Chief Editor
Manohar. R (Manu)
Photo Journalist
chitrataramanu@gmail.com
+91 9845549026
ಕೃತಕ ಬುದ್ದಿಮತ್ತೆ ಮತ್ತು ಹ್ಯಾಕರ್ ಸುತ್ತ ಸಾಗುವ ವಿಭಿನ್ನ ಚಿತ್ರ ಲಂಬೋದರ 2.0...ರೇಟಿಂಗ್ :- 3.5 / 5 ***
Posted date: 13 Fri, Nov 2026 06:56:20 PM
ಚಿತ್ರ : ಲಂಬೋದರ 2.0
ನಿರ್ದೇಶನ : ಸಿಂಪಲ್ ಸುನಿ
ತಾರಾಗಣ: ಅನಿಲ್ ಶೆಟ್ಟಿ, ಸಾಚಿ ಬಿಂದ್ರಾ, ಕುನಾಲ್ ಕಪೂರ್, ರಾಘು ರಮಣಕೊಪ್ಪ, ಮೇಘನಾ ಗಾವಂಕರ್ ಮತ್ತಿತ್ತರರು
ರೇಟಿಂಗ್ :- 3.5 / 5 ***

ಜಗತ್ತಿನಲ್ಲಿ ಈಗಂತೂ ಕೃತಕ ಬುದ್ದಿಮತ್ತೆಯ ಕಾಲ, ಏನು ಬೇಕಾದರೂ ಸೃಷ್ಟಿ ಮಾಡಬಹುದಾಗಿದೆ. ತಂತ್ರಜ್ಞಾನದ ಬಳಕೆ ಮತ್ತು ಅದರ ದುರುಪಯೋಗದ ಸುತ್ತ ಸಾಗುವ ಆಸಕ್ತಿದಾಯಕ ಕಥೆಯನ್ನು ನಿರ್ದೇಶಕ ಸಿಂಪಲ್ ಸುನಿ ಅವರು “ಲಂಬೋದರ 2.0” ಚಿತ್ರದ ಮೂಲಕ ಜನರ ಮುಂದಿಟ್ಟಿದ್ಧಾರೆ.
 
ಕೃತಕ ಬುದ್ದಿಮತ್ತೆ ತಂತ್ರಜ್ಞಾನ ಮೂಲಕ ಸೃಷ್ಠಿಸಿರುವ ಶ್ರೀಕೃಷ್ಣ ಒಂದೆಡೆಯಾದರೆ ಮಾನವ ರೋಬೋ ಜಿಯಾ ಮತ್ತು  ಹ್ಯಾಕರ್‍ಗಳ ನಡುವೆ ನಡೆಯುವ ಜುಗಲ್ ಬಂಧಿಯನ್ನು ಚಿತ್ರ ಒಳಗೊಂಡಿದೆ. ಈ ಮೂಲಕ ಯುವ ಜನರನ್ನು ಸಿನಿಮಾದತ್ತ ಸೆಳೆಯುವ ಕೆಲಸ ಮಾಡಿದ್ದಾರೆ ನಿರ್ದೇಶಕರು.
 
ವಿಭಿನ್ನ ಪ್ರಯೋಗಗಳನ್ನು ಎಂದು ಕೈಬಿಟ್ಟಿಲ್ಲ, ತಮಗೆ ಇಷ್ಟವಾದ ಕಥಾವಸ್ತುವನ್ನು ಮೆರೆಸಿದ್ದಾರೆ, ಪ್ರೋತ್ಸಾಹಿಸಿ ಮತ್ತಷ್ಟು ಚಿತ್ರಗಳಿಗೆ ದಾರಿ ಮಾಡಿಕೊಟ್ಟಿದ್ದಾರೆ.
 
ಸಣ್ಣ ಮೊತ್ತಕ್ಕೆ ಜನರ ಬ್ಯಾಂಕ್‍ಖಾತೆಗೆ ಕನ್ನ ಹಾಕುವ ಹ್ಯಾಕರ್ ಅವ್ಯಕ್ತ (ಅನೀಲ್ ಶೆಟ್ಟಿ)  ಜನರಿಗೆ ಗೊತ್ತಾಗದಂತೆ ಹೇಗೆ ಹಣ ಲಪಟಾಯಿಸುತ್ತಾನೆ ಎನ್ನುವುದು ಕುತೂಹಲಕಾರಿ ಸಂಗತಿ. ಮತ್ತೊಬ್ಬ ಹ್ಯಾಕರ್ ಮಗಳು  ಸಮಯ (ಸಾಚಿ ಬಿಂದ್ರಾ)ಳ ಮೇಲೆ ಪ್ರೀತಿ, ಆಕೆಯನ್ನು ತನ್ನಳನ್ನಾಗಿಸಿಕೊಳ್ಳುವ ಭರಾಟೆ.
 
