Chief Editor
Manohar. R (Manu)
Photo Journalist
chitrataramanu@gmail.com
+91 9845549026
ಸಿಟಿ ಲೈಟ್ಸ್ ಚಿತ್ರದ ಪ್ರೀತಿ ಹಾಡು ಬಿಡುಗಡೆ : ನಾನು ಸ್ಟಾರ್ ಅಂದುಕೊಂಡಿಲ್ಲ... ನಾನೊಬ್ಬ ಕೆಲಸಗಾರ..: ನಿರ್ದೇಶಕ ವಿಜಯ್ ಕುಮಾರ್
Posted date: 25 Tue, Aug 2026 09:59:46 AM
ಸಲಗ, ಭೀಮ ಚಿತ್ರದ ಬಳಿಕ ಸಾಂಡಲ್ ವುಡ್ ಸಲಗ ವಿಜಯ್ ಕುಮಾರ್ ನಿರ್ದೇಶನದ ಮೂರನೇ ಚಿತ್ರ "ಸಿಟಿ ಲೈಟ್ಸ್" ಸೆಪ್ಟೆಂಬರ್ 18 ರಂದು ತೆರೆಗೆ ಬರಲು ಸಜ್ಜಾಗಿದೆ.  ಈ ಹಿನ್ನೆಲೆಯಲ್ಲಿ ಚಿತ್ರದ ನಾಲ್ಕನೇ ಹಾಡು ಬಿಡುಗಡೆಯಾಗಿದ್ದು  ಪ್ರೀತಿಯ ಕುರಿತ ಹಾಡು ಗಮನ ಸೆಳೆದಿದೆ. ಈ ಹಾಡಿನಲ್ಲಿ ಬದುಕು ಕಟ್ಟಿಕೊಂಡ ಜೋಡಿಗಳ ಮೇಲೆ ಚಿತ್ರವಾಗಿದ್ದು  ಚಿತ್ರರಂಗದಲ್ಲಿ ಹೊಸದೊಂದು ಪ್ರಯತ್ನಕ್ಕೆ ಮುನ್ನುಡಿ ಬರೆದಿದೆ.

ಅವರಿವರ ಮಾತು ಕೇಳಿ ಕೊಂಡು ಪ್ರೀತಿ ಕಳೆದುಕೊಳ್ಳಬೇಡಿ..  ಪ್ರೀತಿ ಅಪರೂಪ ಅದನ್ಉ ಕಳೆದುಕೊಳ್ಳಬೇಡಿ....ಇವನ ಕಂಡ್ರೆ ಅವಳು ಪಿಧಾ..  ಇವಳಾ ಕಂಡ್ರೆ ಅವನು ಫಿದಾ.. ಪ್ರೇಮಿಗಳ ಕುರಿತಾದ ಹಾಡನ್ನು  ಯುವ ಕಲಾವಿದರಾದ ಸಿದ್ದು ಮೂಲಿಮನಿ,  ಪಾಯಲ್ ಚಂಗಪ್ಪ, ಸುಧಾಕರ್ ಗೌಡ  ಚಿತ್ರದ ನಾಲ್ಕನೇ ಹಾಡು ಬಿಡುಗಡೆ ಮಾಡಿ ಶುಭ ಹಾರೈಸಿದರು.

ವಿಜಯ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬಂದಿರುವ  "ಸಿಟಿ ಲೈಟ್ಸ್ " ಚಿತ್ರದ ಗೀತೆಗೆ ಚರಣ್ ರಾಜ್ ಸಂಗೀತ ಸಂಯೋಜನೆಯ ಮಾಡಿದ್ದು ನಾಗಾರ್ಜುನ್ ಶರ್ಮಾ ಬರೆದಿರುವ ಗೀತೆಗೆ ಅಂಥೋಣಿ ದಾಸನ್ ಹಾಡಿಗೆ  ಜೀವ ತುಂಬಿದ್ದಾರೆ.

