Chief Editor
Manohar. R (Manu)
Photo Journalist
chitrataramanu@gmail.com
+91 9845549026
ಧೀರ ಯುವಕನ ಗ್ರಾಮೋದ್ದಾರದ ಕನಸು....ರೇಟಿಂಗ್ -: 3.5 / 5 ****
Posted date: 03 Sat, Oct 2026 07:57:25 AM
ಚಿತ್ರ  -:            ಹುಲಿಬೀರ 
ರೇಟಿಂಗ್ -:      3.5 / 5 **** 
ಸಮಯ - :      2ಗಂ 21ನಿ - ಆಕ್ಷನ್ ಡ್ರಾಮಾ- UA16+ 
ರೇಟಿಂಗ್- :       3.5 / 5 ****
ನಿರ್ಮಾಪಕರು: ಸಾಯಿ ಸ್ಟಾರ್ ಸಿನಿಮಾಸ್, ದಾವಲ್ ಸಾಹೇಬ್ ಹುಣಶಿಮರದ, ಅಶೋಕ್ ಎನ್.ತುರುವೇಕೆರೆ ಮತ್ತು ಸುಜಾತಾ ಗಿರೀಶ್
ನಿರ್ದೇಶನ- :   ಮದರಂಗಿ ಮಲ್ಲಿಕಾರ್ಜುನ
ಸಂಗೀತ    :      ವೀರ್ ಸಮರ್ಥ್
ಛಾಯಾಗ್ರಹಣ: ಸನಾತನ
ತಾರಾಗಣ -:      ಅಂಜನ್, ಚಿತ್ರಾ ತೋಟದ್, ವನು ಪಾಟೀಲ್, ರಂಗಾಯಣ ರಘುತ್, ರಂಗಾಯಣ ರಘುತ್, ರಂಗಾಯಣ ರಘುತ್, ರೇವಣ್ಣ ಮತ್ತಿತರರಿದ್ದರು.
 
ಹಳ್ಳಿಯ  ಮುಗ್ಧ ಜನರನ್ನು ವಂಚಿಸಿ  ಅವರ ಜಮೀನನ್ನು, ಸರ್ಕಾರದ ಸಹಾಯ ಧನವನ್ನು ಕಬಳಿಸುವ ಗ್ರಾಮದ ತಲಾಟಿ, ಪಂಚಾಯ್ತಿ ಅಧ್ಯಕ್ಷನ ಅಹಂಕಾರವನ್ನು ಬೀರ ಹೇಗೆ ಮಟ್ಟಹಾಕಿದ ಎಂದು ಹೇಳುವುದೇ ಈವಾರ ತೆರೆಕಂಡಿರುವ ಹುಲಿಬೀರ ಚಿತ್ರದ ಕಥಾಹಂದರ. ಇದರ ಜತೆಗೆ ಉತ್ತರ ಕರ್ನಾಟಕದ ಸೊಬಗು, ಸೌಂದರ್ಯವನ್ನು  ಈ ಚಿತ್ರದಲ್ಲಿ ಆಸ್ವಾದಿಸಬಹುದು.
 
ಅವಿದ್ಯಾವಂತನಾದರೂ ಮಾನವೀಯ ಮೌಲ್ಯಗಳಿಗೆ  ಬೆಲೆ ಕೊಡುವ, ಸಾಹಸಿ ಯುವಕನ ಜೀವನ ಕಥೆಯನ್ನು ನಿರ್ದೇಶಕ ಮದರಂಗಿ ಮಲ್ಲಿಕಾರ್ಜುನ ಹುಲಿಬೀರ  ಈ ಚಿತ್ರದಲ್ಲಿ ಮನರಂಜನಾತ್ಮಕವಾಗಿ  ತೆರೆಮೇಲೆ ಮೂಡಿಸಿದ್ದಾರೆ. ರೂರಲ್ ಹೀರೋ ಅಂಜನ್ ಇಲ್ಲಿ ನಾಯಕ ಬೀರನ ಪಾತ್ರದಲ್ಲಿ ವಿಜೃಂಭಿಸಿದ್ದಾರೆ.  ಮಾವನ ಮಗಳಾಗಿ  ಚೈತ್ರ ತೋಟದ, ವನು ಪಾಟೀಲ್  ಉತ್ತಮ ಅಭಿನಯ ನೀಡಿದ್ದಾರೆ‌.  ಅಂಜಲಿ ಅವರದು ವುಶೇಷ ಪಾತ್ರ. ಈ ಮೂವರಲ್ಲಿ ಯಾರು ನಾಯಕನ ಬಾಳ ಸಂಗಾತಿಯಾಗಿ ಜತೆ ನಿಲ್ಲುತ್ತಾರೆ ಎನ್ನುವುದೇ ಕುತೂಹಲ.  ಸಾಯಿಸ್ಟಾರ್ ಸಿನಿಮಾಸ್ ಮೂಲಕ ದಾವಲ ಸಾಹೇಬ ಹುಣಶೀಮರದ, ಅಶೋಕ್ ಎನ್.(ತುರುವೇಕೆರೆ) ಹಾಗೂ ಸುಜಾತ ಗಿರೀಶ್ ಸೇರಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.  ಪ್ರಾಣೇಶ್ ಅವರಿಂದ ಪ್ರಾರಾಮಭವಾಗುವ  ಹುಲಿಬೀರನ ಕಥೆ ಅವರಿಂದಲೇ  ಮುಕ್ತಾಯವಾಗುತ್ತದೆ.
 