ಹ್ಯಾಕರ್ ರಾಘವ್ ಕಶ್ಯಪ್ ( ಕುನಾಲ್ ಕಪೂರ್)  ಹ್ಯಾಪಿನೆಸ್ ಇಂಡೆಕ್ಸ್‍ನಲ್ಲಿ ಭಾರತವನ್ನು ಮೊದಲ ಸ್ಥಾನಕ್ಕೆ ತರುವ ಗುರಿ ಅದಕ್ಕೆ ಆತ ಮಾಡಿದ್ದೇ£ನು, ಸಣ್ಣ ಪುಟ್ಟ ಹ್ಯಾಕರ್ ಕೆಲಸ ಮಾಡುವ ಎವಿಗೆ ರಾಘವ್ ಕಶ್ಯಪ್‍ನ ಆಟ ಗೊತ್ತಾಗುತ್ತದೆ ಅದು ಸಮಯಳಿಂದ, ಇಷ್ಟಕ್ಕೂ ಸಮಯ ಯಾರು, ಅವ್ಯಕ್ತ ತನ್ನ ಗುರಿ ಸಾಧಿಸುತ್ತಾನೆ. ಮುಂದೇನಾಗಲಿದೆ ಕುತೂಹಲ ಚಿತ್ರದಲ್ಲಿ ನೋಡಬೇಕು
ನಾಯಕ ಅನಿಲ್ ಶೆಟ್ಟಿ ತಮಗೆ ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ, ಹಾಗೆ ನಾಯಕಿ ಸಾಚಿ ಬಿಂದ್ರಾ ಕೂಡ. ಕುನಾಲ್ ಕಪೂರ್, ರಾಘು ರಮಣಕೊಪ್ಪ ಮತ್ತು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವ ಮೇಘನಾ ಗಾವಂಕರ್ ತಮಗೆ ಸಿಕ್ಕ ಪಾತ್ರಕ್ಕೆ ಜೀವ ತುಂಬುವ ಕೆಲಸ ಮಾಡಿದ್ದಾರೆ.
 
ನಿರ್ದೇಶಕ ಸಿಂಪಲ್ ಸುನಿ ಹೊಸ ಪ್ರಯತ್ನದ ಮೂಲಕ ಯುವಪೀಳಿಗೆಯ ಮನಸ್ಸು ಗೆಲ್ಲಲು ಮುಂದಾಗಿದ್ದಾರೆ. ಅದಕ್ಕೆ ವೀರ್ ಸಮರ್ಥ್ ಸಂಗೀತ ಮತ್ತು ಸಂತೋಷ್ ರೈ ಪಾತಾಜೆ ಛಾಯಾಗ್ರಾಹಣದಲ್ಲಿ ಸಾಥ್ ನೀಡಿದ್ದಾರೆ.
GALLERY
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಕೃತಕ ಬುದ್ದಿಮತ್ತೆ ಮತ್ತು ಹ್ಯಾಕರ್ ಸುತ್ತ ಸಾಗುವ ವಿಭಿನ್ನ ಚಿತ್ರ ಲಂಬೋದರ 2.0...ರೇಟಿಂಗ್ :- 3.5 / 5 *** - Chitratara.com
Copyright 2009 chitratara.com Reproduction is forbidden unless authorized. All rights reserved.

Fatal error: Uncaught ArgumentCountError: mysqli_close() expects exactly 1 argument, 0 given in /var/www/2abd550b-0850-492e-b3fe-6b047f2ad0c0/public_html/show-content.php:95 Stack trace: #0 /var/www/2abd550b-0850-492e-b3fe-6b047f2ad0c0/public_html/show-content.php(95): mysqli_close() #1 {main} thrown in /var/www/2abd550b-0850-492e-b3fe-6b047f2ad0c0/public_html/show-content.php on line 95