ದಿ.ಸೌಂದರ್ಯ ಜಗದೀಶ್ ಅವರ ಪುತ್ರ ಮಾಸ್ಟರ್ ಸ್ನೇಹಿತ್ ಇದೀಗ ನಾಯಕನಾಗಿ ಸ್ಟೈಲಿಶ್ ಆಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರೆ . ಇಂದು ಸ್ನೇಹಿತ್ ಹುಟ್ಟುಹಬ್ಬ.
ಇದೇ ಸಂದರ್ಭದಲ್ಲಿ ಅವರು ತಾವು ನಾಯಕನಾಗುತ್ತಿರುವ ಹೊಸ ಸುದ್ದಿಯನ್ನು ಕೊಟ್ಟಿದ್ದಾರೆ.
ತಮ್ಮ ಮಗನನ್ನು ಹೀರೋ ಮಾಡಬೇಕು ಎನ್ನುವುದು ಅವರ ತಂದೆ ಜಗದೀಶ್ ಅವರ ದೊಡ್ಡ ಕನಸಾಗಿತ್ತು. ಸ್ನೇಹಿತ್ ಚಿಕ್ಕವನಿದ್ದಾಗಲೇ ತಮ್ಮದೇ ಬ್ಯಾನರ್ ಮೂಲಕ ಅಪ್ಪು ಪಪ್ಪು ಹಾಗೂ ಸಚಿನ್! ತೆಂಡೂಲ್ಕರ್ ಅಲ್ಲಾ ಸ್ನೇಹಿತರು ಚಿತ್ರಗಳಲ್ಲಿ ಬಾಲ ಕಲಾವಿದನಾಗಿ ಪರಿಚಯಿಸಿದ್ದರು.
ಸ್ನೇಹಿತರು ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಅಭಿನಯಿಸಿದ್ದರು. ಆದರೆ ತಮ್ಮ ಕನಸನ್ನು ನನಸು ಮಾಡುವ ಮೊದಲೇ ಇಹಲೋಕ ತ್ಯಜಿಸಿದ್ದರು. ಇದೀಗ ತಂದೆಯ ಕನಸನ್ನು ನನಸು ಮಾಡಲು ಸ್ನೇಹಿತ್ ಹೊರಟಿದ್ದಾರೆ. ಸ್ನೇಹಿತ್ ತಾಯಿ ಹಾಗೂ ಸಹೋದರಿ ಈತನ ಪ್ರಗತಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಈಗಾಗಲೇ ಆಕ್ಟಿಂಗ್, ಆಕ್ಷನ್, ಡಾನ್ಸ್, ಸೇರಿದಂತೆ ಹೀರೋ ಆಗಲು ಬೇಕಾದ ಎಲ್ಲಾ ತಯಾರಿಯನ್ನೂ ಮಾಡಿಸಿದ್ದಾರೆ. ಶೀಘ್ರದಲ್ಲೇ ಸ್ನೇಹಿತ್ ನಾಯಕತ್ವದ ಹೊಸ ಚಿತ್ರ ಪ್ರಾರಂಭವಾಗಲಿದೆ.