Chief Editor
Manohar. R (Manu)
Photo Journalist
chitrataramanu@gmail.com
+91 9845549026
ಗುರುನಂದನ್–ತಪಸ್ವಿನಿ ಪೂಣಚ್ಛ ಅಭಿನಯದ ‘MR ಜಾಕ್’ ಚಿತ್ರದ ‘ಆರಂಭ ವಸಂತ ಆರಂಭ’ ಹಾಡು ಬಿಡುಗಡೆ
Posted date: 29 Thu, Oct 2026 09:46:11 AM

‘ಫಸ್ಟ್ ರ‍್ಯಾಂಕ್ ರಾಜು’ ಚಿತ್ರದ ಮೂಲಕ ಜನಪ್ರಿಯತೆ ಗಳಿಸಿರುವ ಗುರುನಂದನ್ ಹಾಗೂ ‘ಪ್ರೇಮದ ಊರಲಿ’ ಚಿತ್ರದ ನಾಯಕಿ ತಪಸ್ವಿನಿ ಪೂಣಚ್ಛ ಅಭಿನಯದ ‘MR ಜಾಕ್’ ಚಿತ್ರದ ಎರಡನೇ ಹಾಡು ‘ಆರಂಭ ವಸಂತ ಆರಂಭ’ ಇತ್ತೀಚೆಗೆ ಬಿಡುಗಡೆಯಾಗಿದೆ. ಈಗಾಗಲೇ ಬಿಡುಗಡೆಯಾಗಿರು ಶೀರ್ಷಿಕೆ ಗೀತೆಗೆ ನಿರೀಕ್ಷೆಗೂ ಮೀರಿ ಮೆಚ್ಚುಗೆ ಸಿಕ್ಕಿದೆ.  ಪ್ರಮೋದ್ ಮರವಂತೆ ಸಾಹಿತ್ಯ ಬರೆದಿರುವ ಈ ಹಾಡಿಗೆ ಕಿರಣ್ ರವೀಂದ್ರನಾಥ್ ಸಂಗೀತ ಸಂಯೋಜಿಸಿದ್ದು, ಜಸ್ಕರಣ್ ಸಿಂಗ್ ಹಾಡಿದ್ದಾರೆ. ಆನಂದ್ ಆಡಿಯೋ ಮೂಲಕ ಹಾಡು ಬಿಡುಗಡೆಯಾಗಿದೆ.

ಹಾಡಿನ ಬಿಡುಗಡೆ ಸಮಾರಂಭದಲ್ಲಿ ಚಿತ್ರತಂಡದ ಸದಸ್ಯರು ಹಾಡಿನ ವಿಶೇಷತೆ ಹಾಗೂ ಚಿತ್ರದ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಎಲ್ಲ ತಲೆಮಾರಿನವರಿಗೂ ಇಷ್ಟವಾಗುವ ಮೆಲೋಡಿ “ಹಲವು ವರ್ಷಗಳ ಹಿಂದೆಯೇ ಈ ಹಾಡನ್ನು ಬರೆದಿದ್ದೆ. ಚಿಕ್ಕಂದಿನಿಂದಲೂ ಕಿರಣ್ ರವೀಂದ್ರನಾಥ್ ಅವರ ಸಂಗೀತವನ್ನು ಕೇಳುತ್ತಾ ಬೆಳೆದ ನನಗೆ, ಅವರೊಂದಿಗೆ ಕೆಲಸ ಮಾಡುವ ಅವಕಾಶ ‘MR ಜಾಕ್’ ಚಿತ್ರದ ಮೂಲಕ ಸಿಕ್ಕಿರುವುದು ಸಂತೋಷ ತಂದಿದೆ” ಎಂದು ಸಾಹಿತಿ ಪ್ರಮೋದ್ ಮರವಂತೆ ಹೇಳಿದರು.

“ಪ್ರತಿಯೊಂದು ಚಿತ್ರದಲ್ಲೂ ಒಂದು ಉತ್ತಮ ಮೆಲೋಡಿ ಹಾಡು ಇರಬೇಕು ಎಂಬುದು ನನ್ನ ಆಶಯ. ‘ಆರಂಭ ವಸಂತ ಆರಂಭ’ ಹಾಡು ಜೆನ್‌ ಝಿ ಸೇರಿದಂತೆ ಎಲ್ಲ ತಲೆಮಾರಿನ ಪ್ರೇಕ್ಷಕರಿಗೂ ಇಷ್ಟವಾಗಲಿದೆ ಎಂಬ ವಿಶ್ವಾಸವಿದೆ” ಎಂದು ಸಂಗೀತ ನಿರ್ದೇಶಕ ಕಿರಣ್ ರವೀಂದ್ರನಾಥ್ ತಿಳಿಸಿದರು.

