗೆ ಕಥಾಹಂದರ ಹೆಣೆಯಲಾಗಿದೆ, ವೀಕ್ಷಕರಲ್ಲಿ  ಚಿತ್ರದ ಕೊನೆಯವರೆಗೂ  ಕುತೂಹಲ ಕಾಯ್ದುಕೊಂಡು ಹೋಗುವಲ್ಲಿ ನಿರ್ದೇಶಕರು ಗೆದ್ದಿದ್ದಾರೆ.  
 
ಚಿತ್ರದ  ನಾಯಕ ದೇವು (ಭರತ್)  ಹಾಗೂ ನಾಯಕಿ ಭವ್ಯ(ಸೌಮ್ಯ) ಮಾಕೆಂಟಿಂಗ್ ಕಂಪನಿಯೊಂದರಲ್ಲಿ ಮಿಸ್ಟ್ರಿ ಶಾಪಿಂಗ್ ಮಾಡುವ ಕೆಲಸಕ್ಕೆ ಜಾಯಿನ್ ಆಗುತ್ತಾರೆ, ಅದರ ಮಾಲೀಕ ಭಗವಾನ್(ಜಯಸಿಂಹ) ಇವರಿಬ್ಬರಿಗೂ ಕೆಲವೊಂದು ಶಾಪ್‌ಗಳಿಗೆ ಹೋಗಿ ಮಿಸ್ಟರಿ ಶಾಪಿಂಗ್ ಮಾಡಿಕೊಂಡು ಬರುವ ಕೆಲಸ ವಹಿಸುತ್ತಾರೆ, ಹೀಗೇ ಇವರಿಬ್ಬರೂ ಒಮ್ಮೊಮ್ಮೆ ದಂಪತಿಗಳಾಗಿ, ಒಮ್ಮೊಮ್ಮೆ ಪ್ರೇಮಿಗಳಾಗಿ, ಕೆಲವೊಮ್ಮೆ ಪೋಷಕರಾಗಿಯೂ ಶಾಪ್‌ಗಳಿಗೆ ಭೇಟಿ ಕೊಟ್ಟು ಶಾಪಿಂಗ್ ಮಾಡುತ್ತಾರೆ, ಹೀಗೇ ಇವರಿಬ್ಬರ ನಡುವೆ ಆದ ಪರಿಚಯ ಸ್ನೇಹವಾಗಿ, ನಂತರ ಪ್ರೇಮಕ್ಕೆ ತಿರುಗುತ್ತದೆ,  ಇಬ್ಬರ ನಡುವೆ ಒಂದೆರಡು ಡ್ರೀಮ್ ಸಾಂಗ್ ಕೂಡ ಆಗುತ್ತದೆ, ಹೀಗೇ ಸಾಗುವ ಕಥೆಯಲ್ಲಿ ಹಣಕಾಸಿನ ಸಮಸ್ಯೆಯೊಂದು ಉದ್ಭವವಾಗುತ್ತದೆ, ಅದರಲ್ಲಿ ಸಿಕ್ಕಿಹಾಕಿಕೊಂಡ ನಾಯಕ ತಾನು ಮಾಡಿರದ ಲಕ್ಷಾಂತರ ಸಾಲಕ್ಕೆ ಹೊಣೆಗಾರನಾಗಬೇಕಾಗುತ್ತದೆ, ಇದರ ಹಿಂದೆ ಯಾರಿದ್ದಾರೆ, ಹೇಗೆ ಮಾಡಿದ್ದಾರೆ  ಎಂದು ನಾಯಕ ದೇವು ಹುಡುಕುತ್ತ ಹೋದಂತೆ ಆತನಿಗೆ ದೊಡ್ಡ ಆಶ್ಚರ್ಯ ಕಾದಿರುತ್ತದೆ, ಆತ ಹುಡುಕುತ್ತಿರುವ ವ್ಯಕ್ತಿ ಬೇರಾರೂ ಆಗಿರದೆ, ತನ್ನನ್ನು  ಪ್ರೀತಿಸುವ ಸಹೋದ್ಯೋಗಿ ಭವ್ಯಳೇ ಆಗಿರುತ್ತಾಳೆ,  ಇದರಿಂದ ಸಿಟ್ಟಿಗೆದ್ದ ದೇವು ಆಕೆಯನ್ನು ರಹಸ್ಯ ಕೋಣೆಯಲ್ಲಿ  ಬಂಧಿಸಿಡುತ್ತಾನೆ, ಆಕೆಯನ್ನು ಹಣಕೊಟ್ಟು ಬಿಡಿಸಿಕೊಂಡು ಹೋಗಲು ಮತ್ತೊಬ್ಬ ಮಹಿಳೆಯ ಆಗಮನವೂ ಆಗುತ್ತದೆ, ಆ ನಂತರ ಚಿತ್ರದ ಕಥೆ ಬೇರೊಂದು  ಅನಿರೀಕ್ಷಿತ ತಿರುವು ಪಡೆದುಕೊಳ್ಳುತ್ತದೆ.
 
