Chief Editor
Manohar. R (Manu)
Photo Journalist
chitrataramanu@gmail.com
+91 9845549026
ವಿಜಯನಗರ ಸಾಮ್ರಾಜ್ಯದ ಸಂತ ಸಮಾಗಮದ ``ಸಂಕೀರ್ತನ`` ಏಪ್ರಿಲ್ 17 ಕ್ಕೆ ತೆರೆಗೆ
Posted date: 07 Tue, Apr 2026 08:52:52 PM
ಕನ್ನಡ ಚಿತ್ರರಂಗದ ಹಿರಿಯ ಕಲಾವಿದರಾದ ಕೆ. ಪದ್ಮಕಲಾ ಗುಂಡೂರಾವ್ ಹಾಗು ಸ್ನೇಹಿತರು ನಿರ್ಮಾಣ ಮಾಡಿರುವ " ಸಂಕೀರ್ತನ " ಚಿತ್ರ ಏಪ್ರಿಲ್ 17 ಕ್ಕೆ ತೆರೆಗೆ ಬರಲು ಸಜ್ಜಾಗಿದೆ.

ವಿಜಯ ನಗರ ಸಾಮ್ರಾಜ್ಯದ ಸುವರ್ಣ ಯುಗದ ಸಂತರ ಸಮಾಗಮದ ಕುರಿತು ಹಿರಿಯ ಕಲಾವಿದರೂ ಆಗಿರುವ ನಿರ್ದೇಶಕ  ಡಿ.ಎಸ್ ಮಂಜುನಾಥ್ (ಕಲಾಗಂಗೋತ್ರಿ ಮಂಜು) ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

ಚಿತ್ರಕ್ಕೆ  ಕೆ.ಪದ್ಮ ಕಲಾ ಗುಂಡೂರಾವ್,  ಜೆ. ಎಂ ಪ್ರಹ್ಲಾದ್, ಡಿ.ಎಸ್ ಮಂಜುನಾಥ್,  ಎಚ್. ವಿಜಯ ಭಾಸ್ಕರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ‌. ಎಲ್ಲರೂ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.

ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ತಂಡ ಹಾಡುಗಳ ಪ್ರದರ್ಶನ ಹಮ್ಮಿಕೊಂಡಿತ್ತು. ಈ ವೇಳೆ ಚಿತ್ರತಂಡ ಮಾತಿಗಿಳಿಯಿತು.

ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವ. ಜೆ.ಎಂ ಪ್ರಹ್ಲಾದ್ ಮಾತನಾಡಿ, ಹದಿನೈದು ವರ್ಷದ ಹಿಂದೆ ಯಳವನಕಟ್ಟೆ ಗಿರಿಯಮ್ಮ ಧಾರಾವಾಹಿ ಬರೆದಿದ್ದೆ. ದಾಸ ಸಾಹಿತ್ಯದ ಬಗ್ಗೆ ಜನರ ಒಲವಿದೆ ಎನ್ನುವುದು ತಿಳಿಯಿತು. ದಾಸ ಸಾಹಿತ್ಯದ ಬಗ್ಗೆ ಪದ್ಮ ಕಲಾ ಅವರಿಗೆ ಒಲವಿತ್ತು. ಅವರು ಸಮ್ಮತಿ ನೀಡಿದರು. ವಾಹಿನಿ ಯೊಂದಕ್ಕೆ ಧಾರಾವಾಹಿ ಮಾಡಲು ಚರ್ಚೆ ಕೂಡ ನಡೆಸಿದ್ದೆವು. ಅವರೂ ಒಪ್ಪಿಕೊಂಡಿದ್ದರು. ಮಾರುಕಟ್ಟೆ ನಾವೇ ಮಾಡವೇಕಾಗಿದ್ದರಿಂದ ಅದು ಸಾದ್ಯವಾಗುತ್ತಿಲ್ಲ ಎನ್ನುವುದು ತಿಳಿಸಿದ ನಂತರ ಸಿನಿಮಾ ಮಾಡಲು ನಿರ್ಧರಿಸಿದೆವು ಎಂದರು.

