ನಿರ್ದೇಶಕ ಬಿ.ಎಂ ಗಿರಿರಾಜ್ ಹಾಗು ನಿರ್ಮಾಪಕ ಕುಮಾರಸ್ವಾಮಿ ಜೊತೆಗೂಡಿ ಆರ್ ಕೆ ಸಿನಿಮಾ ಮೂಲಕ ಮೊದಲ ಕಾಣಿಕೆಯಾಗಿ "ಕಲ್ಯಾಣಿ " ಚಿತ್ರ ನಿರ್ಮಾಣ ಮಾಡಿದ್ದು ಚಿತ್ರದ ಹಾಡುಗಳು ಬಿಡುಗಡೆಯಾಗಿದ್ದು ಗಮನ ಸೆಳೆದಿದೆ.
ಬಸವರೆಡ್ಡಿ ಅವರ ಕಥೆ ಆಧರಿಸಿ ನಿರ್ಮಿಸಿರುವ ಕಲ್ಯಾಣಿ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಹಾಡುಗಳನ್ನು ಬಿಡುಗಡೆ ಮಾಡಿದ ನಿರ್ದೇಶಕ ಶಶಾಂಕ್ ಬಿಡುಗಡೆ ಮಾಡಿ ಶುಭ ಹಾರೈಸಿದರು.
ಈ ವೇಳೆ ಮಾತನಾಡಿದ ಶಶಾಂಕ್, ನಿರ್ಮಾಣ ಸಂಸ್ಥೆಯ ಮೂಲಕ ಚಿತ್ರ ಮಾಡುವುದು ಈಗಿನ ಕಾಲಘಟ್ಟದಲ್ಲಿ ಸವಾಲಿನ ಕೆಲಸ. ಜೊತೆಗೆ ಹೊಸ ಕಲಾವಿದರು ಚಿತ್ರದಲ್ಲಿದ್ದಾರೆ. ಈಗ ನಡೆಯುತ್ತಿರುವುದೇ ಹೊಸಬರ ಹವಾ . ಗಿರಿರಾಜ್ ಚಿತ್ರದಲ್ಲಿ ಕಥೆಗೆ ಆದ್ಯತೆ ಕೊಡ್ತಾರೆ. ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿದರು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ದ ರಾ ಬೇಂದ್ರೆ ಅವರ ರಚನೆಯ " ಬಂಗಾರ ನೀರ.. ಕಡಲಾಚೆ ಗೀಚೆಗಿದೆ .. ನೀಲ ನೀಲ ತೀರ...ಹಾಡು ಬಳಸಿಕೊಂಡಿದ್ದು ಗೀತೆಗೆ ಪುನರ್ವಸು ಬೇಂದ್ರೆ ಅವರು ಒಪ್ಪಿಗೆ ನೀಡಿದ್ದಾರೆ. ಚಿತ್ರಕ್ಕೆ ಭರತ್ ಬಿ.ಜೆ ಸಂಗೀತ ನೀಡಿದ್ದಾರೆ
ನಿರ್ದೇಶಕ ಬಿ.ಎಂ. ಗಿರಿರಾಜ್ ಮಾತನಾಡಿ ಚಿತ್ರ ಸೆನ್ಸಾರ್ ಹಂತದಲ್ಲಿದ್ದು ನವೆಂಬರ್ ಕೊನೆಯ ಹಂತದಲ್ಲಿ ಬಿಡುಗಡೆ ಮಾಡಲು ಉದ್ದೇಶವಿದೆ. ಪ್ಯಾನ್ ಇಂಡಿಯಾ ಅಲ್ಲ. ಇಂಡಿಯಾದ ಪೇನ್ ಇಟ್ಟುಕೊಂಡಿರುವ ಸಿನಿಮಾ. ಗಂಗಾಧರ್ ವಿತರಣೆ ಮಾಡುತ್ತಿದ್ದಾರೆ. ಕನ್ನಡ ಮತ್ತು ಹಿಂದಿಯ ಮುಖಾಮುಖಿ,ಸಂಘರ್ಷ, ಅನುಸಂಧಾನದ ಹಿನ್ನೆಲೆಯಲ್ಲಿ ಚಿತ್ರ ಸಾಗಲಿದೆ. ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ವಿಭಿನ್ನವಾಗಿ ಮಾಡಲಾಗಿದೆ ಎಂದರು
ಸಂಬಂಧಗಳು ಎಂದರೆ ಯಾರು ಮನೆಯಲ್ಲಿರುವರ ಅಥವಾ ಹೊರಗಿನವರು ನಮ್ಮವರು ಎನ್ನುವುದನ್ನು ಹೇಳುವ ಪ್ರಯತ್ನ ಮಾಡಲಾಗಿದೆ. ದರಾ ಬೇಂದ್ರೆ ಅವರ ಹಾಡು ಸನ್ನಿವೇಶಕ್ಕೆ ತಕ್ಕಂತೆ ಬಳಸಿಕೊಳ್ಳಲಾಗಿದೆ .ಬಡಿ, ಗಡಿ,ಲಿಂಗಗಳ ಸುತ್ತ ಕಥೆ ಸಾಗಲಿದೆ. ತಮ್ಮ ನಿರ್ಮಾಣದ ಪ್ರತಿಯೊಂದು ಚಿತ್ರದಲ್ಲಿ ಕನ್ನಡದ ಕವಿಗಳು ಬರೆದಿರುವ ಹಾಡನ್ನು ಬಳಸಿಕೊಳ್ಳುವ ಉದ್ದೇಶ ಹೊಂದಲಾಗಿದೆ ಎಂದು ಮಾಹಿತಿ ಹಂಚಿಕೊಂಡರು.
ನಾಯಕ ಸಮರ್ಥ್ ಶೆಟ್ಟಿ ಮಾತನಾಡಿ ನಾಯಕನಾಗಿ ಮೊದಲ ಸಿನಿಮಾ ಪ್ರೀತಿ ಸಹಕಾರವಿರಲಿ. ಚಿತ್ರ ಚೆನ್ನಾಗಿ ಮೂಡಿಬಂದಿದೆ. ಗೌರಿಶಂಕರ್ ಎನ್ನುವ ಪಾತ್ರ ಮಾಡಿದ್ದು ಗೆಳೆಯನ ಜೊತೆ ಬಾಲ್ಯ ಮತ್ತು ಯವ್ವನ ಕಳೆದವ. ಒಂದು ಹಂತದಲ್ಲಿ ಅರ್ಥ ಮಾಡಿಕೊಳ್ಳದಿದ್ದಾಗ ಏನೆಲ್ಲಾ ಆಗಲಿದೆ ಎನ್ನುವುದು ಪಾತ್ರದ ತಿರುಳು ಎಂದರು.
ಕಲಾವಿದ ಪಿ.ಡಿ ಸತೀಶ್ ಚಂದ್ರ ಹಿರಿಯ ಕಲಾವಿದೆ ಯಮುನಾ ಶ್ರೀನಿಧಿ
ನಿರ್ಮಾಪಕ ಆರ್ ಕುಮಾರ್ ಸ್ವಾಮಿ,
ಸಂಗೀತ ನಿರ್ದೇಶಕ ಬಿಜೆ ಭರತ್,ಚಿತ್ರದಲ್ಲಿ ನಟಿಸಿರುವ ಕಲಾವಿದರಾದ ಶಮಂತ್ ರಾವ್, ಸಾಮ್ರಾಜ್ಞಿ , ರಂಗು ಸಮರ್ಪಣ್, ಶೈಲೇಂದ್ರ, ಕಲಾ ನಿರ್ದೇಶಕ ಹೊಸ್ಮನೆ ಮೂರ್ತಿ, ಸಂಕಲನಕಾರರಾದ ಕಿಟ್ಟು, ಜ್ಞಾನೇಶ್ ಮಠದ್, ಸೇರಿದಂತೆ ಚಿತ್ರತಂಡದ ಹಲವರು ಉಪಸ್ಥಿತರಿದ್ದರು.