Chief Editor
Manohar. R (Manu)
Photo Journalist
chitrataramanu@gmail.com
+91 9845549026
ಲವ್ ಮಾಡೋಕು ಮೀಟ್ರು ಇರಬೇಕು
Posted date: 09 Fri, Mar 2012 ? 08:49:46 AM

ಕೋರಿಯೋಗ್ರಾಫರ್ ಹರ್ಷ ನಿರ್ದೇಶನದಲ್ಲಿ ಸೈ ಎನಿಸಿಕೊಂಡರೆ, ಈಗ ಅದೇ ಹಾದಿಯಲ್ಲಿರುವ ಸೂರಿ ಎಂಬ ನೃತ್ಯ ನಿರ್ದೇಶಕರೊಬ್ದರು ಚೊಚ್ಚಲಬಾರಿಗೆ ನಿರ್ದೇಶನದ ಕ್ಯಾಪ್ ಧರಿಸಲಿದ್ದಾರೆ. ಇವರ ಆಸೆಗೆ ಹಣ ಸುರಿಯುತ್ತಿರುವವರು ರಿಯಲ್ ಎಸ್ಟೆಟ್ ವ್ಯಾಪಾರ ಮಾಡುತ್ತಿರುವ ರಘುರಾಜ್ ಮತ್ತು ಚೇತನ್‌ಪ್ರಸಾದ್. ಅಂದ ಹಾಗೆ ಚಿತ್ರದ ಹೆಸರು ಮೀಟ್ರು. ನಿರ್ದೇಶಕರ ಪ್ರಕಾರ ಮೀಟ್ರು ಅಂದರೆ ಪವರ್ ಅಂತೆ. ಮಾಸ್ ಆಧಾರಿತ ಪ್ರೀತಿ ಕಥೆಯಿದ್ದು, ಆಕ್ಷನ್‌ಗೆ ಒತ್ತುಕೊಟ್ಟು ಕಾಲೇಜ್ ಬ್ಯಾಕ್‌ಡ್ರಾಪ್‌ನಲ್ಲಿ ನಾಯಕ ನಾಯಕಿಯರ ಪ್ರೀತಿ ಸಾಗುತ್ತದೆ. ಸ್ಟಾರ್ ಕ್ರಿಯೆಶನ್ಸ್‌ನಲ್ಲಿ ನಟನೆ ತರಭೇತಿ ಪಡೆದು ನಾಯಕನಾಗಿ ಅಭಿನಯಿಸುತ್ತಿರುವ ರಾಖಿ ಟೀಮ್ ವರ್ಕ್‌ನಲ್ಲಿ ಎಲ್ಲರೂ ಚೆನ್ನಾಗಿ ಕೆಲಸ ಮಾಡುತ್ತೇವೆಎಂದಷ್ಟೇ ಹೇಳಿದರು. ಇವರಿಗೆ ಜೊತೆಯಾಗಿ ಹರ್ಷಿಕಾಪೂರ್ಣಚ್ಚಾ ನಟಿಸುತ್ತಿದ್ದಾರೆ.
      ರಣ ಚಿತ್ರದ ಮೂಲಕ ಛಾಯಗ್ರಾಹಕನಾಗಿ ಪಾದಾರ್ಪಣೆ ಮಾಡಿದ ರಾಜರತ್ನಂ ಮೀಟ್ರುಗೆ ನಾಯಕ ನಾಯಕಿಯರನ್ನು ಚೆಂದ ಕಾಣಿಸಲು ಪ್ರಯತ್ನಪಡುತ್ತಾರಂತೆ. ಶ್ರೀವತ್ಸ ಸಂಗೀತ ನಿರ್ದೇಶನದಲ್ಲಿ ೫ ಹಾಡುಗಳಿಗೆ ರಾಗ ಸಂಯೋಜನೆ ಮಾಡಲಿದ್ದು, ಇದರಲ್ಲಿ ನಾಗೇಂದ್ರಪ್ರಸಾಸ್, ಕವಿರಾಜು ಮತ್ತು ಅರಸುಅಂತಾರೆ ಹಾಡುಗಳಿಗೆ ಪೆನ್ನು ಹಿಡಿಯಲಿದ್ದಾರೆ. ಒಟ್ಟು ೩೨ ದಿನಗಳ ಒಂದೇ ಹಂತದಲ್ಲಿ ಚಿತ್ರೀಕರಣ ಮತ್ತು ಹಾಡುಗಳ ಚಿತ್ರೀಕರಣಕ್ಕೆ ವಿದೇಶಕ್ಕೆ ಹೋಗುವ ಇರಾದೆ ತಂಡಕ್ಕೆ ಇದೆ. ವಿಶೇಷಪಾತ್ರದಲ್ಲಿ ಎಸಿಪಿಯಾಗಿ ಡೈಲಾಗ್‌ಕಿಂಗ್ ಸಾಯಿಪ್ರಕಾಶ್ ನಟಿಸುತ್ತಿದ್ದು ಉಳಿದ ತಾರಾಗಣದಲ್ಲಿ ರಂಗಾಯಣ ರಘು, ಶರತ್‌ಲೋಹಿತಾಶ್ವ, ಸಾಧುಕೋಕಿಲ, ಸಂಗೀತಾ, ಸುನೇತ್ರಪಂಡಿತ್ ತಂಡದಲ್ಲಿ ಭಾಗಿಯಾಗಲಿದ್ದಾರೆ. ೩೨ ಚಿತ್ರಗಳಿಗೆ ಸಾಹಸ ಸಂಯೋಜನೆ ಮಾಡಿದ ಮಾಸ್ ಮಾದ ಚಿತ್ರಕ್ಕೆ ಸಾಹಸ ನಿರ್ದೇಶನ ಮತ್ತೋಂದು ಫೈಟ್‌ಗೆ ಅಲ್ಟಿಮೇಟ್‌ಶಿವು ಇರುತ್ತಾರೆ. ದುನಿಯಾ ಸೂರಿ, ಡಾ.ಸೂರಿ ಈಗಾಗಲೆ ಚಿತ್ರರಂಗದಲ್ಲಿ ನಿರ್ದೇಶಕರಾಗಿ ಪರಿಚಿತರಾಗಿದ್ದು ಪ್ರಸಕ್ತ ಸೂರಿಯ ಚಿತ್ರ ಹೆಸರು ಮಾಡಿದಲ್ಲಿ ಮುಂದೆ ಮೀಟ್ರು ಸೂರಿ ಎಂದು ಕರೆಯಬಹುದು. ಚಿತ್ರದ ಮಹೂರ್ತವು ಕಂಠೀರವ ಸ್ಟುಡಿಯೋದಲ್ಲಿ ರಾಖಿ ಮತ್ತು ಹರ್ಷಿಕಾಪೂರ್ಣಚ್ಚಾ ನಮಸ್ಕರಿಸಿ ಡೈಲಾಗ್ ಹೇಳುವ ದೃಶ್ಯವನ್ನು ಚಿತ್ರೀಕರಸಿಲಾಯಿತು.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಲವ್ ಮಾಡೋಕು ಮೀಟ್ರು ಇರಬೇಕು - Chitratara.com
Copyright 2009 chitratara.com Reproduction is forbidden unless authorized. All rights reserved.