Chief Editor
Manohar. R (Manu)
Photo Journalist
chitrataramanu@gmail.com
+91 9845549026
ಈ ವಾರ ತೆರೆಗೆ `ಲಕ್ಕಿ`
Posted date: 20 Mon, Feb 2012 ? 09:45:03 AM

ಎಚ್.ಡಿ.ಕುಮಾರಸ್ವಾಮಿ ಅರ್ಪಿಸುವ, ಶಮಿಕಾ ಎಂಟರ್ ಪ್ರೈಸಸ್ ಲಾಂಛನದಲ್ಲಿ ರಾಧಿಕಾಕುಮಾರಸ್ವಾಮಿ ನಿರ್ಮಿಸಿರುವ  ‘ಲಕ್ಕಿ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಒಟ್ಟು ಐವತ್ತೆಂಟು ದಿನಗಳ ಕಾಲ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ ಎಂದು ನಿರ್ದೇಶಕ ಡಾ:ಸೂರಿ ತಿಳಿಸಿದ್ದಾರೆ.
     ಯಶ್ ನಾಯಕರಾಗಿ ನಟಿಸಿರುವ ಈ ಚಿತ್ರದ ನಾಯಕಿ ರಮ್ಯಾ. ಸಾಧುಕೋಕಿಲಾ, ಶರಣ್, ಬಿರಾದಾರ್, ಪದ್ಮಾಕುಮುಟಾ, ಶಂಕರ್‌ಭಟ್, ತಬಲನಾಣಿ, ವಿಜಯ್ ಚೆಂಡೂರು, ಎಂ.ಎಸ್.ಉಮೇಶ್, ಎಂ.ಎನ್.ಲಕ್ಷ್ಮೀದೇವಿ, ನಂದಕಿಶೋರ್ ಮುಂತಾದವರು ಈ ಚಿತ್ರದಲ್ಲಿ ನಟಿಸಿರುವ ಕಲಾವಿದರು.
     ವಿ.ರಾಘವೇಂದ್ರ ಬಂಟಿ ಕಾರ್ಯಕಾರಿ ನಿರ್ಮಾಪಕರಾಗಿರುವ ‘ಲಕ್ಕಿ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಕೃಷ್ಣರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ದೀಪು ಎಸ್ ಕುಮಾರ್ ಸಂಕಲವಿದೆ. ರವಿವರ್ಮರ ಸಾಸಸ ನಿರ್ದೇಶನವಿರುವ ಈ ಚಿತ್ರಕ್ಕೆ ಗೌಸ್‌ಫ಼ಿರ್ ಹಾಡುಗಳನ್ನು ರಚಿಸಿರುವುದಲ್ಲದೆ ಸಂಭಾಷಣೆಯನ್ನೂ ಬರೆದಿದ್ದಾರೆ. ಹರ್ಷ, ರಾಬರ್ಟ್ ಹಾಗೂ ಮುರಳಿ ನೃತ್ಯ ನಿರ್ದೇಶನ ಮಾಡಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಈ ವಾರ ತೆರೆಗೆ `ಲಕ್ಕಿ` - Chitratara.com
Copyright 2009 chitratara.com Reproduction is forbidden unless authorized. All rights reserved.