Chief Editor
Manohar. R (Manu)
Photo Journalist
chitrataramanu@gmail.com
+91 9845549026
``ಒಬ್ಬನೆ ಶಿವ`` ಚಿತ್ರದಲ್ಲಿ "ಪಿ.ಯು.ಸಿ" ಖ್ಯಾತಿಯ ಚೇತನ್ ಚಂದ್ರ ವಿ.ಪಿ.ಶಂಕರ್ ನಿರ್ಮಾಣ ಹಾಗೂ ನಿರ್ದೇಶನದ ಈ ಚಿತ್ರದ ಬಹುತೇಕ ಚಿತ್ರೀಕರಣ ಪೂರ್ಣ
Posted date: 29 Thu, Jan 2026 05:19:45 PM
"ಪಿ.ಯು.ಸಿ" ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ನಟ ಚೇತನ್ ಚಂದ್ರ, "ಪ್ರೇಮಿಸಂ" ಮುಂತಾದ ಚಿತ್ರಗಳಲ್ಲಿ ನಟಿಸಿ ಜನಪ್ರಿಯರಾದರು. ಪ್ರಸ್ತುತ ಚೇತನ್ ಚಂದ್ರ "ಒಬ್ಬನೆ ಶಿವ" ಎಂಬ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. URBAN LEGEND ಲಾಂಛನದಲ್ಲಿ ವಿ.ಪಿ.ಶಂಕರ್ ಅವರು ಈ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ. ಕನ್ನಡ ಹಾಗೂ ತಮಿಳು ಎರಡು ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ‌. ಕೋಲಾರ ಹಾಗೂ ಬೆಂಗಳೂರಿನಲ್ಲಿ ಈಗಾಗಲೇ ಶೇಕಡಾ 80ರಷ್ಟು ಚಿತ್ರೀಕರಣ ಮುಕ್ತಾಯವಾಗಿದೆ. ಏಪ್ರಿಲ್ ನಲ್ಲಿ ತೆರೆಗೆ ತರುವ ಸಿದ್ದತೆ ನಡೆಯುತ್ತಿದೆ.     
 
ಮೂರು ಹಾಡುಗಳಿರುವ ಈ ಚಿತ್ರಕ್ಕೆ ಸತ್ಯ ಕಶ್ಯಪ್ ಸಂಗೀತ ನೀಡುತ್ತಿದ್ದಾರೆ. ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮ ಅವರ ಚಿತ್ರಕ್ಕೂ ಸತ್ಯ ಕಶ್ಯಪ್ ಸಂಗೀತ ನೀಡಿದ್ದಾರೆ. ಕೋರ್ಟ್ ರೂಮ್ ಡ್ರಾಮ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕ ವಿ.ಪಿ.ಶಂಕರ್ ಅವರೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಸಜನ್ ಛಾಯಾಗ್ರಹಣ ಹಾಗೂ ಅನ್ಬು ಸಂಕಲನ "ಒಬ್ಬನೆ ಶಿವ" ಚಿತ್ರಕ್ಕಿದೆ.      

ಚೇತನ್ ಚಂದ್ರ, ಮಹಾಲಕ್ಷ್ಮೀ, ತೇಜ, ಕಿಂಗ್ ಮೋಹನ್, ವಿಶಾಲ್, ರತನ್ ಗಣಪತಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
GALLERY
Kannada Cinema's Latest Wallpapers
Kannada Cinema's Latest Videos
Kannada Movie/Cinema News - ``ಒಬ್ಬನೆ ಶಿವ`` ಚಿತ್ರದಲ್ಲಿ "ಪಿ.ಯು.ಸಿ" ಖ್ಯಾತಿಯ ಚೇತನ್ ಚಂದ್ರ ವಿ.ಪಿ.ಶಂಕರ್ ನಿರ್ಮಾಣ ಹಾಗೂ ನಿರ್ದೇಶನದ ಈ ಚಿತ್ರದ ಬಹುತೇಕ ಚಿತ್ರೀಕರಣ ಪೂರ್ಣ - Chitratara.com
Copyright 2009 chitratara.com Reproduction is forbidden unless authorized. All rights reserved.

Fatal error: Uncaught ArgumentCountError: mysqli_close() expects exactly 1 argument, 0 given in /var/www/2abd550b-0850-492e-b3fe-6b047f2ad0c0/public_html/show-content.php:95 Stack trace: #0 /var/www/2abd550b-0850-492e-b3fe-6b047f2ad0c0/public_html/show-content.php(95): mysqli_close() #1 {main} thrown in /var/www/2abd550b-0850-492e-b3fe-6b047f2ad0c0/public_html/show-content.php on line 95