Chief Editor
Manohar. R (Manu)
Photo Journalist
chitrataramanu@gmail.com
+91 9845549026
ಶಂಕರ್ ಪಿ.ವಿ ನಿರ್ಮಾಣ ಮತ್ತು ನಿರ್ದೇಶನದ, ನಾದಬ್ರಹ್ಮ ಹಂಸಲೇಖ ಸಂಗೀತವಿರೋ `ಸೋಲ್​ಮೇಟ್ಸ್​` ಚಿತ್ರದ ಟ್ರೈಲರ್ ರಿಲೀಸ್ ಪರಿಸರ ಕಾಳಜಿಯ ಕಥೆ ಸೆ.19ರಂದು ತೆರೆಗೆ
Posted date: 14 Sun, Sep 2025 02:30:42 PM
ನಾದಬ್ರಹ್ಮ ಹಂಸಲೇಖ  ಸಂಗೀತ ನೀಡಿರುವ ಪಿ.ವಿ. ಶಂಕರ್ ನಿರ್ದೇಶನ ಮಾಡಿರುವ `ಸೋಲ್​ಮೇಟ್ಸ್` ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ಬೆಂಗಳೂರಿನ ಉತ್ಸವ್ ಲೆಗಸಿಯಲ್ಲಿ ಅದ್ದೂರಿಯಾಗಿ ನೆರವೇರಿದೆ.  ಇದಾಗಲೇ  `ಕಿಲ ಕಿಲ.` ಹಾಗೂ ಇತರೆ ಹಾಡು, ಟೀಸರ್ ನಿಂದ ಗಮನ ಸೆಳೆದಿರುವ ಚಿತ್ರಕ್ಕೆ  `ಪರಿಸರ ಪ್ರೇಮಿ` ಎಂಬ ಟ್ಯಾಗ್ ಲೈನ್ ಇದೆ.  ಜಿ.ಆರ್. ಅರ್ಚನಾ ಹಾಗೂ ಶಂಕರ್ ಪಿ.ವಿ. ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.
 
`ರಂಗ್ ಬಿ ರಂಗ್` ಖ್ಯಾತಿಯ ಶ್ರೀಜಿತ್ ಸೂರ್ಯ, `ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು` ಖ್ಯಾತಿಯ ಪ್ರಸನ್ನ ಶೆಟ್ಟಿ, ರಜನಿ, ಯಶ್ವಿಕಾ ನಿಷ್ಕಲ, ಅಲ್ಮಾಸ್, ಯಶ್ ಶೆಟ್ಟಿ, ಅರವಿಂದ್ ರಾವ್, ಶರತ್ ಲೋಹಿತಾಶ್ವ, ಅರುಣಾ ಬಾಲರಾಜ್, ಪ್ರಶಾಂತ್ ನಟನ, ಅರಸು ಮಹಾರಾಜ್, ಗೌತಮ್, ತಾರಕ್, ನವೀನ್ ಡಿ. ಪಡೀಲ್ ಮುಂತಾದವರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರ ಇದೇ ವಾರ ಎಂದರೆ ಸೆಪ್ಟೆಂಬರ್ 19ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. 
 
ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ಶಂಕರ್"ಈ ಚಿತ್ರ ಪರಿಸರ ಕಾಳಜಿಯ ಸಂದೇಶದೊಡನೆ ರೊಮ್ಯಾನ್ಸ್, ಆಕ್ಷನ್, ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿದೆ. ನಾನು ಚಿಕ್ಕವನಿದ್ದಾಗ ಕ್ರಿಕೆಟ್ ಬ್ಯಾಟಿಗಾಗಿ ಒಂದು ಮರ ಕಡಿದಿದ್ದೆ. ಇದಕ್ಕಾಗಿ ನನಗೆ ಪಶ್ಚಾತ್ತಾಪ ಇತ್ತು. ಇದೇ ಈ ಚಿತ್ರದ ಕಥೆಗೆ ಸ್ಫೂರ್ತಿಯಾಗಿದೆ. " ಎಂದರು ಅಲ್ಲದೆ "ಈ ಸಿನಿಮಾದಲ್ಲಿ ಕರ್ನಾಟಕ ರತ್ನ ಡಾ. ವಿಷ್ಣುವರ್ಧನ್ ಅವರ ಕೋಟಿಗೊಬ್ಬ ಚಿತ್ರದ ಹಾಡೊಂದರ ದೃಶ್ಯಗಳನ್ನು ಸಹ ಬಳಸಿಕೊಳ್ಳಲಾಗಿದೆ. ಇದಕ್ಕಾಗಿ ಆ ಚಿತ್ರದ ನಿರ್ಮಾಪಕರಲ್ಲಿ ಅನುಮತಿ ಸಹ ಪಡೆದುಕೊಂಡಿದ್ದೇವೆ. ನಮ್ಮ ಚಿತ್ರಕ್ಕೆ ವಿಷ್ಣುವರ್ಧನ್ ಅವರ ಆಶೀರ್ವಾದ ಇದೆ." ಎಂದರು. " ಸಿನಿಮಾದಲ್ಲಿ ಹುಡುಗ-ಹುಡುಗಿ ಪರಿಸರವನ್ನು ಕಾಪಾಡಿಕೊಳ್ಳುವ ಕುರಿತಾಗಿ ಕಥೆ ಇದೆ. ಅದು ಈಗಿನ ಸಮಾಜಕ್ಕೆ ತುಂಬ ಅವಶ್ಯಕವಾಗಿದೆ." ಎನ್ನುವುದಾಗಿ ನಿರ್ದೇಶಕರು ಹೇಳಿದ್ದಾರೆ. 
 
