Chief Editor
Manohar. R (Manu)
Photo Journalist
chitrataramanu@gmail.com
+91 9845549026
ಶೋಕಿ ಶುರುವಾಯ್ತು
Posted date: 9/July/2011

ಏಸ್.ವಿಷನ್ ಮೂವೀಸ್ - ವರ್ಮ ಫಿಲಂಸ್ ಲಾಂಛನದಲ್ಲಿ  ಅಶೋಕ್ ರಾಜ್  ಭರತ್ ಪಾಲೂರು, ಕೂಡಿ ನಿರ್ಮಿಸುತ್ತಿರುವ ಶಂಕರ್ ನಿರ್ದೇಶನದ ಶೋಕಿ ಚಿತ್ರಕ್ಕೆ ಕಂಠೀರವ ಸ್ಟುಡಿಯೋದಲ್ಲಿ ಮುಹೂರ್ತ ನೆರವೇರಿತು.   ಆರಂಭದಲ್ಲಿ  ದಿ|| ನರಸಿಂಹರಾಜು ಪತ್ನಿ ಹಾಗೂ ಪುತ್ರಿಯರು ಜ್ಯೋತಿ ಬೆಳಗಿದರು.  ಪ್ರಾರಂಭ ದೃಶ್ಯಕ್ಕೆ ಅಬಕಾರಿ ಸಚಿವ ರೇಣುಕಾಚಾರ್ಯ ಕ್ಲಾಪ್ ಮಾಡಿದರು.  ಶ್ರೀನಿವಾಸನ್ ಐ.ಜಿ. (ಬಂಧಿಖಾನೆ) ಕ್ಯಾಮೆರಾ ಚಾಲನೆ ಮಾಡಿದರು.  ಚಿತ್ರದ ಛಾಯಾಗ್ರಹಣ ರಾಮಾಂಜಿ, ಸಂಗೀತ ವಿ.ಶ್ರೀಧರ್, ಕಲೆ ಸುಭಾಷ್ ಕಡಕೋಳ ಸಂಭಾಷಣೆ ಧನಂಜಯ - ಕಣ್ಣನ್, ಸಹ ನಿರ್ದೇಶನ, ಕಾರ್ತಿಕ್-ಮಂಜು, ಮೇಲ್ವಿಜಾಚರಣೆ ನರಸಪ್ಪ, ನಿರ್ವಹಣೆ ಅಚ್ಯುತರಾವ್ ರಜತ್ ಕುಮಾರ್,  ತಾರಾಗಣದಲ್ಲಿ  ಚಿರಂತ್, (ಜುಗಾರಿ ಅವಿನಾಶ್ ರಾಜು),  ಅನೀಶ್ ತೇಜೇಶ್ವರ್  ದಿಲೀಪ್ ರಾಜ್, ಹರೀಶ್ ರಾಜ್, ನಿಧಿಸುಬ್ಬಯ್ಯ, ರಂಗಾಯಣ ರಘು, ಅವಿನಾಶ್, ನೀನಾಸಂ ಅಶ್ವತ್, ಅರುಣ್ ಸಾಗರ್, ಮಾಳವಿಕ, ಎಂ.ಎನ್. ಶ್ರೀದೇವಿ, ವಾಸ್ತು ವೆಂಕಟೇಶ್
   ರಥಕ್ಕೆ ಚಾಲನೆ
    ಆರ್.ಎಸ್.ಎಸ್. ಸಿನಿ ಕ್ರಿಯೇಷನ್ಸ್  ಲಾಂಛನದಲ್ಲಿ  ಬಿ.ಶ್ರೀನಿವಾಸ್ ನಿರ್ಮಿಸುತ್ತಿರುವ ರಥ ಚಿತ್ರಕ್ಕೆ  ಕಳೆದ ವಾರ ಕಂಠೀರವದಲ್ಲಿ  ಮುಹೂರ್ತ ನೆರವೇರಿತು.  ಆರಂಭದಲ್ಲಿ ನಿರ್ಮಾಪಕ ಕೆ.ಮಂಜು ಜ್ಯೋತಿ ಬೆಳಗಿದರು, ತಬಲ ನಾಣಿ ಕ್ಲಾಪ್ ತೋರಿದಾಗ ಆನಂದ್ ಕ್ಯಾಮೆರಾ ಚಾಲನೆ ಮಾಡಿದರು, ನಿರ್ದೇಶಕ ನಾಗ ಶೇಖರ್, ಪ್ರಥಮ ದೃಶ್ಯ ನಿರ್ದೇಶಿಸಿದರು.  