Chief Editor
Manohar. R (Manu)
Photo Journalist
chitrataramanu@gmail.com
+91 9845549026
ಭರವಸೆ ಮೂಡಿಸಿದ ಅನೀಶ್ ತೇಜೇಶ್ವರ್ ನಟಿಸಿ ನಿರ್ದೇಶಿಸುತ್ತಿರುವ ``ಲವ್ ಒಟಿಪಿ``ಚಿತ್ರದ ಟ್ರೈಲರ್
Posted date: 11 Sat, Oct 2025 05:26:09 PM
ಕನ್ನಡ ಚಿತ್ರರಂಗದ ಭರವಸೆಯ ಹಾಗು ಪ್ರತಿಭಾನ್ವಿತ ನಾಯಕ ಕಮ್ ನಿರ್ದೇಶಕ ಅನೀಶ್ ತೇಜೇಶ್ವರ್ ನಟಿಸಿ ನಿರ್ದೇಶಿಸುತ್ತಿರುವ “ ಲವ್ ಒಟಿಪಿ “ ಚಿತ್ರದ ಟ್ರೈಲರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಗಮನ ಸೆಳೆದಿದೆ.
 
ಪುಷ್ಪ ಮುನಿರೆಡ್ಡಿ ಅರ್ಪಿಸಿ ಭಾವಪ್ರೀತ ಪ್ರೊಡಕ್ಷನ್ ಸಂಸ್ಥೆಯಡಿ ವಿಜಯ್ ಎಂ.ರೆಡ್ಡಿ  ನಿರ್ಮಾಣ ಮಾಡಿರುವ ಚಿತ್ರವನ್ನು ಅನೀಶ್ ನಿರ್ದೇಶನ ಮಾಡಿದ್ದಾರೆ. 

ಒಟಿಪಿ ಅಂದರೆ  ಓವರ್ ಟಾರ್ಚರ್ ಪ್ರೆಸರ್ ಎನ್ನುವ ಅಡಿಬರಹವಿದೆ.
ಬಿಡುಗಡೆಯಾಗಿರುವ ಟ್ರೈಲರ್‍ನಲ್ಲಿ ಪ್ರೀತಿ, ಪ್ರೇಮ, ಹೊಡೆದಾಟ,ಬಡಿದಾಟ, ಕ್ರಿಕೆಟ್, ಸ್ನೇಹ, ಅಪ್ಪ-ಮಗನ ಗಲಾಟೆ, ಕೌಟಂಬಿಕ ಕಥನ, ಪೊಲೀಸ್ ಠಾಣೆ ಸೇರಿದಂತೆ ಕಮರ್ಷಿಯಲ್ ಚಿತ್ರಕ್ಕಿರಬೇಕಾದ ಎಲ್ಲಾ ಅಂಶಗಳನ್ನು 2 ನಿಮಿಷ 24 ಸೆಕೆಂಡ್ ಇರುವ ಟ್ರೈಲರ್‍ನಲ್ಲಿ ಅಡಕ ಮಾಡಿದ್ದು ಚಿತ್ರದ ಬಗ್ಗೆ ಒಂದಷ್ಟು ಕುತೂಹಲ ಮತ್ತು ನಿರೀಕ್ಷೆ ಹೆಚ್ಚುವಂತೆ ಮಾಡಿದೆ.

ನಾಯಕ ಅಕ್ಷಯ್‍ಗೆ ಕ್ರಿಕೆಟರ್ ಆಗಬೇಕು ಎನ್ನುವುದು ಚಿಕ್ಕವಯಸ್ಸಿನಿಂದ ಕಟ್ಟಿಕೊಂಡ ಕನಸು. ಆದರೆ ಕ್ರಿಕೆಟ್‍ಗಿಂತ ಗ್ರೌಂಡ್‍ನಲ್ಲಿ ಗಲಾಟೆನೇ ಜಾಸ್ತಿ, ಈ ಗಲಾಟೆ ಎಲ್ಲಾ ಮ್ಯಾಚ್ ನಿಂದ ಅಲ್ಲ, ಲವ್ ಮತ್ತು ಗರ್ಲ್‍ಪ್ರೆಂಡ್ಸ್ ನಿಂದ. ಇಬ್ಬರು ಹುಡುಗಿರನ್ನು ಲವ್   ಆನಂತರ ಪಡುವ ಪಡಪಾಟಲು,ಕುಟುಂಬ, ಸ್ನೇಹಿತರು, ಪೋಲೀಸ್ ಠಾಣಗೆ ಹೀಗೆ ಹಲವು ವಿಷಯಗಳು ಚಿತ್ರದ ಬಗೆಗಿನ ನಿರೀಕ್ಷೆಯನ್ನು ಹೆಚ್ಚು ಮಾಡಿದ್ದು ನಟ ಮತ್ತು ನಿರ್ದೇಶಕ ಅನೀಶ್ ತೇಜೇಶ್ವರ್ ಅವರ ಕೆಲಸದ ಇನ್ನಷ್ಟು ಭರವಸೆ ಹೆಚ್ಚು ಮಾಡಿದೆ

