Chief Editor
Manohar. R (Manu)
Photo Journalist
chitrataramanu@gmail.com
+91 9845549026
ಸೆಪ್ಟೆಂಬರ್ 5 ರಿಂದ ``ಅಮೇಜಾನ್ ಪ್ರೈಮ್`` ನಲ್ಲಿ ಪುಷ್ಪ ಅರುಣ್ ಕುಮಾರ್ ನಿರ್ಮಾಣದ ``ಕೊತ್ತಲವಾಡಿ``
Posted date: 04 Thu, Sep 2025 12:55:50 PM
ಖ್ಯಾತ ನಟ ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪ ಅರುಣ್ ಕುಮಾರ್ ಅವರು ತಮ್ಮ PA ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಿಸಿದ್ದ ಮೊದಲ ಚಿತ್ರ   "ಕೊತ್ತಲವಾಡಿ".  
 
ಶ್ರೀರಾಜ್ ನಿರ್ದೇಶಿಸಿ, ಪೃಥ್ವಿ ಅಂಬರ್ ಹಾಗೂ ಕಾವ್ಯ ಶೈವ ನಾಯಕ - ನಾಯಕಿಯಾಗಿ ನಟಿಸಿದ್ದ ಈ ಚಿತ್ರ ಕಳೆದ ತಿಂಗಳು ಬಿಡುಗಡೆಯಾಗಿ ಜನಮನಸೂರೆಗೊಂಡಿತ್ತು.  ಸೆಪ್ಟೆಂಬರ್ 5 ರಿಂದ ಈ ಚಿತ್ರವನ್ನು ಅಮೇಜಾನ್ ಪ್ರೈಮ್ ನಲ್ಲೂ ವೀಕ್ಷಿಸಬಹುದು. "ಕೊತ್ತಲವಾಡಿ" ಚಿತ್ರವನ್ನು ಕನ್ನಡ, ತಮಿಳು, ತೆಲುಗು, ಹಿಂದಿ ಹಾಗು ಮಲಯಾಳಂ ಭಾಷೆಗಳಲ್ಲಿ ಅಮೆಜಾನ್ ಪ್ರೈಮ್ ನಲ್ಲಿ ನೋಡಬಹುದು. ಆದರೆ ಮೊದಲು ಸೆಪ್ಟೆಂಬರ್ 5 ರಂದು ಕನ್ನಡದಲ್ಲಿ ಮಾತ್ರ ಪ್ರದರ್ಶನವಾಗಲಿದ್ದು, ನಂತರದ ದಿನಗಳಲ್ಲಿ ಮಿಕ್ಕ ಭಾಷೆಗಳಲ್ಲಿ ವೀಕ್ಷಿಸಬಹುದು.  
 
ಕಾರ್ತಿಕ್ ಎಸ್ ಛಾಯಾಗ್ರಹಣ, ರಾಮಿಸೆಟ್ಟಿ ಪವನ್ ಸಂಕಲನ,‌ ವಿಕಾಸ್ ವಸಿಷ್ಠ ಸಂಗೀತ ನಿರ್ದೇಶನ ಹಾಗೂ ಅಭಿನಂದನ್ ಕಶ್ಯಪ್ ಹಿನ್ನೆಲೆ ಸಂಗೀತ ನೀಡಿರುವ ಈ ಚಿತ್ರದ ತಾರಾಬಳಗದಲ್ಲಿ ಪೃಥ್ವಿ ಅಂಬರ್, ಕಾವ್ಯ ಶೈವ, ಗೋಪಾಲ್ ದೇಶಪಾಂಡೆ, ರಾಜೇಶ್ ನಟರಂಗ, ರಘು ರಾಮನಕೊಪ್ಪ, ಮಾನಸಿ ಸುಧೀರ್ ಮುಂತಾದವರಿದ್ದಾರೆ. ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ.

 

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಸೆಪ್ಟೆಂಬರ್ 5 ರಿಂದ ``ಅಮೇಜಾನ್ ಪ್ರೈಮ್`` ನಲ್ಲಿ ಪುಷ್ಪ ಅರುಣ್ ಕುಮಾರ್ ನಿರ್ಮಾಣದ ``ಕೊತ್ತಲವಾಡಿ`` - Chitratara.com
Copyright 2009 chitratara.com Reproduction is forbidden unless authorized. All rights reserved.