Chief Editor
Manohar. R (Manu)
Photo Journalist
chitrataramanu@gmail.com
+91 9845549026
`ಜೋಗಯ್ಯ` ನ ಮಾತು ಮುಗೀತು
Posted date: 22/June/2011

೧೦೦ ದಿನಗಳ ಚಿತ್ರೀಕರಣ ಮಾಡಿದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರ ೧೦೦ನೇ ಚಿತ್ರ ’ಜೋಗಯ್ಯ’ ಇತ್ತೀಚೆಗೆ ಆಕಾಶ್ ಸ್ಟುಡಿಯೋದಲ್ಲಿ ೧೪ ದಿವಸಗಳಲ್ಲಿ ಮಾತಿನ ಭಾಗದ ಕೆಲಸ ಪೂರ್ಣಗೊಂಡಂತಾಗಿದೆ. ಧ್ವನಿಸುರುಳಿಯಲ್ಲಿ ಅಲೆಯನ್ನು ಎಬ್ಬಿಸಿದ ಕಲೆಗಾರ ಹಾಗೂ ಸೊಗಸುಗಾರ ’ಜೋಗಯ್ಯ’ ಇದೀಗ ೩ಡಿ ತಂತ್ರಜ್ಞಾನದ ಲೇಪನಕ್ಕೆ ತಯಾರಿ ಮಾಡಿಕೊಳ್ಳುತ್ತಿದೆ. ಆಗಸ್ಟ ೧೨ರಂದು ’ಜೋಗಯ್ಯ’ ೨೦೦ ಚಿತ್ರಮಂದಿರದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ಪ್ರೇಮ್ ಪಿಕ್ಚರ‍್ಸ್ ಅವರ ರಕ್ಷಿತಾ ಪ್ರೇಮ್ ನಿರ್ಮಾಣದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರ ೧೦೦ನೇ ಚಿತ್ರ ’ಜೋಗಯ್ಯ’ ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಹುಬ್ಬಳ್ಳಿ, ಕಾರವಾರ, ಹೃಷಿಕೇಶ ಸ್ಥಳಗಳಲ್ಲಿ ಚಿತ್ರೀಕರಣ ಪೂರೈಸಿದೆ. ’೩ಡಿ’ ಹಾಡಿನ ಚಿತ್ರೀಕರಣಕ್ಕೆ ಚಿತ್ರದುರ್ಗದಿಂದ ಪ್ರಾರಂಭಿಸಿ ಅನೇಕ ಸ್ಥಳಗಳಲ್ಲಿ ೬೦೦ಕ್ಕೂ ಹೆಚ್ಚು ಸಹಾಯಕರೊಂದಿಗೆ ವಿಶಿಷ್ಟ ರೀತಿಯಲ್ಲಿ ಸೆರೆಹಿಡಿಯಲಾಗಿದೆ. ಭಾರತೀಯ ಚಿತ್ರರಂಗದಲ್ಲಿ ಪ್ರಥಮ ಬಾರಿಗೆ ’೩ಡಿ’ ಎಫೆಕ್ಟ್‌ನಲ್ಲಿ ಸಿದ್ಧಗೊಳ್ಳುತ್ತಿರುವ ಈ ಹಾಡಿಗೆ ಕೋಟಿಗೂ ಹೆಚ್ಚು ಹಣ ಖರ್ಚಾಗುತ್ತಿದ್ದು ಪ್ರೇಕ್ಷಕರಿಗೆ ವಿಶೇಷ ಅನುಭವ ನೀಡುವುದು ಎಂದು ’ಜೋಗಯ್ಯ’..........ದಿ ಲೆಜೆಂಡ್ ಆಫ್ ಅಂಡರ್‌ವರ್ಲ್ಡ ಚಿತ್ರದ ಹ್ಯಾಟ್ರಿಕ್ ನಿರ್ದೇಶಕ ಪ್ರೇಮ್ ತಿಳಿಸುತ್ತಾರೆ.

ವಿ. ಹರಿಕೃಷ್ಣ ಅವರ ಸಂಗೀತ, ನಂದಾ ಅವರ ಛಾಯಾಗ್ರಹಣ ಇರುವ ಈ ಚಿತ್ರದ ನೃತ್ಯ ನಿರ್ದೇಶಕರು ನಾಗೇಶ್. ಸಾಹಸ ನಿರ್ದೇಶಕರು ಮಾಸ್ ಮಾದ. ಸಂಭಾಷಣೆ ನರೇಂದ್ರ ಬಾಬು ಹಾಗೂ ನಂದಕುಮಾರ್.

ತಾರಾಗಣದಲ್ಲಿ ಶಿವರಾಜ್‌ಕುಮಾರ್, ಸುಮೀತ್ ಕೌರ್ ಅತ್ವಾಳ್, ಪೂಜಾಗಾಂಧಿ, ನವ್ಯ, ಪತ್ರಕರ್ತ ಬಿ.ಗಣಪತಿ, ರವಿಶಂಕರ್, ಗುರುರಾಜ್ ಹೊಸಕೋಟೆ, ಉಮೇಶ್ ಪುಂಗ, ಸುರೇಶ್ ಮಂಗಳೂರ್, ದಶಾವರ ಚಂದ್ರು, ಜಾನ್ ಹಾಗೂ ಇನ್ನಿತರರು ಇದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - `ಜೋಗಯ್ಯ` ನ ಮಾತು ಮುಗೀತು - Chitratara.com
Copyright 2009 chitratara.com Reproduction is forbidden unless authorized. All rights reserved.