ಬಹುದಿನಗಳ ನಂತರ ಬಂದ ಪ್ರಮೋದಿನಿ

ಕನ್ನಡ ಹಲವು ಚಿತ್ರಗಳು ಮತ್ತು ಧಾರಾವಾಹಿಯಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದ ಪ್ರತಿಭಾನ್ವಿತ ನಟಿ ಪ್ರಮೋದಿನಿ “ ಲವ್ ಒಟಿಟಿ” ಚಿತ್ರದ ಮೂಲಕ ಕನ್ನಡದ ಪೇಕ್ಷಕರ ಮುಂದೆ ಮತ್ತೊಮ್ಮೆ ಬರುತ್ತಿದ್ದಾರೆ, ಪ್ರಮೋದಿನಿಅವರ ಅಭಿನಯ ಕಂಡು ಬೆರಗಾಗಿದ್ದ ಮತ್ತು ಅಭಿಮಾನಿಗಳಾಗಿದ್ದ ಮಂದಿಗೆ ಮತ್ತೊಮ್ಮೆ ಮುದ ನೀಡಲು ತೆರೆಯ ಮೇಲೆ ಬರುತ್ತಿದ್ದಾರೆ. 

ಸ್ವರೂಪಿಣಿ ಆದ ಆರೋಹಿ

ಲವ್ ಒಟಿಪಿ ಚಿತ್ರದ ಬಳಿಕ ಹಲವು ಕನ್ನಡ ಚಿತ್ರಗಳಲ್ಲಿ ಅವಕಾಶಗಳ ಸುರಿಮಳೆ ಬಂದರೂ ಅಶ್ಚರ್ಯವಿಲ್ಲ, ಪ್ರಮೋದಿನಿ ಅವರಲ್ಲದೆ ಚಿತ್ರದಲ್ಲಿ ಅರೋಹಿ ನಾರಾಯಣ್ ಕೂಡ ಹಲವು ದಿನಗಳ ನಂತರ ಚಿತ್ರದಲ್ಲಿ ಕಾಣಸಿಕೊಳ್ಳುತ್ತಿದ್ದಾರೆ, ಕನ್ನಡದ ಮತ್ತೊಂದು ಪ್ರತಿಭಾನ್ವಿತ ನಟಿ. ಈ ಚಿತ್ರದ ಮೂಲಕ ಸ್ವರೂಪಿಣಿ ಆಗಿದ್ದಾರೆ. ಸ್ವರೂಪಿಣಿ , ಅರೋಹಿ ಅವರ ಮೂಲ ಹೆಸರು, ಹೀಗಾಗಿ ಅದನ್ನೇ ಚಿತ್ರರಂಗದಲ್ಲಿ ಮುಂದುವರಿಸಲಿದ್ದಾರೆ

ಉಳಿದಂತೆ ಚಿತ್ರದಲ್ಲಿ ಹಿರಿಯ ಕಲಾವಿದರಾದ ಸ್ವಾತಿ. ರಾಜೇವ್ ಕನಕಲ, ಜಾನ್ವಿ ಕಕಲಕೇರಿ,ಕೃಷ್ಣಭಟ್ ಸೇರಿದಂತೆ ಪ್ರಮುಖರು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
GALLERY
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಭರವಸೆ ಮೂಡಿಸಿದ ಅನೀಶ್ ತೇಜೇಶ್ವರ್ ನಟಿಸಿ ನಿರ್ದೇಶಿಸುತ್ತಿರುವ ``ಲವ್ ಒಟಿಪಿ``ಚಿತ್ರದ ಟ್ರೈಲರ್ - Chitratara.com
Copyright 2009 chitratara.com Reproduction is forbidden unless authorized. All rights reserved.

Fatal error: Uncaught ArgumentCountError: mysqli_close() expects exactly 1 argument, 0 given in /var/www/2abd550b-0850-492e-b3fe-6b047f2ad0c0/public_html/show-content.php:95 Stack trace: #0 /var/www/2abd550b-0850-492e-b3fe-6b047f2ad0c0/public_html/show-content.php(95): mysqli_close() #1 {main} thrown in /var/www/2abd550b-0850-492e-b3fe-6b047f2ad0c0/public_html/show-content.php on line 95