Chief Editor
Manohar. R (Manu)
Photo Journalist
chitrataramanu@gmail.com
+91 9845549026
ವಿರಾಟ ಬಿಲ್ವ ``ಲವ್ ಮ್ಯಾಟ್ರು`` ಚಿತ್ರಕ್ಕೆ ಶುಭಕೋರಿದ ನಟ ಅಭಿಜಿತ್. ಆಗಸ್ಟ್ 01ರಂದು ಚಿತ್ರ ತೆರೆಗೆ
Posted date: 26 Sat, Jul 2025 08:51:51 AM
ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಪ್ರೇಮಮಯ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಬಹಳಷ್ಟು ಪ್ರೀತಿ , ಪ್ರೇಮದ ಚಿತ್ರಗಳು ಬಂದಿದ್ದು , ಎರಡು ಕಾಲಘಟ್ಟಗಳ ಕಥಾನಕ ಒಳಗೊಂಡಿರುವ ಈ "ಲವ್ ಮ್ಯಾಟ್ರು"  ಚಿತ್ರ ಇದೆ ಆಗಸ್ಟ್ 1 ರಂದು  ರಾಜ್ಯಾದ್ಯಂತ ಬಿಡುಗಡೆಯಾಗಲು ಸಿದ್ಧವಾಗಿದೆ. ಈ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭವನ್ನು ಜಿಟಿ ಮಾಲ್ ನಲ್ಲಿರುವ ಎಂ. ಎಂ. ಬಿ ಲೆಗಸಿಯಲ್ಲಿ  ಚಿತ್ರತಂಡ ಆಯೋಜನೆ ಮಾಡಿದ್ದು , ಪತ್ರಿಕಾಗೋಷ್ಠಿಗೂ ಮುನ್ನ ಚಿತ್ರದ ಮೂರು ಹಾಡುಗಳನ್ನು ಪ್ರದರ್ಶನ ಮಾಡಲಾಯಿತು. ಇನ್ನು ಚಿತ್ರರಂಗದ ಹಿರಿಯ ನಟ ಅಭಿಜಿತ್ ಆಗಮಿಸಿ ಟ್ರೇಲರ್ ರಿಲೀಸ್ ಮಾಡುವ ಮೂಲಕ ತಂಡಕ್ಕೆ ಶುಭ ಕೋರಿದರು. ನಂತರ ಮಾತನಾಡುತ್ತಾ ಯುವ ಪ್ರತಿಭೆಗಳ ಚಿತ್ರಗಳು ಪ್ರೇಕ್ಷಕರನ್ನ ಸೆಳೆಯುತ್ತಿದೆ. ಅದರಲ್ಲೂ ಮಹಿಳಾ ನಿರ್ಮಾಪಕಿ ನಿರ್ಮಿಸಿ , ಯುವ ನಟ ಅಭಿನಯಿಸಿ ಜೊತೆಗೆ ನಿರ್ದೇಶನ ಮಾಡಿರುವ ಈ ಲವ್ ಮ್ಯಾಟ್ರು ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ್ದು ಖುಷಿಯಿದೆ. ಪ್ರೀತಿಯ ಸಿನಿಮಾ ಗೆದ್ದೇ ಗೆಲ್ಲುತ್ತದೆ. ಈ ಚಿತ್ರ ಯಶಸ್ಸನ್ನ ಕಾಣಲಿ ಎಂದು ಶುಭವನ್ನು ಹಾರೈಸಿದರು.
 
ಈ ಚಿತ್ರದ ನಟ ಹಾಗೂ ನಿರ್ದೇಶಕ ವಿರಾಟ ಬಿಲ್ವ ಮಾತನಾಡುತ್ತ ಒಂದು ವಿಭಿನ್ನ ಪ್ರೇಮ ಕಥೆಯನ್ನ ತೆರೆಯ ಮೇಲೆ ತೋರಿಸುವುದು ನಮ್ಮ ಉದ್ದೇಶ , ಗೆಸ್ ಮಾಡಿದಂತೆ ಚಿತ್ರ ಇರುವುದಿಲ್ಲ. ನಾನು ಈ ಮುಂಚೆ ರಂಗಭೂಮಿ , ಸೀರಿಯಲ್ , ಕಿರುಚಿತ್ರ ಹಾಗೂ ಸಹಾಯಕ ನಿರ್ದೇಶಕನಾಗಿ ಕೆ .ಎಂ. ಚೈತನ್ಯ ,  ಸುಕ್ಕಾ ಸೂರಿ, ಪ್ರಶಾಂತ್ ನೀಲ್ ಅವರ ಸಿನಿಮಾಗಳಲ್ಲಿ ಕೆಲಸ ಮಾಡಿದಂತಹ ಅನುಭವವಿದೆ. 
