ಚಿತ್ರ : ನೀ ನಂಗೆ ಅಲ್ಲವಾ
ನಿರ್ದೇಶನ : ಮನೋಜ್ ಪಿ ನಡಲುಮನೆ
ತಾರಾಗಣ: ರಾಹುಲ್ ಅರ್ಕಾಟ್, ಕಾಶಿಮಾ ರಫಿ, ಮಂಜುನಾಥ್ ಹೆಗ್ಡೆ, ಆರತಿ ಪಡುಬಿದ್ರಿ, ಗಿರೀಶ್ ಶಿವಣ್ಣ, ಐಶ್ಚರ್ಯ ಶಿಂಧೋಗಿ ಮತ್ತಿತರರು
ರೇಟಿಂಗ್ :- 3/5 ***
ಡಾಬಾಗಳಲ್ಲಿ ನಡೆಯುವ ದರೋಡೆ ಸುತ್ತ ಸಾಗುವ ಸಾಮಾಜಿಕ ಕಳಕಳಿ ಮತ್ತು ಅರಿವು ಮೂಡಿಸುವ ಚಿತ್ರ “ ನೀ ನಂಗೆ ಅಲ್ಲವಾ” ಈ ವಾರ ತೆರೆಗೆ ಬಂದಿದೆ.
ಹೆದ್ದಾರಿಯ ಡಾಬಾಗಳಿಗೆ ಸ್ನೇಹಿತೆಯರು, ಕುಟುಂಬದ ಮಹಿಳಾ ಸದಸ್ಯರ ಜೊತೆ ತೆರಳಿದಾಗ ಎಚ್ಚರಿಕೆ ವಹಿಸಬೇಕು ಇಲ್ಲದಿದ್ದರೆ ಸಮಸ್ಯೆಗಳು ಎದುರಾಗಲಿದೆ ಎನ್ನುವ ವಿಷಯವನ್ನು ಸಾಮಾಜಿಕ ನೆಲೆಗಟ್ಟಿನಲ್ಲಿ ಪ್ರೇಕ್ಷಕರ ಮುಂದಿಟ್ಟಿದ್ದಾರೆ.
ನಾಯಕ ರಾಹುಲ್ ಅರ್ಕಾಟ್, ಹಾಡು ಫೈಟಿನ ಸನ್ನಿವೇಶಗಳಲ್ಲಿ ಗಮನ ಸೆಳೆದಿದ್ದಾರೆ, ನಟನೆಯಲ್ಲಿ ಅಗತ್ಯ ತರಬೇತಿ ಪಡೆಯಬೇಕಾಗಿದೆ. ಜೊತೆಗೆ ಭಾವಾಭಿನಯೂ ಅಷ್ಟಕಷ್ಟೆ.
ನಾಯಕಿ ಕಾಶಿಮಾ ರಫಿ ಸಿಕ್ಕ ಅವಕಾಶಕ್ಕೆ ನ್ಯಾಯ ಒದಗಿಸಿದ್ಧಾರೆ. ಮಂಜುನಾಥ್ ಹೆಗ್ಡೆ, ಆರತಿ ಪಡುಬಿದ್ರಿಗೆ ಹೆಚ್ಚಿನ ಅವಕಾಶ ಸಿಕ್ಕಿದೆ ಜೊತೆಗೆ ಅವರು ಪಾತ್ರಕ್ಕೆ ನ್ಯಾಯ ಒದಿಗಿಸಿದ್ದಾರೆ ಒಂದಷ್ಟು ಹಾಡು, ಫೈಟು, ಇನ್ನೊಂದು ಸನ್ನಿವೇಶ ಸೇರಿಸಿ ಸಿನಿಮಾ ಮಾಡಬಹುದು, ಆದರೆ ಮಾಡಿದ ಸಿನಿಮಾ ಜನರ ಮನಸ್ಸಿಗೆ ಎಷ್ಟು ಮುಟ್ಟತ್ತದೆ ಎನ್ನುವುದು ಮುಖ್ಯ.