ಸ್ಡಾರ್ ನಟ ಮತ್ತು ನಿರ್ದೆಶಕಾಗಿರುವ ವಿಜಯ್ ಕುಮಾರ್ ಅವರ ಈ ಪ್ರಯತ್ನ ಇತರಿಗೆ ಮಾದರಿಯಾಗಿದ್ದಾರೆ‌
ಯುವ ನಟ ಸಿದ್ದು ಮೂಲಿಮನಿ ಮಾತನಾಡಿ ಹಾಡು ಮುದ್ದಾಗಿ ಮೂಡಿ ಬಂದಿದೆ. ಹಾಡು ನೋಡು ಪತ್ನಿ  ನೆನಪಾದ್ರು..  ‌ಕಂದಮ್ಮ ಹಾಡು ಹೀಗಾಗಲೇ ಗಮನ ಸೆಳೆದಿದೆ. ನಮ್ಮ ಕಾರ್ಯಕ್ರಮದಲ್ಲಿ ನಮ್ಮನ್ನು ಗುರುತಿಸುವುದಿಲ್ಲ. ಅದರಲ್ಲಿ ದೊಡ್ಡ ವೇದಿಕೆಯಲ್ಲಿ ಅವಕಾಶಕ್ಕೆ  ನೀಡಿದಕ್ಕೆ ಧನ್ಯವಾದ ಎಂದರು.

ಪಾಯಲ್ ಚೆಂಗಪ್ಪ ಮಾತನಾಡಿ ಕಂದಮ್ಮ ಹಾಡಿನ ರೀತಿಯಲ್ಲಿ ಈ ಹಾಡನ್ನು ಜನರು ಮೆಚ್ಚುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸುಧಾಕರ್ ಗೌಡ ಮಾತನಾಡಿ ಪ್ರತಿಭೆ ಇದ್ದರೆ ಬಣ್ಣ ಮುಖ್ಯವಾಗಲ್ಲ. ಮನೆಯಲ್ಲಿ ಅನುಮತಿ ಪಡೆಯಬೇಕಾದರೆ ವಿಜಯ್ ಸಾರ್ ಅವರ ಹೆಸರು ಹೇಳಬೇಕು. ಯುವ ಜನರಿಗೆ ದೊಡ್ಡ ಸ್ಪೂರ್ತಿ . ನಾಯಕಿಯರನ್ನು ಹುಡುಕುವುದೇ ಕಷ್ಟ, ಕಥೆಯನ್ನೇ ಕೇಳವುದಿಲ್ಲ ಎಂದರು.

ನಿರ್ದೇಶಕ ವಿಜಯ್ ಕುಮಾರ್ ಮಾತನಾಡಿ ಯುವ ಕಲಾವಿದರು ಚಿತ್ರರಂಗವನ್ನು ಮುನ್ನೆಡೆಸುವರು. ನಿಮ್ಮ ಜೊತೆ ನಾವು ಬರ್ತಾ ಇದ್ದೇವೆ. ನಮ್ಮನ್ನು ಮುಂದಕ್ಕೆ ಕರೆದುಕೊಂಡು ಹೋಗಿ...ಹಾಡಿನಲ್ಲಿ ಬದುಕು ಕಟ್ಟಿಕೊಂಡ ಜೋಡಿಗಳನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಅವರು ನಮಗೆ ಸ್ಪೂರ್ತಿ .ತಾಯಿ- ತಂದೆ ಕಣ್ಣಿಗೆ ಜಾಣುವ ದೇವರು. ಹೀಗಾಗಿಯೇ ಅಪ್ಪ- ಅಮ್ಮನ ಪೋಟೋ ಕೂಡ ಹಾಕಿದ್ದೇನೆ ಎಂದರು.

ಸಿನಿಮಾದ ಕಥೆ ಎಲ್ಲರ ಬದುಕಿಗೆ ಹತ್ತಿರವಾಗುವ ಚಿತ್ರ. ದೊಡ್ಡ ದೋಣಿಗೆ ಸಣ್ಣ ರಂದ್ರವಾದರೂ ಅದು ಮುಳಿಗಿ ಹೋಗುತ್ತದೆ. ಮಾತು ಮುಖ್ಯ. ಮಾತು ಮನುಷ್ಯನನ್ನು ಹೇಗೆ ಡ್ಯಾಮೇಜ್ ಮಾಡುತ್ತದೆ ಎನ್ನುವುದು ಹಾಡಿನ ಸಾಲಿನಲ್ಲಿ ಮುಖ್ಯವಾಗಿದೆ ಎಂದರು.

