ಒಂದು ಹಾಳು ಬಂಗಲೆ, ಅಲ್ಲಿರುವ ಒಂದಷ್ಟು ಆತ್ಮಗಳು ಆ ಮನೆಗೆ ಹೋದವರಿಗೆಲ್ಲ ಕಾಟ ಕೊಡುವುದು, ಈ ಥರದ ಕಥೆಗಳು ಸಾಕಷ್ಟು ಬಂದು ಹೋಗಿವೆ. ಆದರೆ ನಾಯಿ ಇದೆ ಎಚ್ಚರಿಕೆ ಅದೇ ಕಥೆಯಾದರೂ ಅದರಲ್ಲಿ ಒಂದು ವಿಶೇಷವಿದೆ. ಹೊಸತನವಿದೆ. ಆ ಇಡೀ ಕಥೆಯ ಹಿಂದೆ ಒಂದು ನಾಯಿಯ ಪಾತ್ರವಿದೆ, ಅದನ್ನು ಅಷ್ಟೇ ರೋಚಕವಾಗಿ ನಿರ್ದೇಶಕ ಕಲಿಗೌಡ ಅವರು ತೆರೆಮೇಲೆ ತಂದಿದ್ದಾರೆ.
ಲೀಲಾಮೋಹನ್ ವೃತ್ತಿಯಲ್ಲಿ ವೈದ್ಯ. ಮುದ್ದಾದ ಹೆಂಡತಿಯೂ ಇರುತ್ತಾಳೆ. ಸರ್ಕಾರಿ ಹರಾಜಿನಲ್ಲಿ ಉತ್ತಮ ಬೆಲೆಗೆ ಸಿಕ್ಕುತು ಅಂತ ಶಿಡ್ಲಘಟ್ಟದ ಹೊರವಲಯದಲ್ಲಿರುವ ಅತ್ಯಂತ ಹಳೆಯದಾದ ಬೃಹತ್ ಬಂಗಲೆಯನ್ನು ಖರೀದಿಸಿರುತ್ತಾರೆ.
ಆದರೆ ಆ ಮನೆಯಲ್ಲಿ 30 ವರ್ಷಗಳ ಹಿಂದೆ ಒಂದು ದುರ್ಘಟನೆ ನಡೆದಿರುತ್ತದೆ, ಅಂದಿನಿಂದ ಆ ಮನೆಯನ್ನು ಯಾರೇ ಖರೀದಿಸಿ ಮನೆಯೊಳಗೆ ಹೋದವರು ಹಿಂದಿರುಗಿ ಬಂದ ಉದಾಹಣೆಗಳೇ ಇಲ್ಲ, ಅವರೆಲ್ಲ ರಕ್ತಕಾರಿ ಸಾಯುತ್ತಾರೆ ಅಥವಾ ಹುಚ್ಚರಾಗಿ ಹೋಗುತ್ತಾರೆ. ಅಂಥ ಪಾಳು ಬಂಗಲೆಯನ್ನು ಖರೀದಿಸಿದ್ದ ಲೀಲಾ ಮೋಹನ್ ಒಮ್ಮೆ ತನ್ನ ಪತ್ನಿ ಮಾಲಾಗೆ ಸರ್ ಪ್ರೈಸ್ ನೀಡಲೆಂದು ಅಲ್ಲಿಗೆ ಕರೆದುಕೊಂಡು ಹೋಗುತ್ತಾನೆ, ಮಾಟ ಮಂತ್ರ, ಪೂಜೆ, ಅಲ್ಲದೆ ನೆಗೆಟಿವ್ ಶಕ್ತಿಗಳ ಬಗ್ಗೆ ಯಾವುದೇ ನಂಬಿಕೆ ಇರದ ಲೀಲಾಮೋಹನ್‌ಗೆ ಸ್ವಾಮೀಜಿಯೊಬ್ಬರು ಆ ಮನೆ ಸರಿಯಿಲ್ಲ ಎಂದು ಎಚ್ಚರಿಕೆ ಕೊಟ್ಟರೂ ಸಹ ಅದನ್ನು ನಿರ್ಲಕ್ಷೆ ಮಾಡುತ್ತಾನೆ. ಆದರೂ ಅವರು ಒಂದು ಮಂತ್ರದಂಡ ನೀಡಿ ಆಪತಗಕಾಲದಲ್ಲಿ ಉಪಯೋಗವಾಗುತ್ತದೆ ಎಂದು ಹೇಳುತ್ತಾರೆ. ಒಲ್ಲದ ಮನಸಿನಿಂದ ಅದನ್ನು ತೆಗೆದುಕೊಂಡು ಬಂದ ಲೀಲಾ ಮೋಹನ್, ಅದನ್ನು ಆ ದೇವರ ಕೋಣೆಯಲ್ಲಿ ಇಟ್ಟು ಮರೆತುಬಿಡುತ್ತಾನೆ. ಆ ನಂತರ ಮನೆಗೆ ತನ್ನ ಸ್ನೇಹಿತರನ್ನು ಊಟಕ್ಕೆ ಆಹ್ವಾನಿಸುತ್ತಾನೆ. ಅಲ್ಲದೆ ಆತನ ಪತ್ನಿ ಮಾಲಾ ಕೂಡ ತನ್ನ ಇಬ್ಬರು ಸ್ನೇಹಿತೆಯರನ್ನು ಅದೇ ಬಂಗಲೆಗೆ ಆಹ್ವಾನಿಸುತ್ತಾಳೆ. ಮಾಲಾ ಸ್ನೇಹಿತೆಯರಾದ ಜೂಲಿ, ಕಾವ್ಯ ಸಂಜೆ ವೇಳೆಗೆ ಆ ಮನೆಗೆ ಬಂದಿಳಿಯುತ್ತಾರೆ. ಅದೇ ದಿನ ಸಂಜೆ ಎಲ್ಲ ಗೆಳೆಯ ಗೆಳತಿಯರು ಸೇರಿ ಪಾರ್ಟಿ ಮಾಡುತ್ತಾರೆ. ಆ ಸಂದರ್ಭದಲ್ಲಿ ಫುಲ್ ಟೈಟಾಗಿದ್ದ ನಾಯಕನ ಸ್ನೇಹಿತರಾದ ನಾಣಿ ಮತ್ತವನ ಗೆಳೆಯ ತೂರಾಡುತ್ತ ಮನೆಯ ಹಿಂದೆ ಹೋಗುತ್ತಾರೆ. ಅದು ರಾತ್ರಿಯಾಗಿದ್ದ ಕಾರಣ ಅವರಿಗೆ ಅಲ್ಲಿ ಏನೋ ಒಂದು ಹಳೆಯ ಪೆಟ್ಟಿಗೆ ಕಾಣಿಸುತ್ತದೆ, ಅದರಲ್ಲಿ ಏನೋ ನಿಧಿ ಇರಬೇಕೆಂದು ಊಹಿಸಿದ ಆ ಗೆಳೆಯರು ಅದನ್ನು ನೆಲದಿಂದ ಹೊರತೆಗೆದುದಲ್ಲದೆ ಮನೆಯೊಳಗೂ ತಂದು ಬಿಡುತ್ತಾರೆ, ಆ ಪೆಟ್ಟಿಗೆಯೊಳಗೆ ದಿಗ್ಬಂಧನದಲ್ಲಿದ್ದ ನೆಗೆಟಿವ್ ಎನರ್ಜಿ ಅಲ್ಲಿಂದ ಹೊರಬಂದು ಎಲ್ಲರ ದೇಹದೊಳಗೆ ಪ್ರವೇಶಿಸುತ್ತದೆ.
ನಂತರ ಆ ಮನೆಯ ಚಿತ್ರಣವೇ ಬದಲಾಗುತ್ತದೆ, ಎಲ್ಲರೂ ತಮ್ಮ ರೂಪದಿಂದ ಬದಲಾಗ್ತಾ ಹೋಗುತ್ತಾರೆ, ಕಾಣದ ದುಷ್ಡ ಶಕ್ತಿಯೊಂದು ಅವರನ್ನಾವರಿಸಿ ಎಲ್ಲರೂ ಚಿತ್ರವಿಚಿತ್ರವಾಗಿ ವರ್ತಿಸುತ್ತಾರೆ, ವಿಚಿತ್ರರೂಪ ಅವರದಾಗುತ್ತದೆ, ಮಾಲಾ, ಜೂಲಿ, ಕಾವ್ಯ, ಸಿದ್ದಾರ್ಥ್, ಅರವಿಂದ್, ಅಮೋಘ್ ಹೀಗೆ ಆ ಮನೆಯ ಎಲ್ಲರಿಗೂ ಜಾಂಬಿ ಅಟ್ಯಾಕ್ ಆಗುತ್ತದೆ. ೯ ಜನರೂ ಆ ಬಂಗಲೆಯಲ್ಲಿ ಬಂಧಿಗಳಾಗುತ್ತಾರೆ ಇದು ಸ್ವಾಮೀಜಿಗೂ ಗೊತ್ತಾಗುತ್ತದೆ.
ಅವರು ಆ ಮನೆಗೆ ಬಂದಮೇಲೆ ನಡೆದ ಘಟನೆಯ ಏನೆಂದು ತಿಳಿಯುತ್ತದೆ, ಲೀಲಾಮೋಹನ್‌ಗೆ ಆ ಆಮನೆಯಲ್ಲಿ 30 ವರ್ಷಗಳ ಹಿಂದೆ ನಡೆದಂಥ ಘೋರ ದುರಂತವನ್ನು ವಿವರಿಸುತ್ತಾನೆ. ಅದು ಏನೆಂದು ತಿಳಿಯಲು ನೀವು ಇಂದೇ ಥೇಟರಿಗೆ ತೆರಳಿ ನಾಯಿ ಇದೆ ಎಚ್ಚರಿಕೆ ಚಿತ್ರವನ್ನು ವೀಕ್ಷಿಸಬೇಕು. ಚಿತ್ರದ ಕಥೆ ಹೊಸದೇನಲ್ಲದಿದ್ದರೂ, ಹೊಸತನದ ನಿರೂಪಣೆಯ ಮೂಲಕ ನಿರ್ದೇಶಕರು ಗೆದ್ದಿದ್ದಾರೆ.ಇಡೀ ಚಿತ್ರವನ್ನು ಕುತೂಹಲಕಾರಿಯಾಗಿ ನಿರೂಪಿಸಿದ್ದಾರೆ. ಚಿತ್ರದ ಕ್ಯಾಮೆರಾ ವರ್ಕ್ ಹಿನ್ನೆಲೆ ಸಂಗೀತ ಕಥೆಗೆ ಪೂರಕವಾಗಿ ಮೂಡಿಬಂದಿದೆ,