ಹುಲಿಗುಡ್ಡ ಎಂಬ ಗ್ರಾಮದಲ್ಲಿ  ನಡೆಯುವ  ಕಥೆಯಿದು.  ನಾಯಕ ಬೀರ(ಅಂಜನ್)  ಅವಿದ್ಯಾವಂತ, ಊರಲ್ಲಿ  ಗೂಳಿಯಂತೆ ಓಡಾಡಿಕೊಂಡಿದ್ದ ಈತ ಮನೆಯಲ್ಲೂ ಸಹ ಅಪ್ರಯೋಜಕನೆಂದು ಬೈಸಿಕೊಳ್ಳುತ್ತಿರುತ್ತಾನೆ‌,  ಆದರೆ ಯಾರಾದರ ಕಷ್ಟದಲ್ಲಿದ್ದರೆ ಅವರಿಗೆ ಹೆಗಲಾಗಿ ನಿಲ್ಲಿವ ಉತ್ತಮ ಗುಣ ಆತನಲ್ಲಿರುತ್ತದೆ.  ಡೊಳ್ಳು ಬಾರಿಸಿಕೊಂಡು, ಸ್ನೇಹಿತರ ಜತೆ ಗಲ್ಲಿ ಗಲ್ಲಿ ಸುತ್ತುವುದು, ಅಸಹಾಯಕರಿಗೆ ಸಹಾಯ ಮಾಡುವ ಕಾರಣದಿಂದಲೇ ಊರಲ್ಲಿ ಆತನ ಕಂಡರೆ ಎಲ್ಲರಿಗೂ ಪ್ರೀತಿ.  ಶುಭ ಅಶುಭ ಯಾವುದೇ  ಸಮಾರಂಭವಿರಲಿ, ಅಲ್ಲಿ ಬೀರನ ಡೊಳ್ಳು ಸದ್ದು ಮಾಡಲೇಬೇಕು, ಊರ ಜನರ ಕಷ್ಟಗಳನ್ನು ಆಲಿಸದ ಅಧ್ಯಕ್ಷನ ವಿರುದ್ದ ತೊಡೆ ತಟ್ಟುತ್ತಾನೆ,  ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷನ ವಿರುದ್ದ ಗುಳಿಗಿ ಸಿದ್ಪಪ್ಪನನ್ನು ನಿಲ್ಲಿಸಿ ಗೆಲ್ಲಿಸಿ ಅಧ್ಯಕ್ಷನನ್ನಾಗಿ ಮಾಡುತ್ತಾನೆ.
 
