Chief Editor
Manohar. R (Manu)
Photo Journalist
chitrataramanu@gmail.com
+91 9845549026
ಮುಂಬೈನಲ್ಲಿ ?ಪರಿ? ಪ್ರೀಮಿಯರ್ ಶೋ
Posted date: 19 Thu, Apr 2012 ? 09:03:00 AM

ಲಿಂಗಪ್ಪ ಸಂಡೂರು ಹಾಗು ತ್ರಿವಿಕ್ರಮ ಬೆಳ್ತಂಗಡಿ ಅರ್ಪಿಸಿ ಪಿಡಿಟಿ ಅಭಿಯಂತರರ ಚಿತ್ರ ಲಾಂಛನದಲ್ಲಿ ಚಂದ್ರು ಸಿಂಧೋಗಿ, ಅರುಣ್ ತುಮಟಿ ಸ್ನೇಹಿತರು ನಿರ್ಮಿಸಿರುವ ‘ಪರಿ’ ಚಿತ್ರದ ಪ್ರೀಮಿಯರ್ ಶೋ ಮುಂಬೈನ ಅಂಧೆರಿ ವೆಸ್ಟ್‌ನಲ್ಲಿರುವ ಸಿನಿಮ್ಯಾಕ್ಸ್ ನಲ್ಲಿ ಆಯೋಜಿಸಲಾಗಿತ್ತು. ಭಾರತ ಚಿತ್ರರಂಗದ ಶತಮಾನೋತ್ಸವದ ಸವಿನೆನಪಿಗಾಗಿ ಬಾಲಿವುಡ್‌ನ ಕಲಾವಿದರು ಹಾಗೂ ತಂತ್ರಜ಼್ಞರಿಗೆ ಈ ಪ್ರದರ್ಶನವನ್ನು ಆಯೋಜಿಸಲಾಗಿತ್ತು.
    ಜಾವೇದ್ ಜಾಫ಼್ರಿ, ಅಂಜನ್ ಶ್ರೀವಾಸ್ತವ್, ಅಖಿಲೇಂದ್ರ ಮಿಶ್ರಾ, ಸುಲಭ್ ಆರ್ಯ, ರಾಜೇಶ್ವರಿ ಸಚ್ಚಿದೇವ್, ವರುಣ್ ವಡೋಲ, ಅನುರಾಧಾ ಪಟೇಲ್, ಉದಿತ್ ನಾರಾಯಣ್, ಸಾಧನಾ ಸರ್ಗಮ್ ಹಾಗೂ ನಿರ್ದೇಶಕರಾದ ರಮೇಶ್ ತಲ್ವಾರ್, ಬಾಬ್ ಬ್ರಹ್ಮ್ ಭಟ್, ಸುಧಾಂಶು ಚಕ್ರವರ್ತಿ, ಚಂದನ್‌ರಾಯ್, ಬಿಜೋನ್‌ದಾಸ್ ಗುಪ್ತ, ಶಮಾ.ಜೆ.ಬಿ, ರೇಣುಕಾ ಸಹಾನಿ ಸೇರಿದಂತೆ ಸುಮಾರು ಮುನ್ನೂರಕ್ಕು ಅಧಿಕ ಬಾಲಿವುಡ್ ಗಣ್ಯರು ಈ ಪ್ರೀಮಿಯರ್‌ನಲ್ಲಿ ಭಾಗವಹಿಸಿದ್ದರು. ಹಿರಿಯ ನಿರ್ದೇಶಕ ಎಂ.ಎಸ್.ಸತ್ಯು, ಚಿತ್ರದ ನಿರ್ದೇಶಕ ಸುಧೀರ್ ಅತ್ತಾವರ್, ನಿರ್ಮಾಪಕರು, ಸಂಗೀತ ನಿರ್ದೇಶಕ ವೀರಸಮರ್ಥ್ ಹಾಗೂ ಕಲಾವಿದರಾದ ರಾಕೇಶ್, ನಾಗಕಿರಣ್, ನಿವೇದಿತಾ, ಹರ್ಷಿಕಾ ಪೂಣಚ್ಚ, ಸತ್ಯ  ಮುಂತಾದವರು ಈ ಪ್ರದರ್ಶನದ ವೇಳೆ ಹಾಜರಿದ್ದರು. ಪ್ರದರ್ಶನದ ನಂತರ ಆಗಮಿಸಿದ್ದ ಅತಿಥಿಗಳು ಚಿತ್ರತಂಡದ ಶ್ರಮವನ್ನು ಶ್ಲಾಘಿಸಿದರು.
    ಸಂಪಣ್ಣ ಮುತಾಲಿಕ್ ಅವರ ಭಾರಧ್ವಾಜ್ ಕಾದಂಬರಿ ಆಧರಿತ ಈ ಚಿತ್ರವನ್ನು ಸುಧೀರ್ ಅತ್ತಾವರ್ ನಿರ್ದೇಶಿಸಿದ್ದಾರೆ.  ಅನಂತ್ ಅರಸ್ ಛಾಯಾಗ್ರಹಣ, ವೀರಸಮರ್ಥ್ ಸಂಗೀತ ಹಾಗೂ ಎಂ.ಎಸ್.ಸತ್ಯು ಅವರ ಕಲಾ ನಿರ್ದೇಶನವಿರುವ  ‘ಪರಿ’ ಚಿತ್ರದ ತಾರಾಗಣದಲ್ಲಿ ರಾಕೇಶ್, ನಾಗಾಕಿರಣ್, ನಿವೇದಿತಾ, ಹರ್ಷಿಕಾ ಪೂಣಚ್ಛ, ಮಸೂದ್ ಅಖ್ತರ್, ಉಷಾ ಉತ್ತುಪ್, ಶರತ್ ಲೋಹಿತಾಶ್ವಾ, ಸರ್ದಾರ್ ಸತ್ಯ, ವಿಕ್ರಮ ಉದಯಕುಮಾರ್, ಶ್ರೀನಿವಾಸ ಪ್ರಭು, ಸುದರ್ಶನೊ ಚಟರ್ಜಿ, ಮಂಡ್ಯ ರಮೇಶ್, ಬ್ಯಾಂಕ್ ಜನಾರ್ದನ್, ವೀಣಾ ನಾಯರ್, ವಿನಯಾಪ್ರಕಾಶ್ ಮುಂತಾದವರಿದ್ದಾರೆ.



Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮುಂಬೈನಲ್ಲಿ ?ಪರಿ? ಪ್ರೀಮಿಯರ್ ಶೋ - Chitratara.com
Copyright 2009 chitratara.com Reproduction is forbidden unless authorized. All rights reserved.