Chief Editor
Manohar. R (Manu)
Photo Journalist
chitrataramanu@gmail.com
+91 9845549026
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜೈಪುರದಲ್ಲಿ ಜನವರಿ ೫ ರಿಂದ ಫೆಬ್ರವರಿ ೧೦ ರ ವರೆಗೆ
Posted date: 29/December/2010

ಶ್ರೀ ಸಂಗೊಳ್ಳಿ ರಾಯಣ್ಣ ಸಿನಿ ಕಂಭೈನ್ಸ್ ಬೆಳಗಾವಿ ಲಾಂಛನದಲ್ಲಿ ಆನಂದ್ ಬಿ. ಅಪ್ಪುಗೋಳ ನಿರ್ಮಿಸುತ್ತಿರುವ ಅತಿ ಹೆಚ್ಚು ಬಜೆಟ್‌ನ ಚಿತ್ರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಾಗಣ್ಣ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಜೈಪುರದಲ್ಲಿ ಜನವರಿ ೫ ರಿಂದ ಫೆಬ್ರವರಿ ೧೦ರವರೆಗೆ ರಾಯಣ್ಣ ಬ್ರಿಟೀಷರೊಂದಿಗೆ ಹೋರಾಡುವ ದೃಶ್ಯದಲ್ಲಿ ೩೫೦ ಜನ ಫೈಟರ‍್ಸ್ ಇದರಲ್ಲಿ ಕರ್ನಾಟಕ ಚೆನ್ನೈ, ಹೈದರಾಬಾದ್ ಬಾಂಬೆ ಫೈಟರ‍್ಸ್‌ಗಳು ಪಾಲ್ಗೊಳ್ಳಲಿದ್ದಾರೆ. ಇದರಲ್ಲಿ ೧೦೦೦ ಕುದುರೆ ೫೦ ಆನೆಗಳೊಂದಿಗೆ ವಿದೇಶಿ ನಟರು ೧೨೦ ಜನ ಹಾಗೂ ೧೫೦೦ ಜನ ಸಹ ಕಲಾವಿದರು ಬ್ರಿಟೀಷರ ಪರ ಹಾಗೂ ಕಿತ್ತೂರಿನ ಸೈನಿಕರು ೧೫೦೦ ಜನ  ಈ ಯುದ್ಧ ಸನ್ನಿವೇಶದಲ್ಲಿ ಪಾಲ್ಗೋಳ್ಳಲಿದ್ದಾರೆ. ಇದರೊಂದಿಗೆ ಗೆರಿಲ್ಲಾವಾರ್, ೬ ದಿನಗಳು, ಹಾಗೂ ಹಲವು ಸನ್ನಿವೇಷಗಳು ಸೇರಿವ. ಇದರಲ್ಲಿ ನಿರ್ಮಾಣ ಸಹಾಯಕರು ೩೦ ಜನ, ವಸ್ತಾಲಂಕಾರ ೨೫ ಜನ, ವರ್ಣಾಲಂಕಾರ ೫೦ಜನ, ಕಲಾನಿರ್ದೇಶನದ ಸಹಾಯಕರು ೧೫ ಜನ, ಸೆಟ್ ಅಸಿಸ್ಟೆಂಟ್ ೩೦ ಜನ ಇರುತ್ತಾರೆ. ಇದಲ್ಲದೆ ಚೆನ್ನಮ್ಮನ ದರ್ಬಾರ್ ಹಾಗೂ ಚಿನ್ನಿಪ್ರಕಾಶ್, ನೃತ್ಯ ನಿರ್ದೇಶನದಲ್ಲಿ ೫೦ ಜನ ಡ್ಯಾನ್ಸ್ರ್‌ಗಳು ಪಾಲ್ಗೊಳ್ಳುತ್ತಾರೆ. ೪ ಕ್ಯಾಮರಾ ಅಲ್ಲದೆ ೧ ಹೆಲಿಕ್ಯಾಮ್, ೫೦೦ ಫ್ರೇಮ್ಸ್ ಕ್ಯಾಮರಾ ಕ್ರೇನ್ ಜಿಮಿಜಿ ಸ್ಟಡಿಕ್ಯಾಮ್ ಬಳಸಲಾಗುತ್ತೆ. ಚಿತ್ರದ ಕಥೆ, ಸಾಹಿತ್ಯ, ಸಂಭಾಷಣೆ, ಕೇಶವಾದಿತ್ಯ, ಸಂಗೀತ ಯಶೋವರ್ಧನ ಚಿತ್ರಕಥೆ - ಕೇಶವಾದಿತ್ಯ - ನಾಗಣ್ಣ, ಛಾಯಾಗ್ರಹಣ ರಮೇಶ್ ಬಾಬು, ಸಂಕಲನ ಗೋವರ್ಧನ್, ಕಲೆ ರಮೇಶ್ ಬಾಬು, ಸಾಹಸ ರವಿವರ್ಮ, ನೃತ್ಯ ಚಿನ್ನಿ ಪ್ರಕಾಶ್, ಶಿವಶಂಕರ್, ನಿರ್ವಹಣೆ : ಸುಂದರರಾಜ್ - ಸಗಾಯರಾಜ್ ತಾರಾಗಣದಲ್ಲಿ ದರ್ಶನ್, ಶಶಿಕುಮಾರ್, ಜಯಪ್ರದ, ಲಿಖಿತ, ಶ್ರೀನಿವಾಸಮೂರ್ತಿ ಶೋಭರಾಜ್, ಉಮಾಶ್ರೀ, ದೊಡ್ಡಣ್ಣ, ಸಿ.ಆರ್.ಸಿಂಹ, ರಮೇಶ್ ಭಟ್, ಶಿವಕುಮಾರ್, ಧರ್ಮ, ಸೌರವ್, ಸತ್ಯಜಿತ್, ಬ್ರಹ್ಮಾವರ್, ಕರಿಬಸವಯ್ಯ, ಕಿಲ್ಲರ್ ವೆಂಕಟೇಶ್, ಅರವಿಂದ್ ಬಿರೇದಾರ್ ಹಾಗೂ ವಿಜಯ ಸಾರಥಿ ಅಭಿನಯಿಸುತ್ತಿದ್ದಾರೆ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜೈಪುರದಲ್ಲಿ ಜನವರಿ ೫ ರಿಂದ ಫೆಬ್ರವರಿ ೧೦ ರ ವರೆಗೆ - Chitratara.com
Copyright 2009 chitratara.com Reproduction is forbidden unless authorized. All rights reserved.