ಚಿತ್ರಕ್ಕೆ ಕಥೆ, ಚಿತ್ರಕಥೆ  ನಿರ್ದೇಶನ ಗಜ, ಛಾಯಾಗ್ರಹಣ ಆರ್. ಸೆಲ್ವಮ್, ಸಂಗೀತ, ಹಿತನ್ ಕೆಟಿ, ಸಂಭಾಷಣೆ, ಎಸ್.ಎನ್. ಆನಂದ್, ಸಂಕಲನ ಅಶೋಕ್ ರೆಡ್ಡಿ, ತಿರುಪತಿ ರೆಡ್ಡಿ  ನೃತ್ಯ ನಂದಕುಮಾರ್, ಸಾಹಸ ಜೋನ್ಸ್,  ಕಲೆ ಮೋಹನ್ ಬಿಕೆರೆ  ಸಹನಿರ್ದೇಶನ, ಪರಶುರಾಮ್, ನಿರ್ವಹಣೆ ಹೊಸಳ್ಳಿ ಸುದೀಂದ್ರ, ತಾರಾಗಣದಲ್ಲಿ ಪ್ರವೀಣ್, ಶೃತಿ, ಯುವರಾಜ್ ನವ್ಯಶ್ರೀ, ಜೈಜಗದೀಶ್ ಶೋಭರಾಜ್, ಅವಿನಾಶ್, ತಬಲನಾಣಿ, ಬುಲೆಟ್ ಪ್ರಕಾಶ್, ಬ್ಯಾಂಕ್ ಜನಾರ್ಧನ್, ಬಿರಾದರ್, ಕವಿತಾ ಲೋಕೇಶ್, ಉಮೇಶ್ ಮುಂತಾದವರಿದ್ದಾರೆ.
    ಸಿಕ್ಕಾಪಟ್ಟೆ ಇಷ್ಟಪಟ್ಟೆ
    ಪ್ರಿಯಮ್ ಕ್ರಿಯೇಷನ್ಸ್, ಲಾಂಛನದಲ್ಲಿ ಎಸ್.ಆರ್. ಮನೋಹರನ್ ನಿರ್ಮಿಸುತ್ತಿರುವ, ಹರಿರಾಜನ್ ನಿರ್ದೇಶನದ, ಸಿಕ್ಕಾಪಟ್ಟೆ ಇಷ್ಟಪಟ್ಟೆ ಚಿತ್ರಕ್ಕೆ ಹೊಗೆನಿಗಕಲ್ ಫಾಲ್ಸ್ ಹಾಗೂ ಕರ್ನಾಟಕದ ಗಡಿ ಪ್ರದೇಶಗಳಲ್ಲಿ ೧೫ ದಿನಗಳ ಕಾಲ ಚಿತ್ರೀಕರಣ ಪೂರೈಸಿ ತಂಡ ನಗರಕ್ಕೆ ಬಂದಿದೆ.  ಚಿತ್ರದ ಛಾಯಾಗ್ರಹಣ ಜೆ.ಜೆ.ಕೃಷ್ಣ, ಸಂಗೀತ ಕಾರ್ತಿಕ್ ಭೂಪತಿರಾಜ, ನೃತ್ಯ ತ್ರಿಭುವ್ ಪ್ರಸಾದ್, ಸಾಹಸ ಕೌರವ ವೆಂಕಟೇಶ್ ತಾರಾಗಣದಲ್ಲಿ ನಮಿತ, ಶ್ರವಂತ್, ಕಿರಣ್, ಅನೀಶ್, ಮನೀಶ್, ಮೇಘನಾ ನಾಯ್ಡು, ಹರಿರಾಜನ್,  ಕೀರ್ತಿ ಚಾವ್ಲ, ಶಿವಾನಿ, ರವೀಂದ್ರನಾಥ್ ಮುಂತಾದವರು ಅಭಿನಯಿಸುತ್ತಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಶೋಕಿ ಶುರುವಾಯ್ತು - Chitratara.com
Copyright 2009 chitratara.com Reproduction is forbidden unless authorized. All rights reserved.