ಕನ್ನಡ ಕಿರುತೆರೆಯಲ್ಲಿ ವೆಬ್‍ಸೀರೀಸ್ ಇದೀಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಇದೀಗ ಅದರ ಮುಂದುವರಿದ ಭಾಗವಾಗಿ " ಮಾರಿಗಲ್ಲು " ವೆಬ್‍ಸೀರೀಸ್ ಅಕ್ಟೋಬರ್ 31 ರಿಂದ “ಜೀ 5” ನಲ್ಲಿ ಪ್ರಸಾರ ಆಗಲಿದೆ. 7 ಭಾಷೆಯಲ್ಲಿ ವೆಬ್ ಸೀರೀಸ್ ಪ್ರಸಾರ ಆಗುತ್ತಿದ್ದು ಮೊದಲು ಕನ್ನಡದಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ.
 
ಪಿ ಆರ್ ಕೆ ಪೆÇ್ರಡಕ್ಷನ್ಸ್ ಸಂಸ್ಥೆ “ಮಾರಿಗಲ್ಲು” ವೆಬ್ ಸೀರೀಸ್ ನಿರ್ಮಾಣ ಮಾಡಿದ್ದು ಹಿರಿಯ ಕಲಾವಿದರಾದ ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ , ಪ್ರವೀಣ್ ತೇಜ್, ಪ್ರಶಾಂತ್ ಸಿದ್ದಿ, ಸೂರಜ್, ನೀನಾದ್ ಸೇರಿದಂತೆ ಹಿರಿ-ಕಿರಿಯ ಕಲಾವಿದರ ದಂಡು ವೆಬ್‍ಸೀರೀಸ್ ನಲ್ಲಿ ನಟಿಸಿದ್ದಾರೆ.ಹಲವರಿಗೆ ವೆಬ್ ಸೀರೀಸ್ ಲೋಕ ಹೊಸದು.
ನಿಧಿಯ ಶೋಧದ ಸುತ್ತ ನಡೆಯುವ ಕಥಾಹಂರ ಒಳಗೊಂಡಿದ್ದು 7 ಎಪಿಸೋಡ್‍ನಲ್ಲಿ ಮಾರಿಗಲ್ಲು ಅಕ್ಟೋಬರ್ 31 ರಂದು ಪ್ರಸಾರ ಆಗುತ್ತಿದ್ದು ಪ್ರತಿ ಎಪಿಸೋಡ್ ಕನಿಷ್ಠ 25 ನಿಮಿಷ ಅವಧಿ ಹೊಂದಿದ್ದು ನವೆಂಬರ್ 1 ಕನ್ನಡ ರಾಜ್ಯೋತ್ಸವಕ್ಕೆ ಜೀ 5 ನಲ್ಲಿ ಕನ್ನಡಿಗರಿಗೆ ಕೊಡುಗೆ ನೀಡಲಿದೆ.
“ಮಾರಿಗಲ್ಲು” ಕನ್ನಡ ಕಿರುತೆರೆ ಲೋಕದಲ್ಲಿ ಹೊಸ ಮನ್ವಂತರಕ್ಕ ದಾರಿ ಮಾಡಿಕೊಟ್ಟಿದೆ. ಹಿರಿಯ ಕಲಾವಿದರಾದ ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ ಸೇರಿದಂತೆ ಹಲವು ಕಲಾವಿದರು ವೆಬ್ ಸೀರೀಸ್‍ಗೆ ಬಲಗಾಲಿಟ್ಟಿದ್ದಾರೆ. ಪಿಆರ್‍ಕೆ ಸಂಸ್ಥೆ ನಿರ್ಮಾಣ ಮಾಡಿರುವ ಈ ವೆಬ್ ಸೀರೀಸ್‍ನ ಟ್ರೈಲರ್ ಬಿಡುಗಡೆ ಮಾಡಲಾಗಿದೆ, ವೆಬ್ ಸಿರೀಸ್ ಟ್ರೈಲರ್ ಬಿಡುಗಡೆ ಮಾಡಿದ್ದೂ ಕನ್ನಡದ ಮಟ್ಟಿದೆ ಹೊಸತನದಿಂದ ಕೂಡಿದ ವಿಷಯ.
ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಮಾತನಾಡಿ, ಮಾರಿಗಲ್ಲು ವಿಶೇಷ ಕಥೆಯನ್ನು ಒಳಗೊಂಡ ಕಥನವಾಗಿದೆ, ಪುನೀತ್ ರಾಜ್‍ಕುಮಾರ್ ಅವರಿಗೆ ವೆಬ್ ಸೀರೀಸ್ ಮಾಡುವ ಕನಸು ಕಂಡಿದ್ದರು, ಹೊಸ ಹೊಸ ಕಥೆಗಳನ್ನು ಪ್ರೇಕ್ಷಕರ ಮುಂದೆ ಇಡುವ ಉದ್ದೇಶ ನಮ್ಮದು. ಹಿರಿಯ ಕಲಾವಿದರು ವೆಬ್ ಸೀರೀಸ್‍ನಲ್ಲಿ ನಟಿಸಿರುವುದು ಖುಷಿಕೊಟ್ಟಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೊತತನದಿಂದ ಕೂಡಿದ ವೆಬ್ ಸೀರೀಸ್ ಬಿಡುಗಡೆ ಮಾಡುವ ಉದ್ದೇಶ ನಮ್ಮದು ಎಂದು ಹೇಳಿದರು.
 
ನಿರ್ದೇಶಕ ದೇವರಾಜ್ ಪೂಜಾರಿ ಮಾತನಾಡಿ ಶಿರಸಿ ಸುತ್ತ ಮುತ್ತ ಮಳೆಯಲ್ಲಿ ಚಿತ್ರೀಕರಣ ಮಾಡಿದ್ದೇವೆ.ರಂಗಾಯಣ ರಘು ಸೇರಿದಂತೆ ಎಲ್ಲಾ ಕಲಾವಿದರು ಮಳೆಯಲ್ಲಿಯೂ ನಟಿಸಿದ್ದಾರೆ. 7 ಭಾಷೆಯಲ್ಲಿ ಪ್ರಸಾರ ಆಗಲಿದ್ದು ಮೊದಲು ಕನ್ನಡದಲ್ಲಿ ಜನರ ಮುಂದೆ ಬರಲಿದೆ. ಶಿರಸಿಯ ಭಾಷೆ,ಸಂಸ್ಕøತಿ, ಆಚಾರ ವಿಚಾರಗಳನ್ನು ಸೆರೆ ಹಿಡಿಯಲಾಗಿದೆ ಎಂದರು.
ಹಿರಿಯ ಕಲಾವಿದ ರಂಗಾಯಣ ರಘು ಮಾತನಾಡಿ ಸಿನಿಮಾ ನಟನೆಗೂ ವೆಬ್ ಸೀರೀಸ್ ನಟನೆಗೂ ಯಾವುದೇ ವ್ಯತ್ಯಾಸವಿಲ್ಲ, ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸಿದ್ದೇನೆ. ನಿಧಿ ಶೋಧ ಮಾಡುವ ಪಾತ್ರ ಎಂದು ಹೇಳಿದರು.
ಮತ್ತೊಬ್ಬ ಹಿರಿಯ ಕಲಾವಿದ ಗೋಪಾಲಕೃಷ್ಣ ದೇಶಪಾಂಡೆ, ಹಿರಿಯ ನಟ ರಂಗಾಯಣ ರಘು ಅವರ ಜೊತೆ ಶಾಖಾಹಾರಿ ಸಿನಿಮಾದಲ್ಲಿ ನಟಿಸಿದ್ದೆ,ಇದೀಗ ವೆಬ್ ಸೀರೀಸ್‍ನಲ್ಲಿ ಮತ್ತೊಮ್ಮೆ ನಟಿಸಿದ್ದೇನೆ, ಅವರ ಜೊತೆ ಒಮ್ಮೆ ನಟಿಸಿದರೆ ಒಂದು ವರ್ಷ ಯಾವುದೇ ಸಮಸ್ಯೆ ಇಲ್ಲದೆ ಆರಾಮಾಗಿ ನಟಿಸಬಹುದು ಎಂದರು.
