Chief Editor
Manohar. R (Manu)
Photo Journalist
chitrataramanu@gmail.com
+91 9845549026
ಡಿ.ರಾಜೇಂದ್ರಬಾಬು ನಿರ್ದೇಶನದ ನೂತನ ಚಿತ್ರದಲ್ಲಿ ಶಿವರಾಜಕುಮಾರ್
Posted date: 27 Wed, Jun 2012 ? 08:36:54 AM

ಖ್ಯಾತ ನಿರ್ದೇಶಕ ಡಿ.ರಾಜೇಂದ್ರಬಾಬು ಅವರು ನಿರ್ದೇಶಿಸುತ್ತಿರುವ ನೂತನ ಚಿತ್ರವೊಂದರಲ್ಲಿ ಹ್ಯಾಟ್ರಿಕ್‌ಹೀರೊ ಶಿವರಾಜಕುಮಾರ್ ನಾಯಕರಾಗಿ ನಟಿಸುತ್ತಿದ್ದಾರೆ. ಹಿಂದೆ ಈ ಜೋಡಿಯ ಪ್ರೀತ್ಸೆ, ಜೋಡಿಹಕ್ಕಿ, ಕುರುಬನರಾಣಿ, ದೇವರಮಗ, ಜೋಡಿಹಕ್ಕಿ, ಯಾರೇ ನೀ ಅಭಿಮಾನಿ, ಕೃಷ್ಣಲೀಲೆ ಮುಂತಾದ ಚಿತ್ರಗಳು ಚಿತ್ರರಸಿಕರ ಮನಸೂರೆಗೊಂಡಿತು.
      ಡಿ.ಕೇಶವ ಪ್ರೊಡಕ್ಷನ್ಸ್ ಲಾಂಛನದಲ್ಲಿ ಡಿ.ಕುಮಾರ್ ಅವರು ನಿರ್ಮಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಸದ್ಯದಲ್ಲೇ ಆರಂಭವಾಗಲಿದೆ. ಜೆಸ್ಸಿಗಿಫ಼್ಟ್ ಸಂಗೀತ ನೀಡಲಿರುವ ಈ ಚಿತ್ರಕ್ಕೆ ಪಿ.ಕೆ.ಎಚ್.ದಾಸ್ ಛಾಯಾಗ್ರಾಹಕರಾಗಿದ್ದಾರೆ.
      ನಿರ್ದೇಶಕರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವ ಈ ನೂತನ ಚಿತ್ರದ ಬಹುತೇಕ ಭಾಗದ ಚಿತ್ರೀಕರಣ ವಿದೇಶದಲ್ಲಿ ನಡೆಯಲಿದೆ. ಉಳಿದ ತಂತ್ರಜ಼್ಞರ ಹಾಗೂ ಕಲಾವಿದರ ಆಯ್ಕೆ ಪ್ರಗತಿಯಲ್ಲಿದೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಡಿ.ರಾಜೇಂದ್ರಬಾಬು ನಿರ್ದೇಶನದ ನೂತನ ಚಿತ್ರದಲ್ಲಿ ಶಿವರಾಜಕುಮಾರ್ - Chitratara.com
Copyright 2009 chitratara.com Reproduction is forbidden unless authorized. All rights reserved.