Chief Editor
Manohar. R (Manu)
Photo Journalist
chitrataramanu@gmail.com
+91 9845549026
ಗಲಗಲ ಸಂಸಾರದಲ್ಲಿ ಗೋಲ್ ಮಾಲ
Posted date: 11 Sat, Feb 2012 ? 12:05:27 PM

ಹೆಸರಾಂತ ನಿರ್ದೇಶಕ ಸಾಯಿಪ್ರಕಾಶ್ ಸಂಸಾರದಲ್ಲಿ ಗೋಲ್ ಮಾಲ್ ಎಬ್ಬಿಸುತ್ತಿದ್ದಾರೆ. ೫ ಸತಿಪತಿಯರ ನಡುವಿನ ಕಿತಾಪತಿ ಈ ಚಿತ್ರದಲ್ಲಿ ಮುಖ್ಯವಾಗಿದ್ದು ಇದು ದಾಸರಿ ನಾರಾಯಣ್ ರಾವ್ ಅವರ ’ಆದಿ ವಾರಂ ಅಡವಾಡಿಕೆ ಸೆಲ್ವಂ ಕಾವಾಲಿ’ ಚಿತ್ರದ ಸ್ಫೂರ್ತಿಯಿಂದ ತಯಾರಾಗುತ್ತಿರುವ ಚಿತ್ರ ಸದ್ಯಕ್ಕೆ ಗ್ಲೋಬಲ್ ಅಪಾರ್ಟ್‌ಮೆಂಟ್ ಹಾಗೂ ಕಂಟ್ರಿ ಕ್ಲಬ್ಬಿನ ಕಾಟೇಜಿನಲ್ಲಿ ಚಿತ್ರೀಕರಣ ನಡೆಸಿದೆ.

೫ ಸತಿಪತಿಗಳಾಗಿ ಊಮಾಶ್ರೀ ಹಾಗೂ ರಾಜು ತಾಳೀಕೋಟೆ, ಮೋಹನ್ ಮತ್ತು ಅನು ಪ್ರಭಾಕರ್, ಸಿಹಿಕಹಿ ಚಂದ್ರು ಹಾಗೂ ತಾರಾ, ತಬಲಾ ನಾಣಿ ಮತ್ತು ಲಕ್ಷ್ಮಿ ಭಾಗವತರ್, ಸಾಧು ಕೋಕಿಲ ಹಾಗೂ ನಯನಾ ಕೃಷ್ಣ ಅಭಿನಯಿಸುತ್ತಿದ್ದಾರೆ. ಈ ಎಲ್ಲಾ ಪಾತ್ರಗಳು ಹಾಸ್ಯಮಯವಾಗಿದ್ದು ಎಲ್ಲಾ ಕಲಾವಿದರುಗಳಿಗೂ ಸಮಾನವಾದ ಅವಕಾಶವು ಇದೆ. ಈ ಚಿತ್ರದ ಹಾಡೊಂದರಲ್ಲಿ ಮಲೆಯಾಳಂ ಚಿತ್ರದ ಶಕೀಲಾ ಕಾಣಿಸಿಕೊಳ್ಳುತ್ತಿದ್ದಾರೆ ಹಾಗೂ ೨೦ ಜನಪ್ರಿಯ ಗೀತೆಗಳನ್ನು ಆಯ್ದು ಅದರ ತುಣುಕುಗಳನ್ನು ಈ ಚಿತ್ರದಲ್ಲಿ ಬಳಸಲಾಗುತ್ತಿದೆ. ಸಾಧು ಕೋಕಿಲ ಈ ಚಿತ್ರದ ಸಂಗೀತ ನಿರ್ದೇಶಕರು.

ಈ ಹಿಂದೆ ೩ನೇ ಕ್ಲಾಸ್ ಮಂಜ ಬಿ.ಕಾಂ. ಭಾಗ್ಯ ಚಿತ್ರ ನಿರ್ಮಿಸಿದ ಪ್ರಭಾಕರ್ ರೆಡ್ಡಿ ಈ ಚಿತ್ರದ ಬಗ್ಗೆ ಅಪಾರ ಆಸಕ್ತಿಯನ್ನು ಹೊಂದಿರುವರು.


Kannada Cinema's Latest Wallpapers
Kannada Cinema's Latest Videos
Kannada Movie/Cinema News - ಗಲಗಲ ಸಂಸಾರದಲ್ಲಿ ಗೋಲ್ ಮಾಲ - Chitratara.com
Copyright 2009 chitratara.com Reproduction is forbidden unless authorized. All rights reserved.