``ದಿ ಡೆವಿಲ್`` ಚಿತ್ರಕ್ಕಾಗಿ ಎರಡು ಚಿತ್ರಗಳನ್ನು ಬಿಟ್ಟಿದ್ದೇನೆ. ದಿ ಡೆವಿಲ್ ಚಿತ್ರರಂಗದದ ಕೆರಿಯರ್ ನಲ್ಲಿ ಮಹೋನ್ನತ ಚಿತ್ರವಾಗಲಿದೆ.
ಹೀಗಂತ ಆತ್ಮವಿಶ್ವಾಸದಿಂದ ಹೇಳಿದರು ನಟಿ ರಚನಾ ರೈ... ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ದಿ ಡೆವಿಲ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಚಿತ್ರ ಡಿಸೆಂಬರ್ 11 ಕ್ಕೆ ಬಿಡುಗಡೆ ಆಗುತ್ತಿರುವ ಹಿನ್ನೆಲೆಯಲ್ಲಿ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಚಿತ್ರಕ್ಕಾಗಿ ಆಡಿಷನ್ ಕೊಟ್ಟು ಆಯ್ಕೆಯಾಗಿದ್ದೇನೆ. ಚಿತ್ರ ಬಿಡುಗಡೆಗೆ ಎದುರು ನೋಡುತ್ತಿದ್ದೇನೆ. ಚಿತ್ರಜೀವನದಲ್ಲಿ ಮಹತ್ವದ. ಚಿತ್ರವಾಗಲಿದೆ ಅದರ ಸಂಪೂರ್ಣ ಶ್ರೇಯ ನಿರ್ದೇಶಕ ಪ್ರಕಾಶ್ ವೀರ್ ಹಾಗು ನಟ ದರ್ಶನ್ ಅವರಿಗೆ ಸಲ್ಲಬೇಕು. ದರ್ಶನ್ ಅವರ ಜೊತೆ ನಟಿಸುವ ಅವಕಾಶ ಸಿಕ್ಕಿದ್ದು ಪುಣ್ಯ ಎಂದು ಹೇಳಿದರು.
ಕನ್ನಡದ ನಟಿಯರಿಗೆ ಚಿತ್ರದಲ್ಲಿ ಅವಕಾಶ ನೀಡಬೇಕು ಎಂದು ದರ್ಶನ್ ಸಾರ್ ಹೇಳುತ್ತಿರುತ್ತಾರೆ.ಹೀಗಾಗಿ ಚಿತ್ರದಲ್ಲಿ ನಟಿಸಲು ಅವಕಾಶ ಸಿಕ್ಕಿದೆ. ಇನ್ನು ಮುಂದೆ ಯಾವುದೇ ಚಿತ್ರದಲ್ಲಿ ನಟಿಸಿದರೂ ದಿ ಡೆವಿಲ್ ಎಂದೂ ಮರೆಯುವುದಿಲ್ಲ. ಚಿತ್ರದ ಎಲ್ಲಾ ಶ್ರೇಯವನ್ನು ನಟ ದರ್ಶನ್ ಮತ್ತು ನಿರ್ದೇಶಕ ಪ್ರಕಾಶ್ ವೀರ್ ಅವರಿಗೆ ಅರ್ಪಿಸುತ್ತೇನೆ ಎಂದರು.
ನಿರ್ದೇಶಕ ಪ್ರಕಾಶ್ ವೀರ್ ಮಾತನಾಡಿ ಮೊದಲ ಆಡಿಷನ್ ಮೂಲಕ ನಟಿ ರಚನಾ ರೈ ಅವರನ್ನು ಚಿತ್ರಕ್ಕೆ ಆಯ್ಕೆ ಮಾಡಲಾಯಿತು. ಮೊದಲು ಒಮ್ಮೆ ಆಡಿಷನ್ ಕೊಟ್ಟಿದ್ದರು. ನಂತರ ಎರಡನೇ ಬಾರಿ ಕರೆಸಿ ಆಡಿಷನ್ ನಂತರ ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳಲಾಯಿತು. ಸಿಕ್ಕ ಅವಕಾಶ ಬಳಸಿಕೊಂಡಿದ್ದಾರೆ ಎಂದು ಹೇಳಿದರು.