ಮನುಷ್ಯನ ಜೀವನದಲ್ಲಿ ನೆನಪುಗಳು ಒಂದು ಮಧುರ ಅನುಭವ ಕಹಿ ಸಿಹಿ ಅನುಭವಗಳ ಕನಸನ್ನು ತೆರೆದಿಡುವ ಕಥೆ ಹೊಂದಿದ ನೆನಪಿನಂಗಳ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭ ಕಳೆದವಾರ ನಡೆಯಿತು.  ಸಾಹಿತಿ ದೊಡ್ಡರಂಗೇಗೌಡರು ಹಾಗೂ ವಿತರಕ ಶಿವಪ್ರಸಾದ್ ಧ್ವನಿಸುರುಳಿಗಳನ್ನು ಲೋಕಾರ್ಪಣೆ ಮಾಡಿದರು.
ಯುವ ನಿರ್ದೇಶಕ ಧನುಚಂದ್ರ ಮಾವಿನಕುಂಟೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರವನ್ನು ಜಿ.ರಾಮಕೃಷ್ಣ ನಿರ್ಮಿಸಿದ್ದಾರೆ.  ಚಿತ್ರದ ಹಾಡುಗಳಿಗೆ ಸಿ.ಆರ್.ಬಾಬ್ಬಿ ಸಂಗೀತ ಸಂಯೋಜನೆ ಮಾಡಿದ್ದಾರೆ.  ನಿರ್ಮಾಪಕರ ಪುತ್ರ ಹೇಮಂತ್ ನಟಿ ಸುಪ್ರಿತಾ ಯುವ ಜೋಡಿಗಳಾಗಿ ಅಭಿನಯಿಸಿದ್ದಾರೆ.  
ನನ್ನ ಮೊದಲ ಪ್ರಯತ್ನಕ್ಕೆ ನಿರ್ಮಾಪಕ ಜಿ.ರಾಮಕೃಷ್ಣ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹಿಸಿದ್ದಾರೆ.  ನಮ್ಮ ತಂಡದಲ್ಲಿ ಸುಪ್ರೀತಾ ಹಾಗೂ ಸಿ.ಆರ್.ಬಾಬಿ ಅವರನ್ನು ಬಿಟ್ಟು ಉಳಿದವರೆಲ್ಲ ಹೊಸಬರು ಎಲ್ಲರೂ ತುಂಬಾ ಉತ್ಸಾಹದಿಂದ ಗೆಲ್ಲಲೇಬೇಕೆಂಬ ಹಠದಿಂದ ಈ ಚಿತ್ರದಲ್ಲಿ ಕೆಲಸ ಮಾಡಿದ್ದೇವೆ.  ಹಿರಿಯ ಕಲಾವಿದರೊಬ್ಬರ ಅಭಿನಯದ ಹಾಡೊಂದನ್ನು ಬಿಟ್ಟು ಉಳಿದೆಲ್ಲಾ ಭಾಗದ ಚಿತ್ರೀಕರಣ ಮುಗಿದಿದೆ. ೬ ಹಾಡುಗಳು ಹಾಗೂ ೪ ಚಿಕ್ಕ ಹಾಡು ಸೇರಿ ೧೦ ಹಾಡುಗಳು ಈ ಚಿತ್ರದಲ್ಲಿವೆ.  ಮದುವೆ ಹಾಡು, ಕಾಲೇಜು ಹಾಡು, ನಾಯಕ-ನಾಯಕಿ ಕನಸಿನ ಹಾಡು, ಶೋಕಭರಿತ ಹಾಡು ಹೀಗೆ ಎಲ್ಲಾ ವಿಧವಾದ ಹಾಡುಗಳು ಪ್ರೇಕ್ಷಕರನ್ನು ರಂಜಿಸಲಿವೆ.  ಸುಮಾರು ಆಡಿಯೋ ಕಂಪನಿಗಳ ಬಾಗಿಲಿಗೆ ಅಲೆದಾಡಿದರೂ ಯಾರೂ ಪ್ರೋತ್ಸಾಹಿಸದಿದ್ದಾಗ ಆನಂದ್ ಆಡಿಯೋದ ಮೋಹನ್ ನಮ್ಮ ಪ್ರಯತ್ನವನ್ನು ಗೌರವಿಸಿದರು ಎಂದು ನಿರ್ದೇಶಕರ ಧನುಚಂದ್ರ ಚಿತ್ರ ಹಾಗೂ ಹಾಡುಗಳ ಬಗ್ಗೆ ಹೇಳಿಕೊಂಡರು.