ಜೀಕನ್ನಡ ಮತ್ತು ಕನ್ನಡ ಜೀ 5 ಬ್ಯುಸಿನೆಸ್ ಹೆಡ್ ದೀಪಕ್ ಶ್ರೀರಾಮುಲು ಮಾತನಾಡಿ, ದೊಡ್ಡ ದೊಡ್ಡ ಸಂಸ್ಥೆಗಳು ಮಾತ್ರವಲ್ಲ ಸಣ್ಣ ಪುಟ್ಟ ಸಂಸ್ಥೆಗಳು ಒಳ್ಳೆಯ ಕಥೆ ತಂದರೆ ವೆಬ್ ಸೀರೀಸ್ ನಿರ್ಮಾಣ ಮಾಡಲು ಸಿದ್ದರಿದ್ದೇವೆ, ನಮಗೆ ಯಾವುದೇ ಕಟ್ಟುಪಾಡು ಇಲ್ಲ, ಒಳ್ಳೆಯ ವೆಬ್ ಸೀರೀಸ್ ಜನರ ಮುಂದಿಡುವುದಷ್ಟೇ ನಮ್ಮ ಉದ್ದೇಶ ಎಂದುರು.
ಜೀ5 ಒರಿಜಿನಲ್ ಮುಖ್ಯಸ್ಥ ಪ್ರದೀಪ್ ಮಾತನಾಡಿ, ವರ್ಷಕ್ಕೆ ಕನಿಷ್ಠ 8 ರಿಂದ 10 ವೆಬ್ ಸೀರೀಸ್ ಅನ್ನು ಪ್ರೇಕ್ಷಕರ ಮುಂದೆ ಇಡುವ ಪ್ರಯತ್ನ ನಮ್ಮದು, ಇದೇ ತಿಂಗಳ 31ರಂದು ಮಾರಿಗಲ್ಲು ವೆಬ್ ಸೀರೀಸ್ ಪ್ರಸಾರ ಆಗಲಿದೆ, ಈಗಾಗಲೇ ಎರಡೂ ವೆಬ್ ಸಿರೀಸ್ ಚಿತ್ರೀಕರಣದ ಹಂತದಲ್ಲಿ ಒಂದರ ಹಿಂದೆ ಒಂದು ವೆಬ್ ಸೀರೀಸ್ ಬಿಡುಗಡೆ ಮಾಡಬೇಕು ಎನ್ನುವು ಉದ್ದೇಶದಲ್ಲಿ ಇಡೀ ತಂಡ ಕೆಲಸ ಮಾಡುತ್ತಿದೆ, ಹೊಸ ಹೊಸ ಜಾನರ್‍ನಿಂದ ಕೂಡಿದ ಕಥೆಯನ್ನಯ ಜನರ ಮುಂದೆ ತರುತ್ತೇವೆ, ಕನ್ನಡ ರಾಜ್ಯೋತ್ಸವಕ್ಕೆ ಕೊಡುಗೆ ಆಗಿ ಮಾರಿಗಲ್ಲು ವೆಬ್ ಸೀರೀಸ್ ತೆರೆಗೆ ತರುತ್ತಿದ್ದೇವೆ ಎಂದು ಹೇಳಿದರು.
ಕಲಾವಿದರಾದ ಪ್ರವೀಣ್ ತೇಜ್, ಪ್ರಶಾಂತ್ ಸಿದ್ದಿ, ಸೂರಜ್, ಛಾಯಾಗ್ರಾಹಕ ಎಸ್,ಕೆ ಸೇರಿದಂತೆ ಇಡೀ ತಂಡ ಮಾಹಿತಿ ಹಂಚಿಕೊಂಡಿತು.