ಇಂಥವನ ಜೀವನದಲ್ಲಿ ಮೂವರು ಯುವತಿಯರು ಎಂಟ್ರಿ ಕೊಡುತ್ತಾರೆ, ಅವರಲ್ಲಿ ಯಾವ ಹುಡುಗಿ ಆತನ ಜೀವನ ಸಂಗಾತಿಯಾಗುತ್ತಾಳೆ ಎನ್ನುವುದೇ ಹುಲಿಬೀರ ಚಿತ್ರದ ಕ್ಲೈಮ್ಯಾಕ್ಸ್.  ತಾಯಿ ಎಲ್ಲಮ್ಮನನ್ನು ಪೂಜೆ ಮಾಡುವ ತನ್ನ ತಾಯಿಯ  ಎದೆಗೆ ಚಪ್ಪಲಿಯಿಂದ ಬಾರಿಸಿದವನಿಗೆ ಬೀರ  ಹೇಗೆ ಶಿಕ್ಷೆ ನೀಡುತ್ತಾನೆ, ದುಷ್ಟರ ಕೈಯಿಂದ  ತನ್ನ ಗ್ರಾಮವನ್ನು ಹೇಗೆ  ಕಾಪಾಡುತ್ತಾನೆ  ಎಂಬುದನ್ನು ನಿರ್ದೇಶಕರು ಚಿತ್ರದ ಕೊನೆಯ ಭಾಗದಲ್ಲಿ ತುಂಬಾ ಪರಿಣಾಮಕಾರಿಯಾಗಿ ಮೂಡಿಸಿದ್ದಾರೆ, ನಾಯಕ ಅಂಜನ್ ಅವರ ಅದ್ಭುತ ಅಭಿನಯ ಚಿತ್ರದ ಹೈಲೈಟಾಗಿದೆ, ಅದರಲ್ಲಂತೂ ಎಲ್ಲಮ್ಮ ದೇವಿ ಆವಾಹನೆಯಾಗುವ ದೃಶ್ಯವಂತೂ ಮೈ ಜುಮ್ಮೆನ್ನಿಸುತ್ತದೆ. ಕಾಂತಾರ ಚಿತ್ರದ ಕ್ಲೈಮ್ಯಾಕ್ಸನ್ನು ನೆನಪಿಸುತ್ತದೆ. ಮಾವನಾಗಿ ಮಲ್ಲು ಬಾಗಲಕೋಟೆ ಅವರ ಪಾತ್ರ ನೆನಪಲ್ಲುಳಿಯುತ್ತದೆ. ವೀರ ಸಮರ್ಥ್ ಅವರ ಸಯೋಜನೆಯ ಹುಟ್ಟಿಬಂದೆ ಹುಲಿಬೀರನಾಗಿ ಸೇರಿದಂತೆ ಎಲ್ಲ ಹಾಡುಗಳೂ ಮತ್ತೆ ಮತ್ತೆ ಕೇಳಬೇಕೆನಿಸುತ್ತವೆ. ಧರ್ಮವಿಶ್ ಅವರು ಹಿನ್ನೆಲೆ ಸಂಗೀತ ಚಿತ್ರದ ಪ್ಲಸ್ ಪಾಯಿಂಟ್. ಸನಾತನ ಅವರ ಕ್ಯಾಮೆರಾದಲ್ಲಿ ಆಭಾಗದ ಗ್ರಾಮೀಣ  ಪರಿಸರ ಸುಂದರವಾಗಿ ಸೆರೆಯಾಗಿದೆ. ಉತ್ತರ ಕರ್ನಾಟಕದ ಭಾಷೆ, 
ಆ ಭಾಗದ ಮುಗ್ಧ ಜನರ ನಡವಳಿಕೆಯನ್ನು ತುಂಬಾ ನೈಜವಾಗಿ ತೆರೆಮೇಲೆ ಮೂಡಿಸಿರುವ ನಿರ್ದೇಶಕರ ಪ್ರಯತ್ನ ಶ್ಲಾಘನೀಯ.

 

GALLERY
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಧೀರ ಯುವಕನ ಗ್ರಾಮೋದ್ದಾರದ ಕನಸು....ರೇಟಿಂಗ್ -: 3.5 / 5 **** - Chitratara.com
Copyright 2009 chitratara.com Reproduction is forbidden unless authorized. All rights reserved.

Fatal error: Uncaught ArgumentCountError: mysqli_close() expects exactly 1 argument, 0 given in /var/www/2abd550b-0850-492e-b3fe-6b047f2ad0c0/public_html/show-content.php:95 Stack trace: #0 /var/www/2abd550b-0850-492e-b3fe-6b047f2ad0c0/public_html/show-content.php(95): mysqli_close() #1 {main} thrown in /var/www/2abd550b-0850-492e-b3fe-6b047f2ad0c0/public_html/show-content.php on line 95