ವಾಲೀಸ್ ಸಂತೋಷ್ ನಿರ್ದೇಶನದ ಜೊತೆ ನಟನೆ,ನೃತ್ಯ ನಿರ್ದೇಶನ ಮಾಡಿರುವ " ಮಗ್ನೆ" ಚಟ್ಟಂತ ಹೊಡ್ರೆ ಮುಟ್ಟಿ ನೋಡಿಕೊಳ್ಳಬೇಕು ಎನ್ನುವ ಅಡಿಬರಹ ಹೊಂದಿದೆ.
ಮಾಗಡಿಯ ದೇಸೀಯ ಪ್ರತಿಭೆ ವಾಲೀಸ್ ಸಂತೋಷ್, ಸಿಗ್ನೇಚರ್ ಡ್ಯಾನ್ಸ್ ಅಕಾಡಮಿ ಮೂಲಕ ಅಸಂಖ್ಯಾತ ವಿದ್ಯಾರ್ಥಿಗಳಿಗೆ ನೃತ್ಯ ಹೇಳಿಕೊಡುವ ಕೆಲಸ ಮಾಡುತ್ತಿದ್ದಾರೆ.
ಈ ನಡುವೆ "ಮಗ್ನೆ" ವಿಡಿಯೋ ಆಲ್ಬಂ ಅನ್ನು ನಟ ದೃವ ಸರ್ಜಾ ವೀಕ್ಷಿಸಿ ಹೊಸ ತಂಡದ ಪ್ರಯತ್ನಕ್ಕೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.
ನಟ ವಾಲೀಸ್ ಸಂತೋಷ್ ಮಾತನಾಡಿ, ಚಿತ್ರರಂಗಕ್ಕೆ ಡ್ಯಾನ್ಸ್ ಕೊರಿಯೋ ಗ್ರಾಫರ್ ಆಗಿ ಹಲವರ ಬಳಿ ಕೆಲಸ ಮಾಡಿದ ನಂತರ ಎಲ್ಲರ ಸಹಕಾರದಿಂದ ನೃತ್ಯ ತರಬೇತಿ ಶಾಲೆಯನ್ನು ಹಲವು ಕಡೆ ಆರಂಭಿಸಲಾಗಿದೆ ಎಂದರು.
ವಾಲೀಸ್ ಫಿಲ್ಮ್ ಮೂಲಕ ಸಿನಿಮಾ ಮಾಡುವ ಉದ್ದೇಶ ಹೊಂದಿದ್ದು ಅದಕ್ಕೂ ಮುನ್ನ ವಿಡಿಯೋ ಆಲ್ಬಂ ಮಾಡಲಾಗಿದೆ. ಸಿನಿಮಾ ಮಾಡುವ ಉದ್ದೇಶವಿದೆ. ಮೂರು ಕಥೆ ಸಿದ್ದವಾಗಿದೆ. ಮಗ್ನೆ ಹಾಡಿನ ಚಿತ್ರೀಕರಣಕ್ಕೆ ಎಲ್ಲರ ಸಹಕಾರದಿಂದ ಚಿತ್ರೀಕರಣ ಮಾಡಲಾಗಿದೆ,ಮೂರು ಲಕ್ಷಕ್ಕೂ ಅಧಿಕ ವೆಚ್ಚವಾಗಿದೆ . ನಮ್ಮದೇ ಆದ ಯೂಟೂಬ್ ಮೂಲಕ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ಹಾಡು ನೋಡಿ ನಟ ದೃವ ಸರ್ಜಾ ಮೆಚ್ಚುಗೆ ವ್ಯಕ್ತಪಡಿಸಿ , ಜನವರಿಯಲ್ಲಿ ಚಿತ್ರ ಆರಂಭಿಸುವ ಉದ್ದೇಶಹೊಂದಲಾಗಿದೆ , ಹೊಸ ಪ್ರಯತ್ನ ಬೆಂಬಲಿಸಿ ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪ್ರಾಜೆಕ್ಟ್ ಮಾಡುವ ಉದ್ದೇಶ ಹೊಂದಲಾಗಿದೆ ಎಂದರು.
ಕ್ಯಾಮರದ ಜೊತೆಗೆ ಸಂಕಲನ ಮಾರುತಿ ರಾವ್ ಮಾತನಾಡಿ ಗುಜರಾತ್ ನಲ್ಲಿ ಚಿತ್ರೀಕರಣ ಮಾಡಲು ಹೋಗಿದ್ದೆವು ಅಲ್ಲಿ ಆಗಲಿಲ್ಲ ಆ ಮೇಲೆ ಮಂಗಳೂರಿಗೆ ಹೋಗಿದ್ದವು. ಕೊನೆಗೆ ಬೆಂಗಳೂರಿನಲ್ಲಿ 3 ದಿನಗಳ ಕಾಲ ಚಿತ್ರೀಕರಣ ಮಾಡಲಾಯಿತು ಎಂದು ತಿಳಿಸಿದರು.
ತೇಜಸ್ ಕುಮಾರ್ ಸಾಹಿತ್ಯ ದೃವ ಕೇಶವ್ ಸಂಗೀತ, ಪೋಸ್ಟರ್ ಡಿಸೈನ್ ಮಾಡಿರುವ ಪ್ರಸನ್ನ ಹಾಡಿನ ಬಗ್ಗೆ ಮಾಹಿತಿ ಹಂಚಿಕೊಂಡರು.