"ಭಾರತಿ ಟೀಚರ್"  ಏಳನೇ ತರಗತಿ ಚಿತ್ರದ ಹಾಡುಗಳು ಬಿಡುಗಡೆಯಾಗಿದೆ, ಚಿತ್ರದ ಮೂಲಕ ಶಿಕ್ಷಣದ ಬಗ್ಗೆ ಅರಿವು ಮೂಡಿಸುವ ವಿಷಯನ್ನು ನಿರ್ದೇಶಕ ಎಂ,ಎಲ್ ಪ್ರಸನ್ನ ತೆರೆಗೆ ತರುವ ಪ್ರಯತ್ನ ಮಾಡುತ್ತಿದ್ದಾರೆ, ಚಿತ್ರ ಸದ್ದುಗದ್ದಲವಿಲ್ಲದೆ ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದೆ
ರೈತ  ಹೋರಾಟಗಾರ್ತಿ  ಡಾ. ವಿಜಯಲಕ್ಣ್ಮಿ , ಚಿತ್ರ ಸಾಹಿತಿ ಡಾ.ವಿ.ನಾಗೇಂದ್ರ ಪ್ರಸಾದ್, ಪ್ರಕಾಶಕ ಹಾಗು ಡಾ.ವಿಷ್ಣು ಸೇವಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಸೇರಿದಂತೆ ಅನೇಕರು ಆಗಮಿಸಿ " ಭಾರತಿ ಟೀಚರ್ "  ಹಾಡು ಬಿಡುಗಡೆ ಮಾಡಿ ಶುಭ ಹಾರೈಸಿದರು
ಡಾ.ವಿಜಯಲಕ್ಣ್ಮಿ ಮಾತನಾಡಿ 14 ನೇ ವಯಸ್ಸಿಗೆ ಮದುವೆಯಾಗಿ ಅಂದ್ರಪ್ರದೇಶದಿಂದ ದಾವಣಗೆರೆಗೆ ಬಂದಿದ್ದೆ.9ನೇ ತರಗತಿಯ ವರೆಗೂ ಓದಿದ್ದೆ. ಪ್ರತಿಷ್ಠಿತ ಇಂಗ್ಲಿಷ್ ಶಾಲೆಗೆ ಮಗಳನ್ನು ಸೇರಿಸಲು ಹೋದಾಗ ಅಲ್ಲಿನ ಪ್ರಿನ್ಸಿಪಾಲ್  ಭಾಷೆ ಬರುವುದಿಲ್ಲ. ಇಲ್ಲಿಗೆ ಯಾಕೆ  ಬಂದ್ರಿ ಎಂದು  ಅವಮಾನ  ಮಾಡಿದ್ದರು. ಜೊತೆಗೆ ಮಗಳನ್ನು ಶಾಲೆಗೆ ಸೇರಿಸಿಕೊಂಡಿರಲಿಲ್ಲ. ಹಠಕ್ಕೆ ಬಿದ್ದು  ಮಗಳನ್ನು ಅದೇ ಶಾಲೆಗೆ ಸೇರಿಸಿದ್ದೆ ಜೊತೆಗೆ  ಚೇತನ ವಿದ್ಯಾಸಂಸ್ಥೆ ಸ್ಥಾಪಿಸಿ ಅನೇಕ ವಿದ್ಯಾರ್ಥಿಗಳು ವ್ಯಾಸಂಗಕ್ಕೆ ಅವಕಾಶ ಮಾಡಿಕೊಟ್ಟಿದ್ದೇನೆ .ಭಾರತಿ ಟೀಚರ್ ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು
ಡಾ. ನಾಗೇಂದ್ರ ಪ್ರಸಾದ್ ಮಾತನಾಡಿ, ಭಾರತಿ ಟೀಚರ್ ಚಿತ್ರದ ಹಾಡನ್ನು ಮಕ್ಕಳ ಸಮ್ಮುಖದಲ್ಲಿ ಬಿಡುಗಡೆ ಮಾಡಿರುವುದು ಹೆಮ್ಮೆಯ ಸಂಗತಿ. ವಿಶೇಷ ಪಾತ್ರದಲ್ಲಿ ಸಚಿವ  ಸಂತೋಷ್ ಲಾಡ್ ನಟಿಸಲು ಒಪ್ಪಿಕೊಂಡಿದ್ದಾರೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ, ಮ್ಯೂಸಿಕ್ ಬಜಾರ್ ಸಂಸ್ಥೆಯ ಮೂಲಕ ಆಡಿಯೋ ಬಿಡುಗಡೆಯಾಗಲಿದೆ .ಕಲೆಗೆ ಹೆಚ್ಚಿನ ಪೆÇ್ರೀತ್ಸಾಹ ಇರಲಿದೆ ಎಂದರು.
