Chief Editor
Manohar. R (Manu)
Photo Journalist
chitrataramanu@gmail.com
+91 9845549026
ದೊಡ್ಡವರು ಸಿನಿಮಾ ಮಾಡಿದ್ದಾರೆ ಅಂದರೆ ಚಿಕ್ಕವರ ಚಿತ್ರಕ್ಕೆ ಬೆಲೆ ಇಲ್ವಾ : ನಿರ್ದೇಶಕ ಉಮೇಶ್ ಹೆಬ್ಬಾಳ್
Posted date: 16 Thu, Oct 2025 12:22:18 PM
ಮಲೆಯಾಳಂ ಚಿತ್ರರಂಗದ ಖ್ಯಾತ ನಟ ಪದ್ಮಭೂಷಣ ಮೋಹನ್ ಲಾಲ್ ನಟನೆಯ “ ವೃಷಭ” ಚಿತ್ರ ನವಂಬರ್ 6 ರಂದು ಮಲೆಯಾಳಂ, ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ತೆರೆಗೆ ಬರಲು ಸಿದ್ದವಾಗಿದೆ.

ಈ ನಡುವೆ ಕನ್ನಡದ ನಿರ್ದೇಶಕ, ನಿರ್ಮಾಪಕ ಉಮೇಶ್ ಹೆಬ್ಬಾಳ್ ತಗಾದೆ ತೆಗೆದಿದ್ದಾರೆ. ಅದಕ್ಕೆ ಕಾರಣ ಇಷ್ಟೇ “ವೃಷಭ” ಚಿತ್ರದ ಶೀರ್ಷಿಕ ನಮ್ಮ ಸಂಸ್ಥೆಗ ಬ್ಯಾನರ್‍ನಲ್ಲಿ ನೋಂದಣಿ ಆಗಿದೆ, ಹೀಗಾಗಿ ಮಲೆಯಾಳಂ ಚಿತ್ರದವರು ಬಳಸಬಾರದು ಎಂದು ಉಮೇಶ್ ಹೆಬ್ಬಾಳ್ ಪಟ್ಟು ಹಿಡಿದ್ದು ದೊಡ್ಡವರು ಸಿನಿಮಾ ಮಾಡಿದ್ದಾರೆ ಅಂದರೆ ಚಿಕ್ಕವರ ಚಿತ್ರಕ್ಕೆ ಬೆಲೆ ಇಲ್ವಾ ಎಂದು ಪ್ರಶ್ನಿಸಿದ್ದಾರೆ.

ಚಿತ್ರದ ಶೀರ್ಷಿಕೆ ಬಗ್ಗೆ ಎದ್ದಿರುವ ವಿವಾದದ ಕುರಿತು ಮಾಹಿತಿ ಹಂಚಿಕೊಂಡ ನಿರ್ದೇಶಕ, ನಿರ್ಮಾಪಕ ಉಮೇಶ್ ಹೆಬ್ಬಾಳ್. ಕೆಲ ತಿಂಗಳ ಹಿಂದೆ ಬಾಲಿವುಡ್ ನಿರ್ಮಾಣ ಸಂಸ್ಥೆ ಹಾಗು  ಮಲೆಯಾಳಂನಲ್ಲಿ ವೃಷಭ ಚಿತ್ರ ನಿರ್ಮಾಣ ಮಾಡಿರುವ ಏಕ್ತಾ ಕಪೂರ್ ಅವರ ತಂಡ ಸಂಪರ್ಕಿಸಿ ಶೀರ್ಷಿಕೆ ಬಿಟ್ಟುಕೊಡಲು ನೀವೇನಾದರೂ ಹಣಕಾಸು ನಿರೀಕ್ಷೆ ಮಾಡುತ್ತೀರಾ ಎಂದು ಕೇಳಿದರು, ನಾವು ಸ್ವಲ್ಪ ದಿನ ಆದ ನಂತರ ಹೇಳುತ್ತೇವೆ ಎಂದೆವು, ಆ ನಂತರ ಅವರ ಸಂಪರ್ಕ ಸಿಗಲಿಲ್ಲ, ನಾವು ಹಲವು ಬಾರಿ ಪ್ರಯತ್ನ ಮಾಡಿದೆವು, ಈಗ ನೋಡಿದರೆ ನವಂಬರ್ 6ಕ್ಕೆ ಮೋಹನ್ ಲಾಲ್ ನಟನೆಯ ವೃಷಭ ಚಿತ್ರ ತೆರೆಗೆ ಬರಲಿದೆ.ಅದು ಕನ್ನಡದಲ್ಲಿ ಶೀರ್ಷಿಕೆ ಪ್ರಕಟಿಸಿದ್ದಾರೆ ಎಂದರು.

ಕಳೆದ ಮೂರು ವರ್ಷಗಳಿಂದ ವೃಷಭ ಶೀರ್ಷಿಕೆ ನಮ್ಮ ಬಳಿ ಇದೆ, ಹೀಗಿರುವಾಗ ಅವರು ವೃಷಭ ಹೆಸರಲ್ಲಿ ಸಿನಿಮಾ ಬಿಡುಗಡೆ ಮಾಡಲು ಮುಂದಾಗಿದ್ದಾರೆ. ಈ ವಿಷಯವಾಗಿ ಚಲನಚಿತ್ರ ವಾಣಿಜ್ಯ ಮಂಡಳಿಗೂ ದೂರು ನೀಡಲಾಗಿದೆ, ಅವರೂ ಕೂಡ ವೃಷಭ ಶೀರ್ಷಿಕೆ ನಿಮ್ಮ ಬಳಿ ಇದೆ ಡೋಂಟ್ ವರಿ ಎಂದಿದ್ಧಾರೆ, ಆದರೆ ಮೋಹನ್ ಲಾಲ್ ಚಿತ್ರ ಬಿಡುಗಡೆಯಾಗುತ್ತಿರುವುದು ಆತಂಕ ಮೂಡಿಸಿದೆ ಎಂದು ಹೇಳಿದರು.