ಹಾಗೆಯೇ  ಕಡ್ಡಿಪುಡಿ ಚಿತ್ರದಲ್ಲಿ ನಟನೆ ಮಾಡಿ, ಚಿತ್ರರಂಗದ ಬಗ್ಗೆ ಒಂದಷ್ಟು ತಿಳಿದುಕೊಂಡು ಒಂದು ಪ್ರೇಮ ಕಥೆಯನ್ನು ಸಿದ್ಧಪಡಿಸಿಕೊಂಡು ನಟನೆ ಹಾಗೂ ನಿರ್ದೇಶನ ಮಾಡುವ ಮೂಲಕ ಲವ್ ಮ್ಯಾಟ್ರು ಚಿತ್ರವನ್ನ  ಪ್ರೇಕ್ಷಕರ ಮುಂದೆ ತರುತ್ತಿದ್ದೇನೆ. ಪ್ಯೂರ್ ಲವ್ , ಅಟ್ರಾಕ್ಷನ್ ಲವ್ ಎರಡು ಈ ಚಿತ್ರದಲ್ಲಿ ಸಿಗಲಿದೆ. ಬೆಂಗಳೂರು ಹಾಗೂ ಕುದುರೆಮುಖದಲ್ಲಿ ಚಿತ್ರೀಕರಣ ಮಾಡಿರುವ ಈ ಚಿತ್ರ ಆಗಸ್ಟ್ 1ರಂದು ಬಿಡುಗಡೆಯಾಗಲಿದೆ ಎಂದರು. ಇನ್ನು ಬಹಳ ದೈರ್ಯದಿಂದ ಮುನ್ನುಗ್ಗಿ ಈ ಚಿತ್ರವನ್ನು ನಿರ್ಮಿಸಿರುವ ನಿರ್ಮಾಪಕಿ ವಂದನಾ ಪ್ರಿಯ ಮಾತನಾಡುತ್ತ ಈ ಕಥೆಯನ್ನು ನಾನು ನಿರ್ದೇಶಕರು ಸೇರಿ ಮಾಡಿದ್ದು , ಇದು ನನ್ನ ಸುತ್ತಮುತ್ತ ಗಮನಿಸಿದಂತಹ ಕೆಲವು ಪ್ರೇಮ ಪ್ರಕರಣಗಳ ಕಂಟೆಂಟ್ ಒಳಗೊಂಡಿದೆ. ಈ ಲವ್ ಕಂಟೆಂಟ್ ಚಿತ್ರ ಎಲ್ಲರಿಗೂ ಇಷ್ಟ ಆಗುತ್ತೆ. ಒಂದಷ್ಟು ಸಮಸ್ಯೆ ಇದ್ದರೂ ಅದನ್ನ ನಿಭಾಯಿಸಿ ಮುಂದೆ ಬಂದಿದ್ದೇವೆ. ಅದೇ ರೀತಿ ಕಲಾವಿದರು , ಟೆಕ್ನಿಕಲ್ ಟೀಂ ಕೂಡ ತುಂಬ ಸಹಕಾರ ನೀಡಿದ್ದಾರೆ. ನಮ್ಮ ಚಿತ್ರಕ್ಕೆ ಮಾಧ್ಯಮದವರ ಪ್ರೋತ್ಸಾಹ , ಬೆಂಬಲ ಇರಲಿ ಎಂದು ಕೇಳಿಕೊಂಡರು.  ಸಿಲ್ವರಿಥಮ್ PRODUCTION ಮತ್ತು INK ಸಿನಿಮಾಸ್ ಸಂಸ್ಥೆಯ ಅಡಿಯಲ್ಲಿ ಸಿದ್ಧವಾಗಿರುವ ಈ ಚಿತ್ರದ ನಿರ್ಮಾಣಕ್ಕೆ ಉಮಾ ನಾಗರಾಜ್ , ಪ್ರಭು ಕುಮಾರ್ ಸಾಥ್ ನೀಡಿದ್ದಾರೆ. 
