Chief Editor
Manohar. R (Manu)
Photo Journalist
chitrataramanu@gmail.com
+91 9845549026
ಆಶ್ರಯ ಕ್ರಿಯೇಷನ್ಸ್ ನಿರ್ಮಾಣದ ``I Am ರೂಬಿ`` ಚಿತ್ರಕ್ಕೆ ಆಕಾಶ್ ನಾಯಕ
Posted date: 20 Mon, Oct 2025 08:49:36 PM
ಬೆಳಕಿನ ಹಬ್ಬದ ಸಂದರ್ಭದಲ್ಲಿ ಅನಾವರಣವಾಯಿತು "Love ಲಿ" ಚಿತ್ರದ ನಿರ್ದೇಶಕ ಚೇತನ್ ಕೇಶವ್ ನಿರ್ದೇಶನದ ನೂತನ ಚಿತ್ರದ ಶೀರ್ಷಿಕೆ .

ವಸಿಷ್ಠ ಸಿಂಹ ನಾಯಕರಾಗಿ ನಟಿಸಿದ್ದ "Love ಲಿ" ಚಿತ್ರ ನಿರ್ದೇಶಿಸಿದ್ದ ಚೇತನ್ ಕೇಶವ್ ನಿರ್ದೇಶನದ ಎರಡನೇ ಸಿನಿಮಾದ ಶೀರ್ಷಿಕೆ ಬೆಳಕಿನ ಹಬ್ಬ ದೀಪಾವಳಿ ಸಂದರ್ಭದಲ್ಲಿ ಅನಾವರಣವಾಗಿದೆ. ಆಶ್ರಯ ಕ್ರಿಯೇಷನ್ಸ್ ಲಾಂಛನದಲ್ಲಿ ಡಾ||ಶಿವೇಗೌಡ ಸಿ.ವೈ ಹಾಗೂ "ಚಿಂಗಾರಿ" ಬಿ ಮಹದೇವ್ ಅವರು ನಿರ್ಮಿಸುತ್ತಿರುವ ಮತ್ತು ಆಕಾಶ್ ಎಂಬ ಮೈಸೂರಿನ ನೂತನ ಪ್ರತಿಭೆ ನಾಯಕನಾಗಿ ನಟಿಸುತ್ತಿರುವ ಈ ಚಿತ್ರಕ್ಕೆ "I Am ರೂಬಿ" ಎಂದು ಹೆಸರಿಡಲಾಗಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಈ ನೂತನ ಚಿತ್ರದ ಬಗ್ಗೆ ಮಾಹಿತಿ ನೀಡಿದೆ.

ನಿರ್ದೇಶಕ ಚೇತನ್ ಕೇಶವ ಅವರೆ ಕೌಟುಂಬಿಕ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸುತ್ತಿದ್ದಾರೆ. ಅನೂಪ್ ಸೀಳಿನ್ ಸಂಗೀತ ಸಂಯೋಜನೆ, ಅಶ್ವಿನ್ ಕೆನಡಿ ಛಾಯಾಗ್ರಹಣ, ಮಹೇಶ್ ತೊಗಟ ಸಂಕಲನ, ಪ್ರತಾಪ್ ಆರ್ ಮೆಂಡನ್ ಕಲಾ ನಿರ್ದೇಶನ ಹಾಗೂ ಡಾ||ಕೆ.ರವಿವರ್ಮ - ದಿಲೀಪ್ ಎಂ ರಾಜ್ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
 
ರಂಗಾಯಣ ಸೇರಿದಂತೆ ಅನೇಕ ಕಡೆ ನಾಟಕಗಳಲ್ಲಿ ಅಭಿನಯಿಸಿರುವ ಹಾಗೂ ಚಿತ್ರ ನಾಯಕನಾಗಲು ಬೇಕಾದ ಪೂರ್ವ ತಯಾರಿಯನ್ನು ಈಗಾಗಲೇ ಮಾಡಿಕೊಂಡಿರುವ ಮೈಸೂರು ಮೂಲದ ಆಕಾಶ್ ಈ ಚಿತ್ರದ ಮೂಲಕ ನಾಯಕನಾಗಿ ಕನ್ನಡ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. "ಲಕ್ಷ್ಮೀ ಬಾರಮ್ಮ" ಧಾರಾವಾಹಿ ಖ್ಯಾತಿಯ ಭೂಮಿಕ ರಮೇಶ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಅನುಭವಿ ಕಲಾವಿದರ ದೊಡ್ಡ ತಾರಾಬಳಗ ಈ ಚಿತ್ರದಲ್ಲಿರುತ್ತದೆ.  ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ "I Am ರೂಬಿ" ಚಿತ್ರಕ್ಕೆ ಡಿಸೆಂಬರ್ ನಿಂದ ಚಿತ್ರೀಕರಣ ಶುರುವಾಗಲಿದೆ.
GALLERY
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಆಶ್ರಯ ಕ್ರಿಯೇಷನ್ಸ್ ನಿರ್ಮಾಣದ ``I Am ರೂಬಿ`` ಚಿತ್ರಕ್ಕೆ ಆಕಾಶ್ ನಾಯಕ - Chitratara.com
Copyright 2009 chitratara.com Reproduction is forbidden unless authorized. All rights reserved.

Fatal error: Uncaught ArgumentCountError: mysqli_close() expects exactly 1 argument, 0 given in /var/www/2abd550b-0850-492e-b3fe-6b047f2ad0c0/public_html/show-content.php:95 Stack trace: #0 /var/www/2abd550b-0850-492e-b3fe-6b047f2ad0c0/public_html/show-content.php(95): mysqli_close() #1 {main} thrown in /var/www/2abd550b-0850-492e-b3fe-6b047f2ad0c0/public_html/show-content.php on line 95