ಒಂದು ಕಾಲಘಟ್ಟದ ಸಂತರ ಕಥೆಯನ್ನು ಆಧರಿಸಿ ಚಿತ್ರ ಮಾಡಲಾಗಿದೆ. ದಾಸರ ನಡುವೆ ಭಿನ್ನಾಭಿಪ್ರಾಯವಿದ್ದರೂ ಭಕ್ತಿ ಸಿದ್ದಾಂತದಲ್ಲಿ ಎಲ್ಲರೂ ಒಂದಾಗಿದ್ದರು. ಕಾಲದ ರಾಜ್ಯದ ಮಹಾಪರಂಪರೆಯ ಸಮಾಗಮ ದಾಖಲಿಸುವ ಉದ್ದೇಶದಿಂದ ಚಿತ್ರ ಮಾಡಲಾಗಿದೆ.  ನವರಾತ್ರಿ ಗೆ ಹಂಪಿಗೆ ಬರುವ ವ್ಯಾಪಾರಿಗಳು, ಸಂತರು ಸೇರಿದಂತೆ ಕಾಲಘಟ್ಡದ ಕಥೆಯನ್ನು ಚಿತ್ರದ ಮೂಲಕ ಕಟ್ಟಿಕೊಡಲಾಗಿದೆ ಎಂದು ಹೇಳಿದರು.

ಸಂಗೀತ ನಿರ್ದೇಶಕ ಪ್ರವೀಣ್ ಡಿ ರಾವ್ ಸಂಗೀತ ನೀಡಿದ್ದು  15 ಕೀರ್ತನೆಗಳಿವೆ.ಸಂಗೀತ, ಭಕ್ತಿ ಒಳಗೊಂಡಿರುವ ಚಿತ್ರ. 16 ನೇ ಶತಮಾನದ ಕಾಲಘಟ್ಟವನ್ನು ಚಿತ್ರದ ಮೂಲಕ ಕಟ್ಟಿಕೊಡಲಾಗಿದೆ ಎಂದರು.

ನಿರ್ದೇಶಕ ಕಲಾಗಂಗೋತ್ರಿ ಮಂಜು ಮಾತನಾಡಿ  ಸೆಟ್ ನಿರ್ಮಾಣ ಮಾಡಿಕೊಂಡು ಚಿತ್ರೀಕರಣ ಮಾಡಲಾಗಿದೆ. ಒಂದೇ ಒಂದು ದೃಶ್ಯವನ್ನು ಆನೆಗುಂದಿಯಲ್ಲಿ ಚಿತ್ರೀಕರಣ ಮಾಡಲಾಗಿದೆ. ಆ ದಿನಗಳಿಗೆ ಹೋಗುವ ಪ್ರಯತ್ನ ಮಾಡಲಾಗಿದೆ. ಚಿತ್ರ ನೋಡಿದ ಹಿರಿಯರು ಒಳ್ಳೆಯ ಅಭಿಪ್ರಾಯ ಕೊಟ್ಟಿದ್ದಾರೆ ಎಂದರು.

ಪಾತ್ರಗಳಲ್ಲಿ ಹಿರಿಯ ಕಲಾವಿದರಾದ  ಶ್ರೀಧರ್, ರಾಮಕೃಷ್ಣ, ರಮೇಶ್ ಭಟ್,  ಅಜಯ್ ರಾಜ್, ಅಶೋಕ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.