ನಿರ್ದೇಶಕ ಎಂ. ಎಲ್ ಪ್ರಸನ್ನ ಮಾತನಾಡಿ ,ಕಥಾನಾಯಕಿ ಊರಿನ ಮಂದಿಯನ್ನು ಸಾಕ್ಷರರನ್ನಾಗಿ ಮಾಡುವ ಕನಸು ಕಟ್ಟಿಕೊಂಡವಳು. ಅದರಲ್ಲಿ ಆಕೆ ಎದುರಿಸುವ ಸಮಸ್ಯೆ, ಆ ಸಮಸ್ಯೆಯನ್ನು ಹೇಗೆ ಮೆಟ್ಟಿ ನಿಲ್ಲುತ್ತಾಳೆ ಎನ್ನುವುದು ಚಿತ್ರದ ತಿರುಳು. 34 ದಿನ ಚಿತ್ರೀಕರಣ ಮಾಡಲಾಗಿದೆ. ಸಚಿವ ಸಂತೋಷ್ ಲಾಡ್ ಅವರ ಎರಡು ದಿನದ ಚಿತ್ರೀಕರಣ ಬಾಕಿ ಇದೆ. ಚಿತ್ರದಲ್ಲಿ ಅವರು ಜಿಲ್ಲಾಧಿಕಾರಿ ಪಾತ್ರ ಮಾಡುತ್ತಿದ್ದಾರೆ. ಚಿತ್ರದಲ್ಲಿ 10 ಹಾಡುಗಳಿವೆ ಎಂದರು.
ನಿರ್ಮಾಪಕ ರಾಘವೇಂದ್ರ ಮಾತನಾಡಿ ಶಿಕ್ಷಣ, ಭಾಷೆ ಮತ್ತು ಕನ್ನಡಿಡಕ್ಕಾಗಿ ಮಾಡಿದ ಚಿತ್ರ ಎಂದರೆ ಕಥಾನಾಯಕಿಯಶಿಕಾ ಮಾತನಾಡಿ, ಮೊದಲ ಚಿತ್ರದ ಹಾಡು ಬಿಡುಗಡೆ ಖುಷಿ ಆಗಿದೆ ಎಂದರು
ಕ್ರಿಯೇವೀಟ್ ಹೆಡ್ ವೆಂಕಟ್ ಗೌಡ ಮಾತನಾಡಿ, ನಿರ್ಮಾಪಕರು ಕನ್ನಡದ ಮೇಲಿನ ಪ್ರೀತಿಗಾಗಿ ಸಿನಿಮಾ ಮಾಡಿದ್ದಾರೆ. ಹೀಗಾಗಿ ತಂಡದ ಜೊತೆ ಕೈಜೋಡಿಸಿದ್ದೇನೆ ಎಂದು ಮಾಹಿತಿ ಹಂಚಿಕೊಂಡರು
ಎಂ.ಎಲ್ ಪ್ರಸನ್ನ ಚಿತ್ರಕ್ಜೆ ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ  ಸಂಗೀತ  ನೀಡುವ ಜೊತೆಗೆ ನಿರ್ದೇಶನದ ಮಾಡಿದ್ದು  ನಿರ್ಮಾಪಕ ಹಾಗು ವಿತರಕ ವೆಂಕಟ್ ಗೌಡ ಕ್ರಿಯೇಟೇವ್ ಹೆಡ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಚಿತ್ರಕ್ಕೆ ರಾಘವೇಂದ್ರ ರೆಡ್ಡಿ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.
ಚಿತ್ರದಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ವಿಶೇಷ ಪಾತ್ರದಲ್ಲಿ  ನಟಿಸಿದ್ದಾರೆ. ಸಿಹಿ ಕಹಿ ಚಂದ್ರು , ಕುಮಾರಿ ಯಶಿಕಾ, ಗೋವಿಂದೇ ಗೌಡ, ಅಶ್ವಿನ್ ಹಾಸನ್ಣ  ದಿವ್ಯಾ ಅಂಚನ್ ,  ಬೆನಕ ನಂಜಪ್ಪಣ್ಣ, ರೊಹಿತ್ ರಾಘವೇಂದ್ರ , ಸೌಜನ್ಯ ಸುನೀಲ್ ಹಾಗು ಎಂಜಿ ರಂಗಸ್ವಾಮಿ ಚಿತ್ರದಲ್ಲಿ ನಟಿಸಿದ್ದಾರೆ.
ರಾಘವ್ ಸೂರ್ಯ ಮತ್ತು ದರ್ಶನ್ ಗೌಡ ಕಾರ್ಯಕಾರಿ ನಿರ್ಮಾಪಕರಾಗಿ ಕೈ ಜೋಡಿಸಿದ್ದಾರೆ.  ಎಂ. ಬಿ ಆಳ್ಳಿಕಟ್ಟಿ,, ಕೆ.ಎಂ ಇಂದ್ರ ಸಂಗೀತವಿದೆ.