ಚಿತ್ರ : ಶಂಕರಾಭರಣ
ನಿರ್ದೇಶನ :ಸುಮಂತ್ ಭಟ್
ತಾರಾಗಣ: ಶೈನ್ ಶೆಟ್ಟಿ, ತನ್ವಿ ರಾಮ್, ಕೃತಿ ಶೆಟ್ಟಿ, ತನ್ವಿ ರಾವ್, ಅಸಂಪತಚ ರಾಜ್, ಅನೀಲ್ ಕುಮಾರ್ ಚೌಹ್ಹಾಣ್,, ಅರ್ಜುನ್ ಕಜೆ
ರೇಟಿಂಗ್ : * 3.5/5
ಕನ್ನಡದಲ್ಲಿ ಇತ್ತೀಚೆಗೆ ಹೊಸ ಹೊಸ ಕಂಟೆಂಟ್ ಗಳ ಸಿನಿಮಾ ಕಥೆಗಳ ಸಿನಿಮಾಗಳು ತೆರೆಗೆ ಬರುತ್ತಿವೆ. ಆ ಸಾಲಿಗೆ ಮತ್ತೊಂದು ಸೇರ್ಪಡೆ " ಶಂಕರಾಭರಣ ".
ಬಿಗ್ ಬಾಸ್ ರಿಯಾಲಿಟಿ ಶೋ ವಿಜೇತ ಶೈನ್ ಶೆಟ್ಟಿ ನಾಯಕನಾಗಿರುವ ಚಿತ್ರ ಇದು. ಖಾಸಗೀ ಬಸ್ ಮತ್ತು ಅದರ ಹಿನ್ನೆಲೆಯಲ್ಲಿ ನಡೆಯುವ ಕಥೆಯನ್ನು ಆಧರಿಸಿ ಚಿತ್ರ ಮಾಡಲಾಗಿದೆ.
ನಿರ್ದೇಶಕ ಸುಮಂತ್ ಭಟ್, ಕರಾವಳಿ ಭಾಷೆಯ ಜೊತೆಗೆ ಉತ್ತರ ಕರ್ನಾಟಕದ ಭಾಷೆ ಮತ್ತು ಸಾಮಾನ್ಯ ಕನ್ನಡ ಆಡುಭಾಷೆಯನ್ನು ಚಿತ್ರದಲ್ಲಿ ಮಿಶ್ರಣ ಮಾಡಿದರೆ - ತೌಡುಗೋಳಿ ಎಂಬಲ್ಲಿ ಭೂತ - ಪ್ರೇತಗಳು ಹೆಚ್ಚು. ಅಲ್ಲಿನ ಬ್ರಿಡ್ಜ್ ಬಳಿ ಬಂದರೆ ಸಾಕು, ಬಸ್ ಕೆಟ್ಟು ನಿಲ್ಲುವುದು ಪಕ್ಕಾ. ಇನ್ನೂ ಅಲ್ಲಿನ ಹೆಣ್ಮಕ್ಕಳು ನಿಗೂಢವಾಗಿ ಕಾಣೆಯಾಗುತ್ತಿರುತ್ತಾರೆ. ಇಷ್ಟೆಲ್ಲಾ ಇರೋವಾಗಲೇ ‘ಶಂಕರಾಭರಣ’ ಬಸ್‌ನಲ್ಲಿ ಗುಮ್ಮ ಪ್ರತ್ಯಕ್ಷವಾಗುತ್ತದೆ. ಆಮೇಲೆ ಏನೇನಾಗುತ್ತದೆ ಎಂಬುದೇ ಚಿತ್ರದ ಕಥೆ.
ಶಂಕರ ಭಯಂಕರ ಬಸ್ ಖಾಸಗಿ ಡ್ರೈವರ್ ( ಶೈನ್ ಶೆಟ್ಟಿ) ನನ್ನು ಬಸ್ ಮಾಲೀಕ ಮಧುಕರ (ಅನೀಲ್ ಕುಮಾರ್ ಚೌಹ್ಹಾಣ್) ಮಗನ ರೀತಿ ನೋಡಿಕೊಂಡವ. ಆತನ ಮಗ ಪ್ರೇಮ್ (ಅನಿಲ್ ಕಜೆ) ಮೋಜು ಮಸ್ತಿಯೇ ಆತನ ಕಾಯಕ, ಮಗನ ಮೇಲೆ ಹಲ್ಲೆ ಮಾಡಿದ ಎನ್ನುವ ಕಾರಣಕ್ಕೆ ಮಗನಂತಿರುವ ಶಂಕರನ ಮೇಲೆ ಯಜಮಾನ ಹಲ್ಲೆ ನಡೆಸುತ್ತಾನೆ, ಸ್ವಾಭಿಮಾನಿ ಶಂಕರ ಕೆಲಸ ಬಿಡುತ್ತಾನೆ.
ಆತನಿಗೊಬ್ಬಳು ಪ್ರೇಯಸಿ ಜೆನ್ನಿ ( ತನ್ವಿ ರಾಮ್) ಮತ್ತು ಅಕ್ಕ ಶಾಂತಿ (ಕೃತಿ ಶೆಟ್ಟಿ) ಸಹಕಾರದಿಂದ ಬ್ಯಾಂಕ್‍ನಲ್ಲಿ ಸಾಲ ಪಡೆದು ಕೆಟ್ಟುನಿಂತ ಬಸ್ ಖರೀದಿ ಮಾಡ್ತಾನೆ ಮುಂದೇನು ಎನ್ನುವುದು ಚಿತ್ರದ ಕುತೂಹಲ.
ನಟ ಶೈನ್ ಶೆಟ್ಟಿ ತಮಗೆ ಸಿಕ್ಕ ಅವಕಾಶವನ್ನು ಬಳಸಿಕೊಂಡಿದ್ದಾರೆ, ನಾಯಕಿ ತನ್ವಿ ರಾಮ್‍ಗೆ ಹೆಚ್ಚು ಕೆಲಸವಿಲ್ಲ, ದೆವ್ವದ ಪಾತ್ರದಲ್ಲಿ ಕಾಣಿಸಿಕೊಂಡಿರುವ ತನ್ವಿ ರಾವ್‍ಗೆ ಹೆಚ್ಚು ಅವಕಾಶ ನೀಡಲಾಗಿದೆ.
ಹಿರಿಯ ಕಲಾವಿದ ಸಂಪತ್ ರಾಜ್ ಅನಿಲ್ ಕುಮಾರ್ ಚೌಹ್ಹಾಣ್, ಅನಿಲ್ ಕಜೆ, ಕೃತಿ ಶೆಟ್ಟಿ ದೀಪಕ್ ರೈ ಪಣಾಜೆ, ಮೈಮ್ ರಾಮದಾಸ್ ಸಿಕ್ಕ ಪಾತ್ರಗಳಿಗೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದಾರೆಚರಣ್ ರಾಜ್ ಸಂಗೀತದಲ್ಲಿ ಸಖಿಯೇ ಸಖಿಯೇ ಹಾಡು ಗುನುಗವಂತಿದೆ.