ಇದೇನು ಕಥೆ ಎಲ್ಲಿಂದ ಎಲ್ಲೆಲ್ಲಿಗೋ ಹೋಗುತ್ತಿದೆಯಲ್ಲಾ ಎಂದು ನೋಡುತ್ತಿದ್ದ ಪ್ರೇಕ್ಷಕ  ಕನ್ ಫ್ಯೂಸ್ ಆಗುತ್ತಿರುವಾಗ ನಿರ್ದೇಶಕರು ಅದೆಲ್ಲಕ್ಕೂ ಉತ್ತರ ನೀಡುತ್ತಾ ಹೋಗುತ್ತಾರೆ, ಈ ಕೋಟಿ ವ್ಯವಹಾರದ ಹಿಂದಿರುವ ನಿಜವಾದ  ಅಪರಾಧಿ ಯಾರೆಂಬುದನ್ನು ಚಿತ್ರದ ಕ್ಲೆ`ಮ್ಯಾಕ್ಸ್ ನಲ್ಲಿ ಹೊರಗೆಳೆಯುತ್ತಾರೆ,  ಚಿತ್ರ ನೋಡೋ  ಪ್ರೇಕ್ಷಕರಿಗೂ ಒಂಥರಾ ಶಾಕ್ ನೀಡುತ್ತಾರೆ. ಅಮಾಯಕ ಎಂದುಕೊಂಡಿದ್ದ ವ್ಯಕ್ತಿ ಇಲ್ಲಿ ಕಿಂಗ್‌ಪಿನ್ ಆಗಿಬಿಡುತ್ತಾನೆ, ನಿಜಕ್ಕೂ ಆತ ಯಾರೆಂಬುದನ್ನು, ಆತ ಏಕೆ ಈ ಪ್ರೇಮಿಗಳನ್ನು ವಂಚಿಸಿದ ಎಂಬುದನ್ನು  ನೀವು ತಿಳಿದುಕೊಳ್ಳಬೇಕೆಂದರೆ  ಇಂದೇ ಥೇಟರಿಗೆ ಹೋಗಿ ಅವನಿರಬೇಕಿತ್ತು ಚಿತ್ರ ವೀಕ್ಷಿಸಿ, ನಿಮಗೆ ಗೊತ್ತಿಲ್ಲದ ಬ್ಯಾಂಕ್  ವಂಚನೆಯ ಮತ್ತೊಂದು ಪ್ರಕರಣ ಇಲ್ಲಿ ಅನಾವರಣವಾಗುತ್ತದೆ, ಆದರೆ ನೀವು ಚಿತ್ರದ ಅಂತ್ಯದವರೆಗೆ ಕಾಯಬೇಕಷ್ಟೇ. ಇಬ್ಬರ ಹೆಸರು ತೀರ್ಥ ಆಗಿರುವುದೇ ಅಷ್ಟೆಲ್ಲ ಅನರ್ಥಗಳಿಗೆ ಕಾರಣವಾಗಿರುತ್ತದೆ,  ಇಲ್ಲಿ ನಿರ್ದೇಶಕರ ಆಶಯ, ಹೇಳಹೊರಟಿರುವ ವಿಷಯ ಮಹತ್ವಪೂರ್ಣವಾಗಿದೆ, ಆದರೆ ಅದನ್ನು ಮತ್ತಷ್ಟು ಪರಿಣಾಮಕಾರಿಯಾಗಿ  ಹೇಳೋ ಅವಕಾಶವೂ ಇತ್ತು.  
 
ಸೀರಿಯಸ್ ವಿಷಯವನ್ನು ಹಾಸ್ಯಮಿಶ್ರಿತವಾಗಿ ಹೇಳಲು ಹೋಗಿ ಪ್ರೇಕ್ಷಕರ ಸಹನೆ ಪರೀಕ್ಷಿಸಿದ್ದಾರೆ, ಇನ್ನು ನಾಯಕ ಭರತ್ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡಿದ್ದಾರೆ. ನಾಯಕಿ ಸೌಮ್ಯ ಕೂಡ ತೆರೆಮೇಲೆ ಮುದ್ದು ಮುದ್ದಾಗಿ ಕಾಣಿಸಿಕೊಂಡಿದ್ದಾರೆ, ಮಾರ್ಕೆಟಿಂಗ್ ಕಂಪನಿಯ ಓನರ್  ಭಗವಾನ್ ಪಾತ್ರವನ್ನು ಜಯಸಿಂಹ ಸಮರ್ಥವಾಗಿ ನಿರ್ವಹಿಸಿದ್ದಾರೆ. ಅಂದಕಾಲತ್ತಿಲ್, ಇಂದ ಕಾಲತ್ತಿಲ್  ಹಾಗೂ  ಓ ಹೃದಯಾ  ಹಾಡುಗಳೇ ಇಡೀ ಚಿತ್ರದ ಹೈಲೈಟ್ ಎನ್ನಬಹುದು. ನಿರ್ದೇಶಕರು ತಮಗಾದ ಅನುಭವವನ್ನೇ  ಚಿತ್ರದ ಕಾನ್ಸೆಪ್ಟ್ ಆಗಿಸಿದ್ದಾರೆ. ಈ‌ಮೂಲಕ ಪ್ರೇಕ್ಷಕರಿಗೆ ಜಾಗೃತರಾಗಿರಿ ಎಂಬ ಎಚ್ಚರಿಕೆಯನ್ನೂ ಸಹ ನೀಡಿದ್ದಾರೆ,  ಹಂಸಲೇಖ  ಅವರ ಶಿಷ್ಯ ಲೋಕಿ ತವಸ್ಯಾ  ಅವರ ಹಾಡುಗಳು ಇಂಪಾಗಿವೆ. ಇನ್ನು  ದೇವರಾಜ್ ಪೂಜಾರಿ  ಅವರ ಕ್ಯಾಮೆರಾ ವರ್ಕ್ ಗಮನ ಸೆಳೆಯುತ್ತದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಅವನಿರಬೇಕಿತ್ತು... ಇಬ್ಬರಿಗೂ ಒಂದೇ ಹೆಸರು ತಂದಿಟ್ಟ ಫಜೀತಿ.. - Chitratara.com
Copyright 2009 chitratara.com Reproduction is forbidden unless authorized. All rights reserved.