ನಿರ್ದೇಶಕ, ನಾಯಕ ಸೇರಿ ಇಡೀ ತಂತ್ರಜ್ಞರು ಸೇರಿ ಮಾಡಿದಚಿತ್ರ. ಬಜೆಟ್ ಮಿತಿ ಇರಬಹುದು, ಇಡೀ ತಂಡ ಕಷ್ಟಪಡುಬಹುದು, ಚಿತ್ರ ನೋಡುವ ಮಂದಿಗೆ ಸಿನಿಮಾ ಎಷ್ಟು ಚೆನ್ನಾಗಿಗೆ ಅನ್ನುವುದಷ್ಟೇ ಮುಖ್ಯವಾಗುತ್ತದೆ. ಇಲ್ಲಿಯೂ ಕೂಡ ಅದೇ ಆಗಿದೆ.
ನಾಯಕ ಲಕ್ಕಿ ಅರ್ಜುನ್ ( ರಾಹುಲ್ ಅರ್ಕಾಟ್) ಉಂಡಾಡಿ ಮೋಜು ಮಸ್ತಿ ಮಾಡಿದವ ಬಾರ್ ನಲ್ಲಿ ಹಾಡುವ ಹುಡುಗಿ ಖುಷಿ (ಕಾಶಿಮಾ ರಫಿ) ಮೇಲೆ ಮೊದಲ ನೋಟದಲ್ಲಿ ಪ್ರೀತಿಯ ಸೆಳೆತ.
ಲಕ್ಕಿಯ ಅಕ್ಕ ಆಶು (ಆರತಿ ಪಡುಬಿದ್ರಿ)ಯನ್ನು ಮದುವೆಯಾಗುವ ಹುಡುಗ, ತನ್ನೊಂದಿಗೆ ಐಟಿ ಕಂಪನಿಯಲ್ಲಿ ಕೆಲಸ ಮಾಡುವ ಹುಡುಗಿ ಖುಷಿ ಜೊತೆ ಚಿಕ್ಕಮಗಳೂರಿನಿಂದ ವಾಪಸ್ ಆಗುವ ಸಮಯದಲ್ಲಿ ಡಾಬಕ್ಕೆ ಊಟಕ್ಕೆ ತೆರಳಿದ ವೇಳೆ ನಡೆಯುವ ಘಟನೆಗಳು ಚಿತ್ರದ ಮತ್ತೊಂದು ಮಗ್ಗಲನ್ನು ಅನಾವರಣ ಮಾಡಿದೆ.
ನಿರ್ದೇಶಕ ಮನೋಜ್ ಪಿ ನಡಲುಮನೆ ಒಳ್ಳೆಯ ವಿಷಯವನ್ನು ಆಯ್ಕೆ ಮಾಡಿಕೊಂಡಿದ್ದಾರೆ, ಅದನ್ನು ತೆರೆಗೆ ತರಲು ಪರದಾಡಿದ್ದಾರೆ, ಹೀಗಾಗಿ ಅಲ್ಲಿಲ್ಲಿ ಕಥೆಯ ವೇಗ ಅಲ್ಲಲ್ಲಿ ದಾರಿ ತಪ್ಪಿದೆ. ಹಾಡು, ಪೈಟು, ಪ್ರೀತಿಯ ವಿಷಯವಿದ್ದರೆ ಸಿನಿಮಾ ಮಾಡಬಹುದು ಎಂದು ಚಿತ್ರವನ್ನು ನಿರೂಪಸಿದಂತೆ ಇದೆ.
ಕನ್ನಡಕ್ಕೆ ಒಳ್ಳೆಯ ನಿರ್ಮಾಪಕರ ಅಗತ್ಯವಿದೆ. ಕಥೆಯನ್ನು ಸಿದ್ದವಾಗಿರುವ ಸಿನಿಮಾವನ್ನು ತೆಗೆದುಕೊಳ್ಳುವಾಗ ಎಚ್ಚರಿಕೆ ವಹಿಸಿದರೆ ಇನ್ನಷ್ಟು ಸಿನಿಮಾಗಳಿಗೆ ಸ್ಪೂರ್ತಿಯಾಗಬಹುದು. ಇಲ್ಲ..