ಸಿನಿಮಾ ಮತ್ತು ಸಂಗೀತ ಎಂದೂ ಮೋಸ ಮಾಡಲ್ಲ. ಹೀಗಾಗಿ ಕಷ್ಟಪಟ್ಟು ಸಿನಿಮಾ ಮಾಡ್ತಾ ಇದ್ದೇ‌ನೆ. ಹಾಡಿನಲ್ಲಿ ಬಳಸಿಕೊಂಡ ಜೋಡಿಗಳು ಬದುಕು ಕಟ್ಟಿಕೊಂಡು ಬೆಂಗಳೂರಿಗೆ ಬಂದ ಜೋಡಿಗಳನ್ನು ಬಳಸಿಕೊಳ್ಳಲಾಗಿದೆ. ಅವರ ಜೀವನದ ಜೋಡಿಗಳನ್ನು ಹುಡುಕಿ ಹುಡುಕಿ ಪೋಟೋ ತೆಗೆಸಿಕೊಳ್ಳಲಾಗಿದೆ .‌ಈ ಹಾಡು  ಸಿನಿಮಾದಲ್ಲಿ ಇರುವುದಿಲ್ಲ. ಯೂ ಟೂಬ್ ನಲ್ಲಿ ಲಭ್ಯವಿರಲಿದೆ ಎಂದರು.

ಹೆಣ್ಣು ಮಕ್ಕಳು ಸದಾ ಗ್ರೇಟ್. ಅವರ ರಕ್ಷಣೆ ಅಗತ್ಯ. ಚಿತ್ರದಲ್ಲಿ ಪ್ರತಿಯೊಂದು ಅಂಶವೂ ಹೈಲೈಟ್ ಆಗಲಿದೆ. ಸಲಗ ,ಭೀಮ ಚಿತ್ರದ ಮಾದರಿಯಲ್ಲಿ ಇಡೀ ತಂಡ ಕಷ್ಟಪಟ್ಟಿದ್ದೇವೆ. ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದೇವೆ. ಹೆಣ್ಣು ಮಕ್ಕಳಿಗೆ ಗೌರವ ತರುವ ಸಿನಿಮಾ ಎಂದು ಹೆಮ್ಮೆಯಿಂದ ಹೇಳಿಕೊಂಡರು.

ನಾನು ಸ್ಟಾರ್ ಅಂದುಕೊಂಡಿಲ್ಲ.. ಕೆಲಗಾರ. ಒಂದು ದಿನ ಪ್ರಶಸ್ತಿ ಬರುತ್ತೆ ಅದನ್ನು ತೆಗೆದುಕೊಂಡು ಮತ್ತೆ ಕೆಲಸ ಮಾಡಬೇಕು.. ಅದನ್ನು ಪಾಲಿಸಿಕೊಂಡು ಬಂದಿದ್ದೇನೆ.  ಸತ್ಯವನ್ನು ಸತ್ಯವಾಗಿ ತೋರಿಸುವುದು ಸವಾಲಿನ ಕೆಲಸ ಇನ್ನು ಒಂದು ಹಾಡು ಬಾಕಿ ಇದೆ. ಚಿತ್ರಕ್ಕೆ ಎಲ್ಲರ ಸಹಕಾರ ಅಗತ್ಯ  ವಿನಯ್ ರಾಜ್ ಕುಮಾರ್ ಉತ್ತಮ‌ ನಟ. ಅವರ ಜೊತೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ  ಎಂದರು.

ನಟ ವಿನಯ್ ರಾಜ್ ಕುಮಾರ್ ಮಾತನಾಡಿ, ಹಾಡನ್ನು ಅಮ್ಮನಿಗೆ ಕೇಳಿಸಿದೆ. ಅವರು ಖುಷಿ ಪಟ್ಟರು. ಸಿಟಿ ಲೈಟ್ಸ್ ಚಿತ್ರದ ಹಾಡು ಪ್ರೀತಿ ಬಗ್ಗೆ ಮೂಡಿ ಬಂದಿದೆ. ಪ್ರತಿಯೊಂದು ಜೋಡಿಯೂ ಅವರದೇ ಹಾಡು ಪ್ರಚಂಚ ಸೃಷ್ಟಿ ಮಾಡಿಕೊಂಡಿದ್ದಾರೆ. ವಿಜಯ್ ಕುಮಾರ್ ಜೊತೆ ಕೆಲಸ ‌ಮಾಡುವುದು ಅದ್ಬುತ ಅನುಭವ. ಪ್ರೀತಿಗೆ ಒಂದೇ ರೀತಿಯ ವಾಖ್ಯಾನ ಮಾಡಲು ಸಾದ್ಯವಿಲ್ಲ. ಪ್ರೀತಿ ಅಂದರೆ ಸಮಯ ಕೊಡಬೇಕು..   ಚಿತ್ರೀಕರಣ ಮಾಡುವುವಾಗ ಸಿನಿಮಾ ಬಗ್ಗೆ ಕುತೂಹಲ ಹೆಚ್ಚು ಮಾಡಿದೆ ಎಂದು ಹೇಳಿದರು.

