ಕಳೆದ ತೊಂಭತ್ತು ವರ್ಷಗಳಿಂದ ಸಾರ್ವಜನಿಕರ ನೆಚ್ಚಿನ ಚಿನ್ನದ ಆಭರಣಗಳ ಮಳಿಗೆಯಾಗಿ ಸೇವೆ ಸಲ್ಲಿಸುತ್ತಿರುವ ಆಭರಣ್ ಮಾಲೀಕರಾದ ಪ್ರತಾಪ್ ಮಧುಕರ ಕಾಮತ್ ಇದೀಗ.
ಜೆ.ಪಿ.ನಗರದಲ್ಲಿ ಮತ್ತೊಂದು ಶಾಖೆಯನ್ನು ಪ್ರಾರಂಭಿಸಿದ್ದಾರೆ. ಈ ಆಭರಣ್ ಟೈಮ್ ಲೆಸ್ ಜ್ಯುವೆಲರಿ ಮಳಿಗೆಯನ್ನು ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್ , ನಟಿ ಪ್ರಣೀತ ಸುಭಾಷ್, ಶಾಸಕ ಸಿ.ಕೆ.ರಾಮಮೂರ್ತಿ.
ಉದ್ಘಾಟಿಸಿದರು. ವೇದಿಕೆಯಲ್ಲಿ ಮಾಲೀಕರ ಧರ್ಮಪತ್ನಿ ಪ್ರೀತಿ ಕಾಮತ್ ಕೂಡ ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಂಸದ ತೇಜಸ್ವಿ ಸೂರ್ಯ ಹಾಗೂ ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್ ನೂತನ ಆಭರಣ್ ಮಳಿಗೆಗೆ ಶುಭ ಹಾರೈಸಿದರು.