ನಾದ ಬ್ರಹ್ಮ ಹಂಸಲೇಖ ಸಂಗೀತ ಸಂಯೋಜನೆಯ, ಡಾ. ವಿಷ್ಣುವರ್ಧನ್ ರ ಅಪ್ಪಟ ಅಭಿಮಾನಿ ಪಿ.ವಿ ಶಂಕರ್ ನಿರ್ದೇಶನದ ಚೊಚ್ಚಲ ಸಿನಿಮಾ ಸೋಲ್ ಮೇಟ್ಸ್ ಚಿತ್ರದ ಮೊದಲ ಲಿರಿಕಲ್ ವಿಡಿಯೋ ಹಾಡು ಬಿಡುಗಡೆಯಾಗಿದೆ.
ಹಂಸಲೇಖ ಸಾಹಿತ್ಯವಿರೋ ಕಿಲಕಿಲ ಹಾಡಿಗೆ ಅನಿರುದ್ಧ್ ಶಾಸ್ತ್ರಿ, ಅಂಕಿತಾ ಕುಂಡು ಧನಿಯಾಗಿದ್ದಾರೆ. ಸೋಲ್ ಮೇಟ್ಸ್ ಪರಿಸರ ಪ್ರೇಮಿ ಅನ್ನೋ ಟ್ಯಾಗ್ ಲೈನ್ ಇರೋ ಈ ಚಿತ್ರದಲ್ಲಿ ಇಬ್ಬರು ನಾಯಕ ನಟರು ಇಬ್ಬರು ನಾಯಕಿಯರು ಅಭಿನಯಿಸಿದ್ದಾರೆ.
ರಂಗ್ ಬಿ ರಂಗ್ ಖ್ಯಾತಿಯ ಶ್ರೀಜಿತ್ ಸೂರ್ಯ, ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು ಚಿತ್ರದ ಇನಾಯತ್ ಖ್ಯಾತಿಯ ಪ್ರಸನ್ನ ಶೆಟ್ಟಿ, ಯಶ್ವಿಕಾ ನಿಷ್ಕಲ, ರಜನಿ, ಅಲ್ಮಾಸ್, ಯಶ್ ಶೆಟ್ಟಿ, ಶರತ್ ಲೋಹಿತಾಶ್ವ, ಅರವಿಂದ್ ರಾವ್, ಅರುಣಾ ಬಾಲರಾಜ್, ಅರಸು ಮಹಾರಾಜ್, ಪ್ರಶಾಂತ್ ನಟನ, ಗೌತಮ್, ತಾರಕ್,ನವೀನ್ ಡಿ ಪಡೀಲ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಶಂಕರ್ ಪಿ ವಿ ಅವರು ನಿರ್ದೇಶನದ ಜೊತೆಗೆ ಜಿ. ಆರ್. ಅರ್ಚನಾ ಅವರೊಟ್ಟಿದೆ ಚಿತ್ರವನ್ನ ನಿರ್ಮಿಸಿದ್ದಾರೆ.
Pressmeet Highlights and Statements
ಸಿನಿಮಾ ಮಾಡಲು ಹೋಗಿ ಯಾರು ಹಣ ಕಳೆದುಕೊಳ್ಳುವ ಹಾಗೆ ಆಗಬಾರದು ಸಿನಿಮಾ ಮಾಡುವ ಪ್ರತಿಯೊಬ್ಬರನ್ನು ನಾನು ಪ್ರೋತ್ಸಾಹಿಸುತ್ತೇನೆ. ನಮ್ಮ ಕನ್ನಡ ಚಿತ್ರರಂಗ ಬೆಳೆಯಬೇಕು ಕನ್ನಡ ಉಳಿಯಬೇಕು ಎಂದು ಸಿನಿಮಾಕ್ಕೆ ಶುಭವನ್ನು ಹಾರೈಸಿ soulmates ಸಿನಿಮಾದ ಹಾಡನ್ನು ಬಿಡುಗಡೆ ಮಾಡಿದ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ನರಸಿಂಹಲು.
"ವರ್ಷಕ್ಕೊಂದು ಗಿಡನೆಡಿ ವಾರಕ್ಕೊಂದು ಕನ್ನಡ ಸಿನಿಮಾ ನೋಡಿ' ಎಂಬ ಉತ್ತಮ ಶೀರ್ಷಿಕೆಯ ಸೌಲ್ಮೇಟ್ಸ್ ಸಿನಿಮಾ ಉತ್ತಮ ಯಶಸ್ಸನ್ನು ಕಾಣಲಿ ಇದೀಗ ಕನ್ನಡ ಚಿತ್ರರಂಗಕ್ಕೆ ಬಂದಿರುವ ಉತ್ತಮ ಚಿತ್ರಗಳ ಸಾಲಿಗೆ ಇದೂ ಸೇರಲಿ ಎಂದು ನಿರ್ಮಾಪಕ ಶಿಲ್ಪ ಶ್ರೀನಿವಾಸ್ ಎಂದರು.