ಕೆ.ಪದ್ಮ ಕಲಾ ಗುಂಡೂರಾವ್ ಮಾತನಾಡಿ, ಚಿಕ್ಕಂದಿನಿಂದ ದಾಸರ ಬಗ್ಗೆ ತಿಳಿದುಕೊಳ್ಳುವ ಕುತೂಹಲವಿತ್ತು. ಹದಿನೈದು ವರ್ಷದ ನಂತರ ಕನಸು ನನಸಾಗಿದೆ. ಜಗನ್ನಾಥದಾಸರು ಚಿತ್ರದಲ್ಲಿ ವಸ್ತ್ರ ವಿನ್ಯಾಸ ಮಾಡಿದ್ದೆ. ಅದರಿಂದ ಮತ್ತಷ್ಟು ಉತ್ತೇಜನ ಬಂದು ಚಿತ್ರ ಮಾಡಿದ್ದೇವೆ. ಕಲಾಗಂಗೋತ್ರಿ ಮಂಜು ಹಾಗು ಪ್ರಹ್ಲಾದ  ಹಾಗು ವಿಜಯ್ ಭಾಸ್ಕರ್ ಸಹಕಾರದಿಂದ ಚಿತ್ರ ಪೂರ್ಣಗೊಂಡಿದೆ. ಜಗತ್ತಿನಾದ್ಯಂತ ಚಿತ್ರ ಬಿಡುಗಡೆ ಮಾಡುವ ಉದ್ದೇಶವಿದೆ. ಮೊದಲು  20 ಲಕ್ಷ ದಲ್ಲಿ ಚಿತ್ರ ಮಾಡೋಣ ಅಂದುಕೊಂಡಿದ್ದೆವು. ಆದರೆ ಅಷ್ಟರಲ್ಲಿ ಆಗಲಿಲ್ಲ. ಮಕ್ಕಳು, ಅಳಿಯಂದಿರು ಸೇರಿದಂತೆ ಕುಟುಂಬದ  ಸಹಕಾರ ನೀಡಿದ್ದರಿಂದ ಚಿತ್ರ ಬಿಡುಗಡೆ ಹಂತಕ್ಕೆ ಬಂದಿದ್ದೇವೆ .ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

ಸಹ ನಿರ್ಮಾಪಕ ವಿಜಯ್ ಭಾಸ್ಕರ್ ಮಾತನಾಡಿ  ಸೋಮನಹಳ್ಳಿ 300 ವರ್ಷದ ಮನೆ, ಕನಕ‌ಗಿರಿಯ ಮುಸಲಾಪುರದ, ಆನೆಗುಂದಿ ಮತ್ತು ಸೆಟ್ ಹಾಕಿ ಚಿತ್ರೀಕರಣ ಮಾಡಲಾಗಿದೆ. 200 ಕ್ಕೂ ಅಧಿಕ‌ ಮಂದಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಬಹುತೇಕರು ಮೊದಲ ಬಾರಿಗೆ ನಟಿಸಿದವರೇ ಹೆಚ್ಚು. ಪದ್ಮ ಕಲಾ ಅವರು ವಿಸ್ತ ವಿನ್ಯಾಸಲ್ಲಿ ತೊಡಗಿಸಿಕೊಂಡಿದ್ದರು. ಏಪ್ರಿಲ್ 17 ರಂದು ಬಿಡುಗಡೆ ಮಾಡಲಾಗುತ್ತಿದೆ ಎಂದರು.
GALLERY
Kannada Cinema's Latest Wallpapers
Kannada Cinema's Latest Videos
Kannada Movie/Cinema News - ವಿಜಯನಗರ ಸಾಮ್ರಾಜ್ಯದ ಸಂತ ಸಮಾಗಮದ ``ಸಂಕೀರ್ತನ`` ಏಪ್ರಿಲ್ 17 ಕ್ಕೆ ತೆರೆಗೆ - Chitratara.com
Copyright 2009 chitratara.com Reproduction is forbidden unless authorized. All rights reserved.

Fatal error: Uncaught ArgumentCountError: mysqli_close() expects exactly 1 argument, 0 given in /var/www/2abd550b-0850-492e-b3fe-6b047f2ad0c0/public_html/show-content.php:95 Stack trace: #0 /var/www/2abd550b-0850-492e-b3fe-6b047f2ad0c0/public_html/show-content.php(95): mysqli_close() #1 {main} thrown in /var/www/2abd550b-0850-492e-b3fe-6b047f2ad0c0/public_html/show-content.php on line 95