ನಟ ಯಶ್ ಶೆಟ್ಟಿ ಮಾತನಾಡಿ "ಇದೊಂದು ಜಂಗಲ್ ಮಂಗಲ್ ನಂತಹಾ ಸಿನಿಮಾ ಇದರಲ್ಲಿ ನಾನು ಸುಪಾರಿ ಕಿಲ್ಲರ್ ಪಾತ್ರ ಮಾಡಿದ್ದೇನೆ. ಆದರೆ ಇದು ಕೇವಲ ವಿಲನ್ ಪಾತ್ರವಲ್ಲ. ಚಿತ್ರದ ಕ್ಲೈಮ್ಯಾಕ್ಸ್ ನಡೆಯುವುದೇ ವಿಲನ್ ಮೂಲಕ ಎನ್ನುವುದು ಇದರಲ್ಲಿನ ವಿಶೇಷವಾಗಿದೆ." ಎಂದರು.
 
ನಾಯಕ ಶ್ರೀಜಿತ್ ಶೆಟ್ಟಿ "ನಾನು ಸತ್ಯ ಎಂಬ ಪಾತ್ರವನ್ನು ಮಾಡಿದ್ದೇನೆ. ಹೆಸರಿಗೆ ತಕ್ಕಂತೆ ಆತ ಸತ್ಯವಂತನೇ ಅಲ್ಲದೆ ಮಹಾ ಪರಿಸರ ಪ್ರೇಮಿ. ಅಲ್ಲದೆ ʼಸೋಲ್‌ಮೇಟ್ಸ್ʼ ಅಂದರೆ ಪರಿಸರ ಮತ್ತು ಅವನ ಹುಡುಗಿ ಇಬ್ರು ಅವನ ಸೋಲ್‌ಮೇಟ್ಸ್‌ಗಳಾಗಿರಲಿದೆ." ಎಂದರು. 
ನಾಯಕಿ ಯಶ್ವಿಕಾ ನಿಷ್ಕಲ "ನಾನಿದರಲ್ಲಿ ತುಂಬ ಮೃದು ಮನಸಿನ ಹುಡುಗಿ ಭೂಮಿ ಎಂಬ ಪಾತ್ರವನ್ನು  ನಿರ್ವಯಿಸಿದ್ದೇನೆ. ಚಿತ್ರ ಸುಂದರವಾಗಿ ಮೂಡಿ ಬಂದಿದೆ. ನಿಮ್ಮೆಲ್ಲರ ಸಹಕಾರ ಬೇಕು" ಎಂದು ಮನವಿ ಮಾಡಿದರು. 
 
ಸಿನಿಮಾದಲ್ಲಿ ಶ್ರೀಜಿತ್ ಶೆಟ್ಟಿ ಅವರು ಸತ್ಯ ಎಂಬ ಪಾತ್ರ ಮಾಡಿದ್ದಾರೆ. ಭೂಮಿ ಎಂಬ ಪಾತ್ರಕ್ಕೆ ನಿಷ್ಕಲಾ ಶೆಟ್ಟಿ ಅವರು ಬಣ್ಣ ಹಚ್ಚಿದ್ದಾರೆ. ರಂಗಭೂಮಿ ಹಿನ್ನೆಲೆಯಿಂದ ಬಂದಿರುವ ನಟ ಪ್ರಸನ್ನ ಶೆಟ್ಟಿ ಅವರು ಗೋಪಿ ಎಂಬ ಮುಗ್ಧ ಹಳ್ಳಿ ಯುವಕನ ಪಾತ್ರವನ್ನು ನಿಭಾಯಿಸಿದ್ದಾರೆ ಚಿತ್ರ ಇದೆ ಶುಕ್ರವಾರ ತೆರೆಗೆ ಬರಲಿದೆ.
GALLERY
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಶಂಕರ್ ಪಿ.ವಿ ನಿರ್ಮಾಣ ಮತ್ತು ನಿರ್ದೇಶನದ, ನಾದಬ್ರಹ್ಮ ಹಂಸಲೇಖ ಸಂಗೀತವಿರೋ `ಸೋಲ್​ಮೇಟ್ಸ್​` ಚಿತ್ರದ ಟ್ರೈಲರ್ ರಿಲೀಸ್ ಪರಿಸರ ಕಾಳಜಿಯ ಕಥೆ ಸೆ.19ರಂದು ತೆರೆಗೆ - Chitratara.com
Copyright 2009 chitratara.com Reproduction is forbidden unless authorized. All rights reserved.

Fatal error: Uncaught ArgumentCountError: mysqli_close() expects exactly 1 argument, 0 given in /var/www/2abd550b-0850-492e-b3fe-6b047f2ad0c0/public_html/show-content.php:95 Stack trace: #0 /var/www/2abd550b-0850-492e-b3fe-6b047f2ad0c0/public_html/show-content.php(95): mysqli_close() #1 {main} thrown in /var/www/2abd550b-0850-492e-b3fe-6b047f2ad0c0/public_html/show-content.php on line 95