Chief Editor
Manohar. R (Manu)
Photo Journalist
chitrataramanu@gmail.com
+91 9845549026
ದೇವರ ಅಸ್ತಿತ್ವವನ್ನು ಹುಡುಕುವವರಿಗೆ ಸರಳ ಉತ್ತರ - ಸಾಕ್ಷಾತ್ಕಾರ .
Posted date: 07 Wed, Oct 2026 05:45:44 PM
ಐದು ದಶಕಗಳ ಹಿಂದೆ ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ ಡಾ||ರಾಜಕುಮಾರ್ ನಾಯಕರಾಗಿ ನಟಿಸಿದ್ದ "ಸಾಕ್ಷಾತ್ಕಾರ" ಚಿತ್ರ ಎಲ್ಲರ ಮನ ಗೆದ್ದಿತ್ತು. ಈಗ ಅದೇ ಶೀರ್ಷಿಕೆಯನ್ನಿಟ್ಟುಕೊಂಡು ಡಾ||ಎಸ್ ಎಲ್ ಎನ್ ಸ್ವಾಮಿ 30 ನಿಮಿಷಗಳ ಕಿರುಚಿತ್ರ ನಿರ್ದೇಶಿಸಿದ್ದಾರೆ. ರಂಗಭೂಮಿ ಹಾಗೂ ಕಿರುತೆರೆಯಲ್ಲಿ ಹೆಸರು ಮಾಡಿರುವ ಎಸ್ ಎಲ್ ಎನ್ ಸ್ವಾಮಿ ಅವರ ಯಲಹಂಕದ ಅಸ್ತಿತ್ವಂ ಥಿಯೇಟರ್ ಫೌಂಡೇಶನ್ ಸಂಸ್ಥೆ ಇದನ್ನು ನಿರ್ಮಾಣ ಮಾಡಿದೆ. ಇತ್ತೀಚಿಗೆ ಈ ಕಿರುಚಿತ್ರದ ಪ್ರದರ್ಶನ ಹಾಗೂ ಪತ್ರಿಕಾಗೋಷ್ಠಿ ನಡೆಯಿತು. ಜಗದೀಶ್ ಗೌಡ, ದೀಪು ಗೌಡ್ರು , ಹರೀಶ್ ಹಾಗೂ "ಚಿತ್ತಾರ" ಶಿವಕುಮಾರ್ ಮುಂತಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.  
 
ನಾಡಪ್ರಭು ಕೆಂಪೇಗೌಡರ ರಾಜಧಾನಿ ಯಲಯಂಕದ ಅಸ್ತಿತ್ವಂ ಥಿಯೇಟರ್ ಫೌಂಡೇಶನ್ ಸಂಸ್ಥೆಯು ರಂಗಭೂಮಿ ಹಾಗೂ ಕಿರುತೆರೆಯಲ್ಲಿ ಕಳೆದ ಐದು ದಶಕಗಳಿಂದ ಮೈಲಿಗಲ್ಲುಗಳನ್ನು ನಿರ್ಮಿಸಿ ಮುನ್ನಡೆದಿದೆ. ಈಗ ಈ ಸಂಸ್ಥೆಯ ಮೂಲಕ ನಿರ್ಮಾಣವಾಗಿರುವ ಕಿರುಚಿತ್ರ "ಸಾಕ್ಷಾತ್ಕಾರ". ಇದು ಸನಾತನ ಧರ್ಮ ಪರಂಪರೆಯ ಸತ್ಯದ ಹುಡುಕಾಟದ ವಿನಮ್ರ ಪ್ರಯತ್ನ. ದೇವರ ಅಸ್ತಿತ್ವವನ್ನು ಹುಡುಕುವ ಮಕ್ಕಳ ಪ್ರಯತ್ನದಲ್ಲಿ ಕಂಡುಕೊಳ್ಳುವ ಸರಳ ಉತ್ತರವೇ " ಸಾಕ್ಷಾತ್ಕಾರ ". ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸುವ ಪೋಷಕರ ಜವಾಬ್ದಾರಿಯನ್ನು ಈ ಕಿರುಚಿತ್ರ ನೆನಪಿಸುತ್ತದೆ. ಜೊತೆಗೆ ಪೋಷಕರು ಮಾಡುವ ತಪ್ಪನ್ನು ಎತ್ತಿ ತೋರಿಸುತ್ತದೆ. ಸಂಸ್ಕಾರ , ಸಂಸ್ಕೃತಿಯನ್ನು ಉಳಿಸುವ ಹೊಣೆ ಸಮಾಜದು ಎಂದು ಈ ಕಿರುಚಿತ್ರ ಎಚ್ಚರಿಸುತ್ತದೆ‌. ಜೀವನ ಧರ್ಮವನ್ನು ಮನುಷ್ಯ ಧರ್ಮವನ್ನು ಅನುಸರಿಸುವ ಧರ್ಮ ಸೌಹಾರ್ದತೆಯ ಒಳ್ಳ ಸಂದೇಶ ಕೂಡ ಈ " ಸಾಕ್ಷಾತ್ಕಾರ" ದಲ್ಲಿದೆ. ಸಾಕ್ಷಿ ಪ್ರಶಾಂತ್ ನಾಯ್ಕ , ಪೂರ್ವಿ ಮಹದೇವಪ್ಪ ಏಕಾಂತ್, ಸನ್ನಿಧಿ ಹವಾಲ್ದಾರ್, ಟಿ.