Chief Editor
Manohar. R (Manu)
Photo Journalist
chitrataramanu@gmail.com
+91 9845549026
ಯುವ ನಟ ಆದಿ ಸಾಯಿಕುಮಾರ್ ನಟನೆಯ ಚಿತ್ರಕ್ಕೆ ನವರಸನ್ ಆಕ್ಷನ್ ಕಟ್
Posted date: 14 Wed, Oct 2026 08:17:17 AM
ಹಿರಿಯ ನಟ ಸಾಯಿ ಕುಮಾರ್ ಪುತ್ರ ನಾಯಕನಾಗಿ ಆದಿ ಸಾಯಿಕುಮಾರ್ ಅಭಿನಯಿಸುತ್ತಿರುವ ಈ ಬಿಗ್ ಬಜೆಟ್ ಚಿತ್ರಕ್ಕೆ ಪ್ರಶಾಂತ್ ಜಿ. ರುದ್ರಪ್ಪ ಬಂಡವಾಳ ಹೂಡುತ್ತಿದ್ದು, ನವರಸನ್ ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಬಿ. ಅಜನೀಶ್ ಲೋಕನಾಥ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

ಸದ್ಯಕ್ಕೆ ‘ಪ್ರೊಡಕ್ಷನ್ ನಂ. 3’ ಎಂಬ ತಾತ್ಕಾಲಿಕ ಹೆಸರಿನಲ್ಲಿ ಸಿದ್ಧವಾಗುತ್ತಿರುವ ಈ ಚಿತ್ರವು ದೈವಿಕ ರಹಸ್ಯ ಮತ್ತು ಸಸ್ಪೆನ್ಸ್‌ಭರಿತ ಕಥಾಹಂದರವನ್ನು ಒಳಗೊಂಡಿದೆ. ಅಕ್ಟೋಬರ್ 20 ರಂದು ಮಹೂರ್ತ ನಡೆಯಲಿದೆ.

ಆಧ್ಯಾತ್ಮಿಕ ನಂಬಿಕೆಗಳು, ಪುರಾತನ ಆಚರಣೆಗಳು, ದೈವಿಕ ಶಕ್ತಿಗಳು ಹಾಗೂ ನಿಗೂಢ ಸಂಗತಿಗಳ ಸುತ್ತ ಹೆಣೆದಿರುವ ಈ ಚಿತ್ರವು ಪ್ರೇಕ್ಷಕರಿಗೆ ವಿಭಿನ್ನ ಸಿನಿಮೀಯ ಅನುಭವ ನೀಡುವ ನಿರೀಕ್ಷೆ ಮೂಡಿಸಿದೆ. ಅದ್ದೂರಿ ನಿರ್ಮಾಣ, ಗಾಢ ವಾತಾವರಣ ಸೃಷ್ಟಿಸುವ ದೃಶ್ಯಗಳು, ಭಾವನಾತ್ಮಕ ಸನ್ನಿವೇಶಗಳು ಮತ್ತು ಕುತೂಹಲ ಕೆರಳಿಸುವ ನಿರೂಪಣೆ ಚಿತ್ರದ ಪ್ರಮುಖ ಆಕರ್ಷಣೆಗಳಾಗಲಿವೆ.

ಚಿತ್ರದ ಅನೌನ್ಸ್‌ಮೆಂಟ್‌ ಪೋಸ್ಟರ್ ಈಗಾಗಲೇ ತನ್ನ ವಿಶಿಷ್ಟ ವಿನ್ಯಾಸದಿಂದ ಗಮನ ಸೆಳೆಯುತ್ತಿದೆ. ಕತ್ತಲಾವರಿಸಿದ ದಟ್ಟ ಅರಣ್ಯದ ಹಿನ್ನೆಲೆಯಲ್ಲಿರುವ ಪುರಾತನ ಆರಾಧನಾ ಸ್ಥಳದಂತೆ ಕಾಣುವ ವಿನ್ಯಾಸವು ನಿಗೂಢತೆಯ ಭಾವವನ್ನು ಮೂಡಿಸುತ್ತದೆ. ಪೋಸ್ಟರ್‌ನ ಮಧ್ಯಭಾಗದಲ್ಲಿ ತ್ರಿಶೂಲವನ್ನು ಸುತ್ತಿಕೊಂಡು ಹೆಡೆಯೆತ್ತಿ ನಿಂತಿರುವ ಬೃಹತ್ ನಾಗರಹಾವು ಪ್ರಮುಖ ಆಕರ್ಷಣೆಯಾಗಿದೆ. ಇದರ ಸುತ್ತಲೂ ಕತ್ತಿಗಳು, ಕೊಡಲಿಗಳು, ಭರ್ಜಿಗಳು, ಅರ್ಧಚಂದ್ರಾಕೃತಿಯ ಆಯುಧ ಹಾಗೂ ಗದೆ ಸೇರಿದಂತೆ ಹಲವು ಪುರಾತನ ಆಯುಧಗಳನ್ನು ಜೋಡಿಸಲಾಗಿದೆ.