 
ಈ ಚಿತ್ರದ ನಟಿ ಸೋನಾಲ್ ಮಂಟೆರೋ ಮಾತನಾಡುತ್ತ ನಮ್ಮ ಚಿತ್ರದ ನಿರ್ಮಾಪಕಿ ಬಹಳ ಧೈರ್ಯವಂತೆ, ಅದಕ್ಕೆ ನಿರ್ದೇಶಕರ ಸಪೋರ್ಟ್ ಕೂಡ ಚೆನ್ನಾಗಿತ್ತು, ನನ್ನ ಪಾತ್ರ ಕೂಡ ಬಹಳ ಸೊಗಸಾಗಿದೆ. ಲವ್ ಮ್ಯಾಟ್ರು ಟೈಟಲ್ಲೇ ಹೇಳುವಂತೆ ಲವ್ ಕಂಟೆಂಟ್ ಬಹಳ ಕುತೂಹಲಕಾರಿ ಯಾಗಿದೆ. ನಿಮ್ಮ ಬೆಂಬಲ ಈ ಚಿತ್ರಕ್ಕೆ ಇರಲಿ ಎಂದರು. ಅದೇ ರೀತಿ ಮತ್ತೊಂದು ಪ್ರಮುಖ ಪಾತ್ರ ಮಾಡಿರುವ ಅಚ್ಚುತ್ ಕುಮಾರ್ ಮಾತನಾಡುತ್ತ ಪ್ರೀತಿಯ ಕಂಟೆಂಟ್ ಇರುವ ಚಿತ್ರಗಳು ಪ್ರೇಕ್ಷಕರನ್ನ ಬೇಗ ಸೆಳೆಯುತ್ತದೆ. ಈ ಸಿನಿಮಾದಲ್ಲೂ ಎರಡು ಟ್ರ್ಯಾಕ್ ವಿಭಿನ್ನವಾಗಿದೆ ಎಂದರು. ಅದೇ ರೀತಿ ಮತ್ತೊಬ್ಬ ನಟಿ ಅನಿತಾ ಭಟ್ ಮಾತನಾಡುತ್ತ ಇದು ಎರಡು ಕಾಲಘಟ್ಟಗಳ ಪಯಣ ಇರುವ ಚಿತ್ರ. ಅಚ್ಚುತ್ ಕುಮಾರ್ , ಸುಮನ್ ರಂಗನಾಥ್ ಹಾಗೂ ನನ್ನ ಕಾಂಬಿನೇಷನ್ ಬಹಳ ವಿಭಿನ್ನವಾಗಿದೆ. ಹೆಚ್ಚು ಹೇಳುವಂತಿಲ್ಲ ಸಿನಿಮಾ ನೋಡಿ ಎಂದರು. ಮತ್ತೊಬ್ಬ ನಟಿ ಸುಶ್ಮಿತಾ ಗೋಪಿನಾಥ್ ಬಂದಿರಲಿಲ್ಲ. ಇನ್ನು ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ಟ್ರ್ಯಾಕ್ ಸೋಲಮಾನ್ ಸಂಗೀತ ನೀಡಿದ್ದು, ಛಾಯಾಗ್ರಹಕ ಪರಮ್ ವೇದಿಕೆ ಮೇಲಿದ್ದು ತಮ್ಮ ಅನುಭವಗಳನ್ನು ಹಂಚಿಕೊಂಡರು. ಈ ಚಿತ್ರಕ್ಕೆ ರಮಿತ್ ಎಲಕ್ಕಿ ಸಿನಿಮಾ ಪ್ರಚಾರಕರ್ತರಾಗಿದ್ದು , ಬಾಗುರ್ ಟಾಕೀಸ್ ಮೂಲಕ ಪ್ರಶಾಂತ್ ರಾಜ್ಯದಾದ್ಯಂತ  ನೂರು ಚಿತ್ರಮಂದಿರಗಳಲ್ಲಿ ಆಗಸ್ಟ್1 ರಂದು ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ವಿರಾಟ ಬಿಲ್ವ ``ಲವ್ ಮ್ಯಾಟ್ರು`` ಚಿತ್ರಕ್ಕೆ ಶುಭಕೋರಿದ ನಟ ಅಭಿಜಿತ್. ಆಗಸ್ಟ್ 01ರಂದು ಚಿತ್ರ ತೆರೆಗೆ - Chitratara.com
Copyright 2009 chitratara.com Reproduction is forbidden unless authorized. All rights reserved.