75 ಕ್ಕೂ ಹೆಚ್ಚು ರಾಷ್ಟ್ರೀಯ, ಅಂತರರಾಷ್ಟ್ರೀಯ ಫ್ಯಾಷನ್ ಷೋಗಳಲ್ಲಿ ಭಾಗವಹಿಸಿ ಸೂಪರ್ ಮಾಡೆಲ್ ಎನಿಸಿಕೊಂಡಿರುವ ಕನ್ನಡತಿ ಸಂಹಿತಾವಿನ್ಯಾ ಹಾಲು ತುಪ್ಪ ಸಿನಿಮಾದ ಮೂಲಕ ಬಣ್ಣದಲೋಕಕ್ಕೆ ಪಾದಾರ್ಪಣೆ ಮಾಡಿ, ನಂತರ ಅಮೃತಘಳಿಗೆ ಲಂಗೋಟಿ ಮ್ಯಾನ್ ಹಾಗೂ ತೆಲುಗಿನ ಯು ಆರ್ ಮೈ ಹೀರೋ ಅಭಿನಯಿಸಿದ್ದು, ಈಗ ಬಿಡುಗಡೆಗೆ ಕಾದಿರುವ ಮೆಜೆಸ್ಟಿಕ್-2 ಆಯುಧ, ಜಿಎಸ್‌ಟಿ ಸ್ವಾಭಿಮಾನಿ ಯಾಕೋ ಬೇಜಾರು ವಿದೂಷಕ ಸೇರಿದಂತೆ ಇಲ್ಲಿಯವರೆಗೂ ೧೮ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಸೈ ಅನಿಸಿಕೊಂಡಿದ್ದಾರೆ. ಸೀತಮ್ಮ ಬಂದಳು ಸಿರಿಮಲ್ಲಿಗೆ ತೊಟ್ಟು ಬಿಡುಗಡೆ ದಿನಾಂಕದಂದು ಮೆಜಸ್ಟಿಕ್ ಏರಿಯಾ ಟಾಕೀಸ್ ಮುಂದೆ ಕಟೌಟ್ ನಿಲ್ಲಿಸಿ ಹೊಸ ಟ್ರೆಂಡ್ ಸ್ಸೃಷ್ಟಿಸಿದ್ದರು.
ಎರಡು ಭಾಷೆಗಳಲ್ಲಿ ತನ್ನದೇ ಛಾಪು ಉಳಿಸಿಕೊಂಡಿರುವ ಇವರು ಸದ್ಯ ಕಾದಲ್ ತಮಿಳು ಸಿನಿಮಾದ ಮೂಲಕ ಅಲ್ಲಿಯೂ ಹೆಜ್ಜೆ ಇಟ್ಟು ಅದು ಸದ್ಯದಲ್ಲೆ ತೆರೆಗೆ ಬರಲಿದೆ. ಅಲ್ಲದೆ ಮತ್ತೋಂದು ತಮಿಳಿನ ಹಿಡನ್ ಕ್ಯಾಮಾರ ಸಿನಿಮಾಕ್ಕೂ ಸಹಿ ಹಾಕಿದ್ದು, ಪ್ರಿ ಪ್ರೊಡಕ್ಷನ್ ಕೆಲಸಗಳು ಕೇರಳದಲ್ಲಿ ನಡೆಯುತ್ತಿದೆ. ಅಂತೂ ಚಂದನವನದ ಮತ್ತೋಬ್ಬ ಸುಂದರಿ ನೆರೆಯ ಭಾಷೆಗಳಲ್ಲಿ ಮಿಂಚುತ್ತಿರುವುದು ಇಲ್ಲಿನವರಿಗೆ ಸಂತಸದ ವಿಷಯವಾಗಿದೆ.