Chief Editor
Manohar. R (Manu)
Photo Journalist
chitrataramanu@gmail.com
+91 9845549026
ವಿದೇಶದಲ್ಲಿ ?ಮಾಸ್ ಹಾಡುಗಳು`
Posted date: 16/July/2011

 ಶ್ರೀಚಾಮುಂಡೇಶ್ವರಿ ಫ಼ಿಲಂಸ್ ಲಾಂಛನದಲ್ಲಿ ಎ.ಗಣೇಶ್ ಅವರು ನಿರ್ಮಿಸುತ್ತಿರುವ ‘ಮಾಸ್ ಚಿತ್ರಕ್ಕೆ ಮೂರು ಹಾಡುಗಳ ಹಾಗೂ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ ಬಾಕಿಯಿದೆ. ಹಾಡುಗಳ ಚಿತ್ರೀಕರಣ ವಿದೇಶದಲ್ಲಿ ನಡೆಯಲಿದೆ.
     ಆದಿತ್ಯ ನಾಯಕನಾಗಿ ನಟಿಸುತ್ತಿರುವ ಈ ಚಿತ್ರವನ್ನು ಜೆ.ಜಿ.ಕೃಷ್ಣ ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿರುವ ಜೆ.ಜಿ.ಕೃಷ್ಣ ಅವರು ಛಾಯಾಗ್ರಹಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.
     ಡೈಸಿಬೋಪಣ್ಣ ನಾಯಕಿಯಾಗಿ ಅಭಿನಯಿಸುತ್ತಿರುವ ಈ ಚಿತ್ರಕ್ಕೆ ಸಂಗೀತರಾಜರ ಸಂಗೀತವಿದೆ. ಥ್ರಿಲ್ಲರ್‌ಮಂಜು ಸಾಹಸ ನಿರ್ದೇಶನವಿರುವ ‘ಮಾಸ್ ಚಿತ್ರಕ್ಕೆ ರವಿಶ್ರೀವತ್ಸ ಸಂಭಾಷಣೆ ಬರೆದಿದ್ದಾರೆ. ಬಾಬುಖಾನ್ ಕಲಾ ನಿರ್ದೇಶನ, ಮುರಳಿ, ಚಿನ್ನಿಪ್ರಕಾಶ್ ನೃತ್ಯ ನಿರ್ದೇಶನ ಹಾಗೂ ಚಂಪಕಧಾಮ ಬಾಬು, ಅನಿಲ್ ಅವರ ನಿರ್ಮಾಣ ನಿರ್ವಹಣೆಯಿರುವ ಈ ಚಿತ್ರದ ತಾರಾಬಳಗದಲ್ಲಿ ರವಿಕಾಳೆ, ದೇವರಾಜ್, ಜಿ.ಕೆ.ಗೋವಿಂದರಾವ್, ಸುಚೀಂದ್ರಪ್ರಸಾದ್, ತಿಲಕ್‌ರಾಜ್, ಸತ್ಯಪ್ರಕಾಶ್, ಪೆಟ್ರೋಲ್ ಪ್ರಸನ್ನ ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ವಿದೇಶದಲ್ಲಿ ?ಮಾಸ್ ಹಾಡುಗಳು` - Chitratara.com
Copyright 2009 chitratara.com Reproduction is forbidden unless authorized. All rights reserved.