Chief Editor
Manohar. R (Manu)
Photo Journalist
chitrataramanu@gmail.com
+91 9845549026
ಹಾಡಿನಲ್ಲಿ ?ಆಟ`
Posted date: 16/July/2011

  ಶ್ರೀಶೈಲೇಂದ್ರ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶೈಲೇಂದ್ರ ಬಾಬು ಅವರು ನಿರ್ಮಿಸುತ್ತಿರುವ ‘ಆಟ ಚಿತ್ರಕ್ಕಾಗಿ ವಿ.ನಾಗೇಂದ್ರಪ್ರಸಾದ್ ಬರೆದಿರುವ ‘ರಾಮ ರಾಮ ನನ್ನ ಬಿಲ್ಲು ಎಂದು ಆರಂಭವಾಗುವ ಹಾಡಿನ ಚಿತ್ರೀಕರಣ ಅಬ್ಬಾಯಿನಾಯ್ಡು ಸ್ಟುಡಿಯೋದಲ್ಲಿ ನಿರ್ಮಿಸಲಾಗಿದ್ದ ಅದ್ದೂರಿ ಸೆಟ್‌ನಲ್ಲಿ ನಡೆದಿದೆ. ಸುಮಂತ್ ಹಾಗೂ ವಿಭಾನಟರಾಜನ್ ಅಭಿನಯಿಸಿದ ಈ ಗೀತೆಗೆ ಗಣೇಶ್ ನೃತ್ಯ ನಿರ್ದೇಶನ ಮಾಡಿದ್ದಾರೆ.
      ಮೂರು ಹಾಡುಗಳ ಚಿತ್ರೀಕರಣ ಬಾಕಿಯಿದ್ದು, ವಿದೇಶದಲ್ಲಿ ಈ ಹಾಡುಗಳ ಚಿತ್ರೀಕರಣ ನಡೆಯಲಿದೆ ಎಂದು ನಿರ್ದೇಶಕ ವಿಜಯಕುಮಾರ್ ತಿಳಿಸಿದ್ದಾರೆ.  ಚಿತ್ರತಂಡ ಸದ್ಯದಲ್ಲೇ ವಿದೇಶಕ್ಕೆ ಪಯಣಿಸಲಿದೆ.
      ನಿರ್ಮಾಪಕ ಶೈಲೇಂದ್ರ ಬಾಬು ಅವರ ಪುತ್ರ ಸುಮಂತ್ ಈ ಚಿತ್ರದ ನಾಯಕ. ವಿಭಾನಟರಾಜನ್, ಅವಿನಾಶ್, ಪವಿತ್ರಾಲೋಕೇಶ್, ಸಾಧುಕೋಕಿಲಾ, ಪದ್ಮಾವಾಸಂತಿ, ಪದ್ಮಜಾರಾವ್, ಪ್ರದೀಪ್, ವಿಜಯಕುಮಾರ್, ಅಚ್ಯುತರಾವ್, ಶಂಕರರಾವ್, ಚಿದಾನಂದ್ ಈ ಚಿತ್ರದಲ್ಲಿ ಅಭಿನಯಿಸುತ್ತಿರುವ ಕಲಾವಿದರು.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಹಾಡಿನಲ್ಲಿ ?ಆಟ` - Chitratara.com
Copyright 2009 chitratara.com Reproduction is forbidden unless authorized. All rights reserved.