Chief Editor
Manohar. R (Manu)
Photo Journalist
chitrataramanu@gmail.com
+91 9845549026
?ಜೊತೆಗಾರ? ಈ ವಾರ ತೆರೆಗೆ
Posted date: 8/September/2010

ಕಳೆದ ಒಂದು ವರ್ಷದಿಂದ ರಜತ ಪರದೆಯ ಮೇಲೆ ಆಗಮಿಸಲು ತಯಾರಿ ನಡೆಸುತ್ತಿದ್ದ ಮೋಹಕ ತಾರೆ ರಮ್ಯ ಹಾಗೂ ಲವ್ಲಿ ಸ್ಟಾರ್ ಪ್ರೇಮ್ ಕುಮಾರ್ ಅಭಿನಯದ ’ಜೊತೆಗಾರ’ ಈ ವಾರ ತೆರೆಯನ್ನೇರುತ್ತಿದೆ. ಈಗಾಗಲೇ ’ಜೊತೆಗಾರ’ ಚಿತ್ರದ ಹಾಡುಗಳು ಅದರ ಚಿತ್ರೀಕರಣ ಜನಪ್ರಿಯತೆಯನ್ನು ಪಡೆದುಕೊಂಡಿದ್ದು ಈ ಚಿತ್ರದ ಕಥಾಹಂದರವು ವಿಶೇಷವಾಗಿದೆ ಎಂದು ಅಶ್ವಿನಿ ಸಂಸ್ಥೆ ತಿಳಿಸುತ್ತದೆ.

’ಜೊತೆಗಾರ’ ಎಲ್ಲರ ಜೀವನದಲ್ಲೂ ಬಹುತೇಕ ಇರಲೇಬೇಕು ಸಮಾಜದಲ್ಲಿ. ಆದರೆ ಈ ಚಿತ್ರದಲ್ಲಿ ಜೊತೆಗಾರರು ಏನು ಮಾಡುತ್ತಾರೆ, ಹೆಂಗಿರುತ್ತಾರೆ ಎಂಬ ಕುತೂಹಲ ಸಹಜವಾಗಿ ಉಳಿದಿದೆ.

ಅಶ್ವಿನಿ ಸಂಸ್ಥೆ ಈ ಹಿಂದೆ ’ಜೋಗಿ’ ಹಾಗೂ ’ಪ್ರೀತಿ ಏಕೆ ಭೂಮಿ ಮೇಲಿದೆ’ ಚಿತ್ರವನ್ನು ನಿರ್ಮಾಣ ಮಾಡಿತ್ತು. ಈಗ ಅಶ್ವಿನಿ ಎಂಟರ್‌ಟೈನ್‌ಮೆಂಟ್ ಅಡಿಯಲ್ಲಿ ’ಜೊತೆಗಾರ’ ಬಿಡುಗಡೆ ಮಾಡುತ್ತಿದೆ. ಈ ಚಿತ್ರದ ವಿಶೇಷ ಆಕರ್ಷಣೆ ನಿರ್ದೇಶಕ ಪ್ರೇಮ್ ಹಾಡೊಂದನ್ನು ನಿರ್ದೇಶನ ಮಾಡುವ ಉಸ್ತುವಾರಿ ಹೊತ್ತಿರುವುದು.

ಸಿಗಮಣಿ ಅವರ ನಿರ್ದೇಶನದಲ್ಲಿ ತಯಾರಾಗಿರುವ ’ಜೊತೆಗಾರ’ ಚಿತ್ರಕ್ಕೆ ಎನ್. ರಾಘವ್ ಛಾಯಾಗ್ರಹಣ, ಸುಜಿತ್ ಶೆಟ್ಟಿ ಸಂಗೀತವಿದೆ. ಪ್ರೇಮ್‌ಕುಮಾರ್, ರಮ್ಯ ಜೊತೆ ಹಿರಿಯ ತಾರೆ ಲಕ್ಷ್ಮಿ, ಆಶೀಶ್ ವಿದ್ಯಾರ್ಥಿ ಹಾಗೂ ಇನ್ನಿತರರು ಅಭಿನಯಿಸಿದ್ದಾರೆ. ಕೆ.ನಂಜುಂಡ್ ಸಂಭಾಷಣೆ, ದೀಪು ಎಸ್. ಕುಮಾರ್ ಸಂಕಲನ, ರವಿ ವರ್ಮಾ, ಡಿಫ಼ರೆಂಟ್ ಡ್ಯಾನಿ ಸಾಹಸ ಈ ಚಿತ್ರಕ್ಕಿದೆ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - ?ಜೊತೆಗಾರ? ಈ ವಾರ ತೆರೆಗೆ - Chitratara.com
Copyright 2009 chitratara.com Reproduction is forbidden unless authorized. All rights reserved.