ಮಲೆಯಾಳಂನಲ್ಲಿ ಅವರು ಚಿತ್ರ ಬಿಡುಗಡೆ ಮಾಡಿಕೊಳ್ಳಲಿ ನಮ್ಮದೇನು ಅಭ್ಯಂತರ ಇಲ್ಲ, ಆದರೆ ಕನ್ನಡದಲ್ಲಿ ವೃಷಭ ಹೆಸರಲಿ ಚಿತ್ರ ಬಿಡುಗಡೆ ಮಾಡಬಾರದು. ಅದೇ ಶೀರ್ಷಿಕೆ ಇಟ್ಟುಕೊಂಡು ಸಿನಿಮಾ ಮಾಡಿದ್ದೇವೆ, ನಮ್ಮ ಚಿತ್ರದ ಮೇಲೆ ಹೊಡೆತ ಬೀಳಲಿದೆ ಎನ್ನುವುದಷ್ಟೇ ನಮ್ಮ ಕಳಕಳಿ, ವಾಣಿಜ್ಯ ಮಂಡಳಿ ಕಾನೂನಾತ್ಮಕವಾಗಿ ಹೋರಾಟ ನಡೆಸಲು ಹೇಳಿದೆ. ಅದರಂತೆ ಕಾನೂನಿನ ಮೊರೆ ಹೋಗುವ ಉದ್ದೇಶವೂ ಇದೆ ಎಂದು ಹೇಳಿಕೊಂಡರು.

ವೃಷಭ ಚಿತ್ರ ನಿರ್ದೇಶನ ಮಾಡಿರುವ ಕನ್ನಡದವರೇ ನಿರ್ದೇಶಕ ನಂದಕಿಶೋರ್ ಅವರಿಗೆ ಮನವಿ ಮಾಡಿದ್ದೇವೆ, ಕನ್ನಡದಲ್ಲಿ ವೃಷಭ ಶೀರ್ಷಿಕೆ ನಮ್ಮ ಬಳಿ ಇದೆ ಎಂದು ಆಗ ಅವರು ಕನ್ನಡದಲ್ಲಿ ಶೀರ್ಷಿಕೆ ನೊಂದಾಯಿಸಿಲ್ಲ ಎಂದಿದ್ದರು ಆದರೆ ಈಗ ನೋಡಿದರೆ ನವಂಬರ್ 6 ರಂದು ಕನ್ನಡದಲ್ಲಿ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿದೆ ಎಂದಿದ್ದಾರೆ.

ಮಂಡ್ಯ ಜಿಲ್ಲೆಯ ಸುತ್ತಮುತ್ತ ಟಾಕಿ ಭಾಗವನ್ನು 38 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ, ಮಾಂಟೆಜ್ ಮತ್ತು ಹಾಡಿನ ಸನ್ನಿವೇಶದ ಚಿತ್ರೀಕರಣಕ್ಕೆ 8 ದಿನ ತೆಗೆದುಕೊಂಡಿದ್ದು ಒಟ್ಟು 46 ದಿನಗಳಲ್ಲಿ ಚಿತ್ರೀಕರಣ ಮಾಡಿದ್ದೇವೆ, ಚಿತ್ರ ಅಂತಿಮ ಹಂತದ ಕೆಲಸ ಕಾರ್ಯಗಳಲ್ಲಿದ್ದು ಅದ ಮುಗಿದ ನಂತರ  ಸೆನ್ಸಾರ್ ಗೆ ಮನವಿ ಮಾಡಲಾಗುತ್ತದೆ ಎಂದರು.

ಕ್ರಿಯೇಟಿವ್ ಹೆಡ್ ಆಗಿರುವ ರಾಯ್ ಬಡುಗೇರ್, ಸಂಗೀತ ನೀಡಿರುವ ಪ್ರಣವ್ ಸೇರಿದಂತೆ ಮತ್ತಿತರರು ಚಿತ್ರದ ಪ್ರಗತಿಯ ಕುರಿತು ಮಾಹಿತಿ ಹಂಚಿಕೊಂಡರು.
GALLERY
Kannada Cinema's Latest Wallpapers
Kannada Cinema's Latest Videos
Kannada Movie/Cinema News - ದೊಡ್ಡವರು ಸಿನಿಮಾ ಮಾಡಿದ್ದಾರೆ ಅಂದರೆ ಚಿಕ್ಕವರ ಚಿತ್ರಕ್ಕೆ ಬೆಲೆ ಇಲ್ವಾ : ನಿರ್ದೇಶಕ ಉಮೇಶ್ ಹೆಬ್ಬಾಳ್ - Chitratara.com
Copyright 2009 chitratara.com Reproduction is forbidden unless authorized. All rights reserved.

Fatal error: Uncaught ArgumentCountError: mysqli_close() expects exactly 1 argument, 0 given in /var/www/2abd550b-0850-492e-b3fe-6b047f2ad0c0/public_html/show-content.php:95 Stack trace: #0 /var/www/2abd550b-0850-492e-b3fe-6b047f2ad0c0/public_html/show-content.php(95): mysqli_close() #1 {main} thrown in /var/www/2abd550b-0850-492e-b3fe-6b047f2ad0c0/public_html/show-content.php on line 95