ನಟಿ ಮೋನಿಶಾ ಮಾತನಾಡಿ  ಪ್ರೀತಿಯ ಬಗ್ಗೆ ಹೇಳುವಷ್ಟು ತಿಳುವಳಿಕೆ ಇಲ್ಲ. ಚಿತ್ರ ಅತ್ಯುತ್ತಮವಾಗಿ ಮೂಡಿ ಬಂದಿದೆ ಎಲ್ಲರ ಸಹಕಾರವಿರಲಿ‌ ಎಂದರು.

ಗೀತ ರಚನೆಕಾರ ನಾಗಾರ್ಜುನ ಶರ್ಮಾ ಮಾತನಾಡಿ  ಸಿಡಿ ಲೈಟ್ಸ್ ಚಿತ್ರದ ಸೋಲ್. ಪ್ರೀತಿ ಸಿಗೋದು ಅಪರೂಪ. ಅದನ್ನು ಕಾಪಾಡಿಕೊಳ್ಳೋಣ ಎಂದರು.

ಸಂಗೀತ ನಿರ್ದೇಶಕ ಚರಣ್ ರಾಜ್ ಮಾತನಾಡಿ, ನಿರ್ದೇಶಕ ವಿಜಯ್ ಸಾರ್ ಅವರ  ಮಾರ್ಗದರ್ಶನ 
ದಿಂದ ಹಾಡು ಚೆನ್ನಾಗಿ ಮೂಡಿ ಬಂದಿದೆ.  ಸಾಹಿತ್ಯ ಬರೆದು ಹಾಡು ಮಾಡಲಾಗಿದೆ.ಗಾಯಕ ಅಂಥೋಣಿ ದಾಸನ್ ಅವರ ಡಾನ್ಸ್ ನಂಬರ್ ಹಾಡ್ತಾರ.. ಹೀಗಾಗಿ ಅವರ  ಬಳಿ ಹಾಡು ಹಾಡಿಸಲಾಗಿದೆ ಎಂದು ಹೇಳಿದರು.


ಸಂಭಾಷಣೆ ಬರೆದಿರುವ ಮಾಸ್ತಿ, ನೋಡಯ್ಯ ಕೋಟೆ ಲಿಂಗ ಎಂದು  ದುನಿಯಾ ಚಿತ್ರದ ಮೂಲಕ ಬಂದ ಶಿವಲಿಂಗ , ವಿಜಯ್  ಅವರು ಮಗಳನ್ನು ಸಿನಿಮಾ‌ರಂಗಕ್ಕೆ ಪರಿಚಯಿಸುತ್ತಿದ್ದು  ದೊಡ್ಡ ಮನೆ ಕುಟುಂಬದ ಕುಡಿ ವಿನಯ್ ರಾಜ್ ಕುಮಾರ್ ಜೊತೆ ಕೆಲಸ ಮಾಡಿದ್ದಾರೆ ಚಿತ್ರಕ್ಕೆ ಎಲ್ಲರ ಸಹಕಾರವಿರಲಿ ಎಂದರು.

ಛಾಯಾಗ್ರಾಹಕ ಶಿವಸೇನೆ ಚಿತ್ರದ ಅನುಭ ಹಂಚಿಕೊಂಡು ವಿಜಯ್ ಸರ್ ಜೊತೆ ಮೂರನೇ ಸಿನಿಮಾ, ಎಲ್ಲರ ಸಹಕಾವಿರಲಿ ಎಂದು ಹೇಳಿದರು.
GALLERY
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಸಿಟಿ ಲೈಟ್ಸ್ ಚಿತ್ರದ ಪ್ರೀತಿ ಹಾಡು ಬಿಡುಗಡೆ : ನಾನು ಸ್ಟಾರ್ ಅಂದುಕೊಂಡಿಲ್ಲ... ನಾನೊಬ್ಬ ಕೆಲಸಗಾರ..: ನಿರ್ದೇಶಕ ವಿಜಯ್ ಕುಮಾರ್ - Chitratara.com
Copyright 2009 chitratara.com Reproduction is forbidden unless authorized. All rights reserved.

Fatal error: Uncaught ArgumentCountError: mysqli_close() expects exactly 1 argument, 0 given in /var/www/2abd550b-0850-492e-b3fe-6b047f2ad0c0/public_html/show-content.php:95 Stack trace: #0 /var/www/2abd550b-0850-492e-b3fe-6b047f2ad0c0/public_html/show-content.php(95): mysqli_close() #1 {main} thrown in /var/www/2abd550b-0850-492e-b3fe-6b047f2ad0c0/public_html/show-content.php on line 95