ನನಗೆ ಸಣ್ಣ ವಯಸ್ಸಿನಿಂದಲೇ ಸಿನಿಮಾ ಹುಚ್ಚು , ನಾನು ಮೊದಲಿಗೆ ನೋಡಿದ ಸಿನಿಮಾ ಅಂದ್ರೆ ಅದು ಪುಟ್ನಂಜು ಅಲ್ಲಿಂದ ನನ್ನ ಹಂಸಲೇಖಾ ರವರ ನಂಟು ಬೆಳೀತು ಅಂತಾನೆ ನನ್ನ ನಂಬಿಕೆ ಹಾಗಾಗಿ ನನ್ನ ಮೊದಲ ಸಿನಿಮಾಕ್ಕೆ ಅವರನ್ನೇ ತೆಗೆದುಕೊಂಡಿದ್ದೇನೆ ಇದರಲ್ಲಿ ಅವರು ಐದು ಹಾಡುಗಳನ್ನು ಕೊಟ್ಟಿದ್ದಾರೆ ಅವರ ಆಶೀರ್ವಾದ ಸದಾ ನನಗೆ ಬೇಕು.ಈ ಸಿನಿಮಾದಲ್ಲಿ ಒಂದು ಹುಡುಗ ಹುಡುಗಿ ಪರಿಸರವನ್ನು ಕಾಪಾಡಿಕೊಳ್ಳುವ ಕುರಿತಾಗಿ ಕಥೆ ಇದೆ ಅದು ಈಗಿನ ಸಮಾಜಕ್ಕೆ ತುಂಬ ಅವಶ್ಯಕವಾಗಿದೆ. ಅದಕ್ಕಾಗಿ ನೇಚರ್ ಲವ್ ಅಂತೆಯೇ ಒಂದು ಫ್ಯಾಮಿಲಿ ಎಂಟರ್ಟೈನರ್ ಸಿನಿಮಾವನ್ನು ಸೆಪ್ಟೆಂಬರ್ನಲ್ಲಿ ನಿಮ್ಮ ಮುಂದಿಡಲಿದ್ದೇವೆ ಎಂದು ಸಿನಿಮಾದ ನಿರ್ದೇಶಕರಾದ ಶಂಕರ್ ಪಿ.ವಿ ಮಾತನಾಡಿದರು.
ಈ ಸಿನಿಮಾದಲ್ಲಿ ನಾನು ಸತ್ಯ ಎಂಬ ಪಾತ್ರವನ್ನು ಮಾಡಿದ್ದೇನೆ ಹೆಸರಿಗೆ ತಕ್ಕಂತೆ ಆತ ಸತ್ಯವಂತನೇ ಅಲ್ಲದೆ ಮಹಾ ಪರಿಸರ ಪ್ರೇಮಿ. ಅಲ್ಲದೆ ಸೋಲ್ ಮೇಟ್ಸ್ ಅಂದ್ರೆ ಪರಿಸರ ಮತ್ತು ಅವನ ಹುಡುಗಿ ಇಬ್ರು ಅವನ ಸೋಲ್ ಮೇಟ್ಸ್ ಗಳಾಗಿ ಇರುತ್ತೆ ಹಾಗಾಗಿ ಈ ಟೈಟಲ್ ಸಿನಿಮಾಕ್ಕೆ ಸರಿಯಾಗಿ ಹೊಂದುತ್ತದೆ ಎಂದು ಸಿನಿಮಾದ ಶ್ರೀಜಿತ್ ಶೆಟ್ಟಿ ಮಾತನಾಡಿದರು.
ತುಂಬ ಮೃದು ಮನಸಿನ ಹುಡುಗಿ ಭೂಮಿಯ ಪಾತ್ರವನ್ನು ಈ ಸಿನಿಮಾದಲ್ಲಿ ಮಾಡಿದ್ದೇನೆ.ಈ ಸಿನಿಮಾದ ಪ್ರತಿಯೊಂದು ಸಾಂಗ್ ಶೂಟಿಂಗ್ ಗಳೂ ತುಂಬಾ ನೆನಪಿದೆ.ಹಂಸಲೇಖಾ ರವರ ಜೊತೆಗೆ ಕೆಲಸ ಮಾಡಲು ಸಿಕ್ಕಿದ್ದು ತುಂಬ ಖುಷಿ ಇದೆ ಎಂದು ನಿಷ್ಕಲ ಶೆಟ್ಟಿ ಹೇಳಿದರು.
ಇದು ಮೊದಲ ಸಿನಿಮಾ ಆದ್ದರಿಂದ ನಾನು ಅವರಲ್ಲಿ ಆ ಪ್ರಶ್ನೆಯನ್ನು ಕೇಳಿದ್ದೇನೆ ಅದಕ್ಕೆ ಅವರು ನಾನು ನನ್ನನ್ನು ತುಂಬಾ ನಂಬುತ್ತೇನೆ ಎಂಬ ಉತ್ತರವನ್ನು ಕೊಟ್ಟಿದ್ರು ಅಲ್ಲದೆ ಇವರು ತುಂಬಾ ಒಳ್ಳೆ ವ್ಯಕ್ತಿ ಮತ್ತು ಪ್ರತಿಯೊಂದು ಕೆಲಸವನ್ನು ಕೂಡ ತುಂಬ ಗಮನಹರಿಸಿ ಮಾಡುತ್ತಾರೆ ಹಾಗಾಗಿ ಎಲ್ಲರೂ ಅವರಿಗೆ ಸಹಕಾರ ನೀಡಲೇಬೇಕು.ನಾನು ಒಬ್ಬ ರಂಗಭೂಮಿ ಕಲಾವಿದ ಇದು ನನ್ನ ಈ ವರ್ಷದ ಎರಡನೇ ಸಿನಿಮಾ.ಇದರಲ್ಲಿ ನಾನು ಗೋಪಿ ಎಂಬ ಮುಗ್ಧ ಹಳ್ಳಿ ಹುಡುಗನ ಪಾತ್ರವನ್ನು ಮಾಡುತ್ತಿದ್ದೇನೆ ಎಂದು ಪ್ರಸನ್ನ ಶೆಟ್ಟಿಯವರು ಹೇಳಿದರು.