ಎಂ.ಸುಪ್ರಿಯಾಶ್ರೀ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಕಿರುಚಿತ್ರದ ವಿಶೇಷ ಪಾತ್ರದಲ್ಲಿ ಮಹದೇವ್ ಯುಗೇಯುಗೇ ಹಾಗೂ ಗೌರವ ಪಾತ್ರದಲ್ಲಿ ಡಾ|| ಆನಂದ್ ಗುರೂಜಿ ಅಭಿನಯಿಸಿದ್ದಾರೆ. ಪ್ರಶಾಂತ್ ಜೆ ನಾಯಕ್, ಮಹದೇವಪ್ಪ ಏಕಾಂತ್, ಟಿ.ಎಂ.ಪ್ರಶಾಂತ್, ಗೌತಮ್ ಹವಾಲ್ದಾರ್ ಈ ಕಿರುಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ವಾಗೀಶ್ ಕುಮಾರ್ ಜಡಿಮಟ್ ಅವರ ಛಾಯಾಗ್ರಹಣವಿರುವ ಈ ಕಿರುಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಈ ವರ್ಷದ ಅಂತ್ಯದಲ್ಲಿ ಯಲಹಂಕದಲ್ಲಿ ಸ್ಥಳೀಯ ಶಾಸಕರಾದ ವಿಶ್ವನಾಥ್ ಅವರ  ಕಿರುಚಿತ್ರೋತ್ಸವ ನಡೆಸುವ ಯೋಜನೆ ಸಹ ಇದೆ. ಗೆದ್ದ ಕಿರುಚಿತ್ರಕ್ಕೆ ಒಂದು ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು ಎಂದು "ಸಾಕ್ಷಾತ್ಕಾರ" ಕಿರುಚಿತ್ರದ ನಿರ್ದೇಶಕ ಎಸ್ ಎಲ್ ಎನ್ ಸ್ವಾಮಿ ತಿಳಿಸಿದರು.
GALLERY
Kannada Cinema's Latest Wallpapers
Kannada Cinema's Latest Videos
Kannada Movie/Cinema News - ದೇವರ ಅಸ್ತಿತ್ವವನ್ನು ಹುಡುಕುವವರಿಗೆ ಸರಳ ಉತ್ತರ - ಸಾಕ್ಷಾತ್ಕಾರ . - Chitratara.com
Copyright 2009 chitratara.com Reproduction is forbidden unless authorized. All rights reserved.

Fatal error: Uncaught ArgumentCountError: mysqli_close() expects exactly 1 argument, 0 given in /var/www/2abd550b-0850-492e-b3fe-6b047f2ad0c0/public_html/show-content.php:95 Stack trace: #0 /var/www/2abd550b-0850-492e-b3fe-6b047f2ad0c0/public_html/show-content.php(95): mysqli_close() #1 {main} thrown in /var/www/2abd550b-0850-492e-b3fe-6b047f2ad0c0/public_html/show-content.php on line 95