Chief Editor
Manohar. R (Manu)
Photo Journalist
chitrataramanu@gmail.com
+91 9845549026
ಜಾರ್ಖಂಡ್ ಚಿತ್ರೋತ್ಸವಕ್ಕೆ -ಮಹಾಕವಿ
Posted date: 30 Wed, Sep 2026 05:57:31 PM
ಬರಗೂರು ರಾಮಚಂದ್ರಪ್ಪ ನಿರ್ದೇಶನದ "ಮಹಾಕವಿ" ಕನ್ನಡ ಚಿತ್ರವು ಜಾರ್ಖಂಡ್ ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಈ ಚಿತ್ರವನ್ನು ಬೆಳಗಾವಿಯ ಪ್ರಭು ಯತ್ನಟ್ಟಿಯವರು ತಮ್ಮ ಪಿ.ಆರ್ ಅಸೋಸಿಯೇಟ್ಸ್ ಸಂಸ್ಥೆಯಿಂದ ನಿರ್ಮಿಸಿದ್ದಾರೆ. ಈ ಚಿತ್ರೋತ್ಸವವು ಅಕ್ಟೋಬರ್ ಕೊನೆಯವಾರದಲ್ಲಿ ನಡೆಯಲಿದೆ.

"ಮಹಾಕವಿ" ಚಿತ್ರವು ಕನ್ನಡದ ಆದಿಕವಿಯೆಂದೇ ಪ್ರಸಿದ್ಧವಾದ ಪಂಪನ ಜೀವನ ಹಾಗೂ ಕಾವ್ಯಗಳ ಆಶಯಗಳನ್ನು ಆಧರಿಸಿ ರೂಪುಗೊಂಡಿದೆ. ಪಂಪಕವಿಯ ಆದಿಪುರಾಣಂ ಮತ್ತು ವಿಕ್ರಮಾರ್ಜುನ ವಿಜಯಂ ಎಂಬ ಎರಡು ಕಾವ್ಯಗಳಲ್ಲಿರುವ ಮತ್ತು ಸಮಕಾಲೀನ ಪ್ರಸ್ತುತತೆಯನ್ನು ಹೊಂದಿರುವ ಸನ್ನಿವೇಶಗಳನ್ನು "ಮಹಾಕವಿ" ಚಿತ್ರವು ಅಳವಡಿಸಿಕೊಂಡಿದೆ. ಜಾತಿ ತಾರತಮ್ಯ ವಿರೋಧಿ ಮತ್ತು ಯುದ್ಧವಿರೋಧಿ ನಿಲುವಿನ ಜೊತೆಗೆ ಸೃಜನಶೀಲ ಸ್ವಾತಂತ್ರ್ಯದ ಸಮಸ್ಯೆಯನ್ನು ಚಿತ್ರಿಸಲಾಗಿದೆ.

ಬರಗೂರರೇ ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರದಲ್ಲಿ ಬಹುಭಾಷಾಕಲಾವಿದ ಕಿಶೋರ್, ಅನುಷಾರೈ, ಸುಂದರರಾಜ್ ಕುಮಾರ್‍ಗೋವಿಂದ್, ಪ್ರಮೀಳಾಜೋಷಾಯ್, ಅಕಾಂಕ್ಷ್‍ಬರಗೂರ್, ಅರಸು, ದಳವಾಯಿ, ಶಾಂತರಾಜು ಮುಂತಾದವರು ಅಭಿನಯಿಸಿದ್ದಾರೆ. ಸುರೇಶ್ ಅರಸು ಸಂಕಲನ, ನಾಗರಾಜ್ ಆದವಾನಿ ಛಾಯಾಗ್ರಹಣ, ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನ, ನಟ್ರಾಜ್ ಶಿವು-ಪ್ರವೀಣ್ ಸಹ ನಿರ್ದೇಶನವಿರುವ ಈ ಚಿತ್ರವು ಈಗಾಗಲೇ ಬಿಡುಗಡೆಗೊಂಡು ಪ್ರದರ್ಶನ ಕಂಡಿದೆ.
GALLERY
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಜಾರ್ಖಂಡ್ ಚಿತ್ರೋತ್ಸವಕ್ಕೆ -ಮಹಾಕವಿ - Chitratara.com
Copyright 2009 chitratara.com Reproduction is forbidden unless authorized. All rights reserved.

Fatal error: Uncaught ArgumentCountError: mysqli_close() expects exactly 1 argument, 0 given in /var/www/2abd550b-0850-492e-b3fe-6b047f2ad0c0/public_html/show-content.php:95 Stack trace: #0 /var/www/2abd550b-0850-492e-b3fe-6b047f2ad0c0/public_html/show-content.php(95): mysqli_close() #1 {main} thrown in /var/www/2abd550b-0850-492e-b3fe-6b047f2ad0c0/public_html/show-content.php on line 95