ತಂಡದ ಸಹಕಾರಕ್ಕೆ ನಿರ್ದೇಶಕರ ಮೆಚ್ಚುಗೆ ನಿರ್ದೇಶಕ ಸುಮಂತ್  ಮಾತನಾಡಿ, “ಕಥೆ ಹೇಳಿದ ತಕ್ಷಣವೇ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡ ಗುರುನಂದನ್ ಅವರಿಗೆ ಧನ್ಯವಾದಗಳು. ಛಾಯಾಗ್ರಾಹಕ ಶಿವಸೇನ, ಸಂಗೀತ ನಿರ್ದೇಶಕ ಕಿರಣ್ ರವೀಂದ್ರನಾಥ್ ಸೇರಿದಂತೆ ಇಡೀ ತಾಂತ್ರಿಕ ತಂಡದ ಸಹಕಾರದಿಂದ ನನ್ನ ಕಲ್ಪನೆ ತೆರೆಮೇಲೆ ಮೂಡಿಬಂದಿದೆ. ಎಲ್ಲ ಕಲಾವಿದರ ಪರಿಶ್ರಮ ಚಿತ್ರಕ್ಕೆ ಬಲ ತುಂಬಿದೆ” ಎಂದರು.

ಮೈದಾಡಿ ಗುಡ್ಡದಲ್ಲಿ ಮೂರು ದಿನಗಳ ಚಿತ್ರೀಕರಣ ನಾಯಕ ಗುರುನಂದನ್ ಮಾತನಾಡಿ, “ನಮ್ಮ ಮೊದಲ ಹಾಡಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಇದೀಗ ಮದುವೆಯ ಸಂಭ್ರಮ ಸಾರುವ ಎರಡನೇ ಹಾಡು ಬಿಡುಗಡೆಯಾಗಿದೆ. ಮೂಡಿಗೆರೆ ಸಮೀಪದ ಕಳಸ ಬಳಿಯ ಮೈದಾಡಿ ಗುಡ್ಡದಲ್ಲಿ ಮೂರು ದಿನಗಳ ಕಾಲ ಹಾಡಿನ ಚಿತ್ರೀಕರಣ ನಡೆಸಿದ್ದೇವೆ. ಹವಾಮಾನದ ಸವಾಲುಗಳ ನಡುವೆಯೂ ಇಡೀ ತಂಡ ಶ್ರಮಿಸಿದೆ. ಡಿಸೆಂಬರ್ 4ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಲಿದ್ದು, ಮುಂದಿನ ದಿನಗಳಲ್ಲಿ ಟ್ರೇಲರ್ ಹಾಗೂ ಇನ್ನಷ್ಟು ಹಾಡುಗಳನ್ನು ಬಿಡುಗಡೆ ಮಾಡಲಿದ್ದೇವೆ” ಎಂದು ತಿಳಿಸಿದರು.

ಶಿಕ್ಷಕಿಯ ಪಾತ್ರದಲ್ಲಿ ತಪಸ್ವಿನಿ "ಪ್ರೇಮದ ಊರಲಿ" ಖ್ಯಾತಿಯ  ನಾಯಕಿ ತಪಸ್ವಿನಿ ಪೂಣಚ್ಛ ಮಾತನಾಡಿ, “ಚಿತ್ರದ ಟೀಸರ್ ಹಾಗೂ ಮೊದಲ ಶೀರ್ಷಿಕೆ ಗೀತೆಗೆ ಪ್ರೇಕ್ಷಕರು ಮತ್ತು ಮಾಧ್ಯಮದವರು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಚಿತ್ರದಲ್ಲಿ ನಂದಿನಿ ಎಂಬ ಶಿಕ್ಷಕಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಸಂಪ್ರದಾಯಗಳನ್ನು ಪಾಲಿಸುವ ಕುಟುಂಬದಿಂದ ಬಂದಿರುವ ಶಿಕ್ಷಕಿಯ ಪಾತ್ರ ನನ್ನದು” ಎಂದರು.

ಸಮಾರಂಭದಲ್ಲಿ ನಟ ಧರ್ಮಣ್ಣ, ನಟಿ ಸುಶ್ಮಿತ ಜಗ್ಗಪ್ಪ,  ಛಾಯಾಗ್ರಾಹಕ ಶಿವಸೇನ, ನೃತ್ಯ ನಿರ್ದೇಶಕ ಆನಂದ್ ಮಠದ್ ಹಾಗೂ ಸಹ ನಿರ್ಮಾಪಕರು ಹಾಡಿನ ಕುರಿತು ಮಾತನಾಡಿದರು. ವಿಜಯ್ ರಾಜ್ ಚಿತ್ರಕ್ಕೆ ಸಂಕಲನ ನೀಡಿದ್ದಾರೆ.

GALLERY
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಗುರುನಂದನ್–ತಪಸ್ವಿನಿ ಪೂಣಚ್ಛ ಅಭಿನಯದ ‘MR ಜಾಕ್’ ಚಿತ್ರದ ‘ಆರಂಭ ವಸಂತ ಆರಂಭ’ ಹಾಡು ಬಿಡುಗಡೆ - Chitratara.com
Copyright 2009 chitratara.com Reproduction is forbidden unless authorized. All rights reserved.

Fatal error: Uncaught ArgumentCountError: mysqli_close() expects exactly 1 argument, 0 given in /var/www/2abd550b-0850-492e-b3fe-6b047f2ad0c0/public_html/show-content.php:95 Stack trace: #0 /var/www/2abd550b-0850-492e-b3fe-6b047f2ad0c0/public_html/show-content.php(95): mysqli_close() #1 {main} thrown in /var/www/2abd550b-0850-492e-b3fe-6b047f2ad0c0/public_html/show-content.php on line 95