ಮರಗಳ ಸುರುಳಿಯಾಕಾರದ ಕೊಂಬೆಗಳು, ನೇತಾಡುವ ಗಂಟೆಗಳು, ಪ್ರಜ್ವಲಿಸುವ ಎಣ್ಣೆಯ ದೀಪಗಳು ಹಾಗೂ ಕೆಳಭಾಗದಲ್ಲಿರುವ ವರ್ಣರಂಜಿತ ಹೂವುಗಳ ನಡುವೆ ಉರಿಯುತ್ತಿರುವ ಜ್ವಾಲೆ ಪೋಸ್ಟರ್‌ಗೆ ಮತ್ತಷ್ಟು ತೀವ್ರತೆ ನೀಡಿವೆ. ಗಾಢ ನೀಲಿ ಮತ್ತು ಅಗ್ನಿಯ ಕೆಂಪು ಬಣ್ಣಗಳ ಸಂಯೋಜನೆಯು ಚಿತ್ರದ ದೈವಿಕ, ಪೌರಾಣಿಕ ಹಾಗೂ ನಿಗೂಢ ಲೋಕದ ಬಗ್ಗೆ ಕುತೂಹಲ ಹೆಚ್ಚಿಸಿದೆ. ಚಿತ್ರದ ಮುಂದಿನ ಹಂತದ ಮಾಹಿತಿಯನ್ನು ಇದೇ ಅಕ್ಟೋಬರ್ 20ರಂದು ಬಹಿರಂಗಪಡಿಸುವುದಾಗಿ ಚಿತ್ರತಂಡ ಘೋಷಿಸಿದೆ.

ಆದಿ ಸಾಯಿಕುಮಾರ್ ಅವರ ವೃತ್ತಿಜೀವನದಲ್ಲಿ ಈ ಚಿತ್ರ ಮತ್ತೊಂದು ವಿಭಿನ್ನ ಪ್ರಯತ್ನವಾಗಲಿದೆ. ವಿಭಿನ್ನ ಕಥಾವಸ್ತು, ಅದ್ದೂರಿ ನಿರ್ಮಾಣ ಹಾಗೂ ವಿಶಿಷ್ಟ ದೃಶ್ಯ ವೈಭವದೊಂದಿಗೆ ರೂಪುಗೊಳ್ಳುತ್ತಿರುವ ಈ ಸಿನಿಮಾ ಅವರ ಅಭಿಮಾನಿಗಳಲ್ಲಿ ನಿರೀಕ್ಷೆ ಮೂಡಿಸಿದೆ. ದೈವಿಕ ಅಂಶಗಳು ಮತ್ತು ನಿಗೂಢ ಘಟನೆಗಳ ಹಿನ್ನೆಲೆಯಲ್ಲಿನ ಕಥೆಯು ಪ್ರೇಕ್ಷಕರನ್ನು ಹೊಸ ಲೋಕಕ್ಕೆ ಕರೆದೊಯ್ಯುವ ಆಶಯ ಹೊಂದಿದೆ.

ಕನ್ನಡದ ‘ಕಾಂತಾರ’ ಸೇರಿ ತೆಲುಗಿನ  ‘ವಿರೂಪಾಕ್ಷ’ ಹಾಗೂ ‘ಮಂಗಳವಾರಂ’ ಚಿತ್ರಗಳ ಮೂಲಕ ತಮ್ಮ ಸಂಗೀತ ಮತ್ತು ಹಿನ್ನೆಲೆ ಸಂಗೀತದ ಛಾಪು ಮೂಡಿಸಿರುವ ಬಿ. ಅಜನೀಶ್ ಲೋಕನಾಥ್ ಈ ಚಿತ್ರಕ್ಕೆ ಸಂಗೀತ ನೀಡುತ್ತಿರುವುದು ವಿಶೇಷ. ಚಿತ್ರದ ನಿಗೂಢ ವಾತಾವರಣಕ್ಕೆ ಪೂರಕವಾದ ಹಿನ್ನೆಲೆ ಸಂಗೀತ ಹಾಗೂ ಶಕ್ತಿಯುತ ಧ್ವನಿ ವಿನ್ಯಾಸದ ಬಗ್ಗೆ ಈಗಿನಿಂದಲೇ ಕುತೂಹಲ ಮೂಡಿದೆ.

ಚಿತ್ರದ ಶೀರ್ಷಿಕೆ, ಕಥೆಯ ಪ್ರಮುಖ ವಿವರಗಳು ಹಾಗೂ ಇತರ ಪಾತ್ರವರ್ಗದ ಮಾಹಿತಿಯನ್ನು ಚಿತ್ರತಂಡ ಸದ್ಯಕ್ಕೆ ಗೌಪ್ಯವಾಗಿಟ್ಟಿದೆ. ಹಂತ ಹಂತವಾಗಿ ಮಾಹಿತಿಯನ್ನು ಬಹಿರಂಗಪಡಿಸುವ ಮೂಲಕ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿಸಲು ನಿರ್ಮಾಪಕರು ಯೋಜಿಸಿದ್ದಾರೆ. ಚಿತ್ರದ ಫಸ್ಟ್ ಲುಕ್, ಉಳಿದ ತಾರಾಗಣ, ತಾಂತ್ರಿಕ ವರ್ಗ ಹಾಗೂ ಪ್ರಚಾರದ ಕುರಿತಾದ ಹೆಚ್ಚಿನ ವಿವರಗಳು ಮುಂದಿನ ದಿನಗಳಲ್ಲಿ ಹೊರಬೀಳಲಿವೆ.
GALLERY
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಯುವ ನಟ ಆದಿ ಸಾಯಿಕುಮಾರ್ ನಟನೆಯ ಚಿತ್ರಕ್ಕೆ ನವರಸನ್ ಆಕ್ಷನ್ ಕಟ್ - Chitratara.com
Copyright 2009 chitratara.com Reproduction is forbidden unless authorized. All rights reserved.

Fatal error: Uncaught ArgumentCountError: mysqli_close() expects exactly 1 argument, 0 given in /var/www/2abd550b-0850-492e-b3fe-6b047f2ad0c0/public_html/show-content.php:95 Stack trace: #0 /var/www/2abd550b-0850-492e-b3fe-6b047f2ad0c0/public_html/show-content.php(95): mysqli_close() #1 {main} thrown in /var/www/2abd550b-0850-492e-b3fe-6b047f2ad0c0/public_html/show-content.php on line 95