ಸಂಗೀತ ನಿರ್ದೇಶಕಿ ಸಿ.ಆರ್.ಬಾಬಿ ಮಾತನಾಡಿ ಇದುವರೆಗೆ ನಾನು ಮಾಡಿದ ೧೦ ಚಿತ್ರಗಳಲ್ಲಿ ಇದು ತುಂಬಾ ವಿಶೇಷ ಚಿತ್ರ.  ಸಪ್ತಸ್ವರಗಳನ್ನು ಇಟ್ಟುಕೊಂಡೇ ಹೊಸ ಪ್ರಯೋಗ ಮಾಡಿದ್ದೇನೆ.  ನಿರ್ಮಾಪಕರಿಂದ ಸಪೋರ್ಟನಿಂದ ಇದು ಸಾಧ್ಯವಾಯಿತು.  ಅಲ್ಲಿದೆ ಇಲ್ಲಿರುವ ಎಲ್ಲರಿಗೂ ಗೆಲ್ಲಲೇಬೇಕೆಂಬ ಹಠವಿದೆ.  ಹೇಮಂತು ಶಮಿತಾ ಮಲ್ನಾಡ ರಾಜೇಶ ಕೃಷ್ಣನ್, ಚೇತನ್ ಸೇರಿದಂತೆ ಕನ್ನಡಗಾಯಕ ಗಾಯಕಿಯರಿಂದಲೇ ಎಲ್ಲಾ ಹಾಡುಗಳನ್ನು ಹಾಡಿಸಿದ್ದೇನೆ ಹಾಗೂ ಚಾರುಮತಿ ಎಂಬ ಹೊಸ ಗಾಯಕಿಯನ್ನು ಪರಿಚಯಿಸಿದ್ದೇನೆ ಎಂದು ಹೇಳಿದರು.
ನಾಯಕಿ ಸುಪ್ರಿತಾ ಅವರಿಗೆ ಅಂಬಾರಿ ನಂತರ ಅದೇ ಥರದ ಅನುಭವಗಳನ್ನು ನೀಡಿದ ಸಿನಿಮಾವಿದಂತೆ, ನನ್ನ ಪಾತ್ರಕ್ಕೆ ತುಂಬಾ ಪ್ರಾಮುಖ್ಯತೆ ಇದೆ.  ನಿರ್ದೇಶಕರ ಅಗಾಧ ಪರಿಶ್ರಮದಿಂದ ಚಿತ್ರ ಅದ್ಭುತವಾಗಿ ಮೂಡಿಬಂದಿದೆ ಎಂದವರು ಹೇಳಿದರು.  ನಾಯಕ ಹೇಮಂತ್ ನಿರ್ಮಾಪಕರ ಪುತ್ರ ಕೂಡ,  ಬಾಬಿ ಅವರು ಚಿತ್ರಕಥೆಗೆ ಬೇಕಾದಂಘ ಟ್ಯೂನ್‌ಗಳನ್ನು ಕೊಟ್ಟಿದ್ದಾರೆ.  ಧನುಚಂದ್ರ ಅವರು ನಮ್ಮನ್ನು ಚಿಕ್ಕ ಮಕ್ಕಳಂತೆ ತಿದ್ದಿ ಅಭಿನಯ ತೆಗೆದಿದ್ದಾರೆ.  ಸುಪ್ರಿತಾ ಅಪರಾಧ ದೊಡ್ಡ ನಟಿಯ ಜೊತೆ ಅಭಿನಯಿಸುವುದಕ್ಕೆ ಸ್ವಲ್ಪ ಅಂಜಿಕೆಯಿತ್ತು.  ಎರಡು ದಿನದಲ್ಲಿ ಹೊಂದಿಕೊಂಡೆ ಎಂದು ಬಣ್ಣ ಹಚ್ಚಿದ ಪ್ರಥಮ ಅನುಭವಗಳನ್ನು ಹೊರ ಹಾಕಿದರು.
ನಿರ್ಮಾಪಕ ರಾಮಕೃಷ್ಣ ಅವರೂ ಧನುಚಂದ್ರ ಅವರ ಕೆಲಸ ನಿಷ್ಠೆಯನ್ನು ಹೊಗಳಿದರು. ಇದೇ ಸಂದರ್ಭದಲ್ಲಿ ಸಾಹಿತಿ ದೊಡ್ಡರಂಗೇಗೌಡ, ಎಲ್.ಎನ್.ಶಾಸ್ತ್ರಿ, ನಾಗೇಂದ್ರ ಪ್ರಸಾದ್, ಹೃದಯ ಶಿವ, ಸಭೆಯಲ್ಲಿ ಹಾಜರಿದ್ದರು.