Chief Editor
Manohar. R (Manu)
Photo Journalist
chitrataramanu@gmail.com
+91 9845549026
ಅಪ್ಪು ಗ್ಯಾರೇಜ್‌ಗೆ ವಿಷ್ಣುತೇಜ ನಾಯಕ ಒಬ್ಬ ನಾಯಕನಿಗೆ ಮೂವರು ನಾಯಕಿಯರು
Posted date: 18 Sun, Oct 2026 03:39:57 PM
ತೇಜಸ್ ಪ್ರೊಡಕ್ಷನ್ಸ್ ಅಡಿಯಲ್ಲಿ ಸಿದ್ದಗೊಂಡಿರುವ ’ಅಪ್ಪು ಗ್ಯಾರೇಜ್’  ಚಿತ್ರದ ಟ್ರೇಲರ್ ಮತ್ತು ಐದು ಹಾಡುಗಳ ಬಿಡುಗಡೆ ಸಮಾರಂಭವು ಎಸ್‌ಆರ್‌ವಿ ಚಿತ್ರಮಂದಿರದಲ್ಲಿ ಅದ್ದೂರಿಯಾಗಿ ನಡೆಯಿತು. ಚಂದ್ರಚೂಡೇಶ್ವರರಾಜು ನಿರ್ಮಾಣ ಮಾಡುವ ಜತೆಗೆ ನಿರ್ದೇಶನದ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಹಿರಿಯ ನಿರ್ಮಾಪಕ ಮತ್ತು ನಿರ್ಮಾಪಕರ ಸಂಘದ ಕಾರ್ಯದರ್ಶಿ ಶಿಲ್ಪ ಶ್ರೀನಿವಾಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ತಂಡಕ್ಕೆ ಶುಭ ಹಾರೈಸಿದರು.
 
ವಿಷ್ಣುತೇಜ ನಾಯಕ. ಸುಮಿಸಹ, ರಾಧಿಕರಾಮ್ ಮತ್ತು ರಕ್ಷಾಗೌಡ ನಾಯಕಿಯರು. ಉಳಿದಂತೆ ಅವಿನಾಶ್, ರವಿಕಾಳೆ,ಶೋಭರಾಜ್,ರಮೇಶ್‌ಭಟ್, ರೇಖದಾಸ್, ಡಿಂಗ್ರಿನಾಗರಾಜ್, ಹಿರಿಯ ನಟ ಉಮೇಶ್,ತಬಲನಾಣಿ, ಮುನಿ, ಹರೀಶ್‌ರೈ, ಮಿಮಿಕ್ರಿಗೋಪಿ, ಆಲಿಶಾ, ಶಿಲ್ಪಶ್ರೀ,  ಮುಂತಾದವರು ನಟಿಸಿದ್ದಾರೆ.

ಐದು ಹಾಡುಗಳಿಗೆ ಸಂಗೀತ ಎಸ್.ಕೆ.ಸಾಯಿಶ್ಯಾಮ್, ಛಾಯಾಗ್ರಹಣ ಎಂ.ಶಂಕರ್, ಸಂಕಲನ ರುದ್ರೇಶ್ ಲಕ್ಯಾ, ಸೌಂಡ್ ಇಂಜಿನಿಯರ್ ಎಸ್.ಚಂದ್ರಶೇಖರ್, ನೃತ್ಯ ತ್ರಿಭುವನ್-ಮಾರುತಿ-ಹರ್ಷವರ್ಧನ್, ಸಾಹಸ ಕೌರವ ವೆಂಕಟೇಶ್-ಬಂಡೆ ಚಂದ್ರು ಅವರದಾಗಿದೆ. ಬೆಂಗಳೂರು. ಬಿಡದಿ, ಹಾಸನ, ಚಿಕ್ಕಮಗಳೂರು ಹಾಗೂ ಏರ್ಕಾಡ್ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸಿನಿಮಾವು ಇದೇ ತಿಂಗಳು ತೆರೆಗೆ ಬರಲಿದೆ.
 
ನಂತರ ಮಾತನಾಡಿದ ನಿರ್ದೇಶಕರು, ಪವರ್ ಸ್ಟಾರ್ ಪುನೀತ್‌ರಾಜ್‌ಕುಮಾರ್ ಅಭಿಮಾನಿಯಾಗಿದ್ದರಿಂದ ಅವರ ಹೆಸರಿನಲ್ಲೇ ಸಿನಿಮಾ ಮಾಡಿದ್ದೇನೆ. ಅಪ್ಪು ಹೆಸರಿಗೆ ಯಾವುದೇ ರೀತಿಯ ಕಳಂಕ ಬರಬಾರದು, ಅಲ್ಲಿ ಅಹಿತಕರ ಘಟನೆಗಳು ನಡೆಯಬಾರದು. ಆದರೂ ಸಂಬಂದಿಕರು ದುರುಳರೊಂದಿಗೆ ಸೇರಿಕೊಂಡು ಹೃದಯ ಭಾಗದಲ್ಲಿರುವ ಜಾಗವನ್ನು ಹೇಗಾದರೂ ಕಬ್ಜ ಮಾಡಿಕೊಳ್ಳಬೇಕೆಂದು ಬಂದಾಗ, ಗ್ಯಾರೇಜ್‌ನಲ್ಲಿದ್ದ ಹುಡುಗ ಅದನ್ನು ಹೇಗೆ ಕಾಪಾಡಿಕೊಳ್ಳುತ್ತಾನೆ. ಮಾಲೀಕನಿಗೆ ಯಾವ ರೀತಿ ಸಹಕಾರಿಯಾಗುತ್ತಾನೆ ಎಂಬುದು ಚಿತ್ರದ ಸಾರಾಂಶವಾಗಿದೆ ಎಂದು ಚಂದ್ರಚೂಡೇಶ್ವರರಾಜು ಮಾಹಿತಿಯನ್ನು ತೆರೆದಿಟ್ಟರು.

ಅಪ್ಪ ಕಲಾವಿದ. ಅವರ ಸ್ಪೂತಿಯಿಂದಲೇ ನಟನೆಗೆ ಬಂದೆ. ಸೆಟ್‌ನಲ್ಲಿ ಮಗ ಅಂತ ನೋಡದೆ ಚೆನ್ನಾಗಿ ಕೆಲಸ ತೆಗೆದುಕೊಂಡಿದ್ದಾರೆ. ಗ್ಯಾರೇಜ್ ಹುಡುಗನಾಗಿ ಅಭಿನಯಿಸಿದ್ದೇನೆಂದು ನಾಯಕ  ವಿಷ್ಣುತೇಜ  ಹೇಳಿದರು.
GALLERY
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಅಪ್ಪು ಗ್ಯಾರೇಜ್‌ಗೆ ವಿಷ್ಣುತೇಜ ನಾಯಕ ಒಬ್ಬ ನಾಯಕನಿಗೆ ಮೂವರು ನಾಯಕಿಯರು - Chitratara.com
Copyright 2009 chitratara.com Reproduction is forbidden unless authorized. All rights reserved.

Fatal error: Uncaught ArgumentCountError: mysqli_close() expects exactly 1 argument, 0 given in /var/www/2abd550b-0850-492e-b3fe-6b047f2ad0c0/public_html/show-content.php:95 Stack trace: #0 /var/www/2abd550b-0850-492e-b3fe-6b047f2ad0c0/public_html/show-content.php(95): mysqli_close() #1 {main} thrown in /var/www/2abd550b-0850-492e-b3fe-6b047f2ad0c0/public_html/show-content.php on line 95