Chief Editor
Manohar. R (Manu)
Photo Journalist
chitrataramanu@gmail.com
+91 9845549026
`ಪ್ರೇಮ್ ಅಡ್ಡ? ಟಾಕಿ ಮುಗೀತು`
Posted date: 07 Sat, Jul 2012 ? 08:49:04 AM

ಆರಂಭದಿಂದ ಕುತೂಹಲ ಹುಟ್ಟಿಸುತ್ತಾ ಬಂದಿರುವ ನಿರ್ದೇಶಕ ಖ್ಯಾತಿ ಪಡೆದು ನಟನಾಗಿ ತಮ್ಮ ಎರಡನೇ ಚಿತ್ರದಲ್ಲಿ ಸಜ್ಜಾಗಿರುವ ಪ್ರೇಮ್ ಅಭಿನಯಧ ’ಪ್ರೇಮ್ ಅಡ್ಡ’ ಮಾತಿನ ಬಾಗದ  ಚಿತ್ರೀಕರಣ ಮುಗಿಸಿ, ಮೂರು ಹಾಡುಗಳ ಬಾಕಿ ಇಟ್ಟುಕೊಂಡು ಇದೇ ತಿಂಗಳ ೨೭ರಂದು ಹಾಡುಗಳ ಧ್ವನಿ ಸುರುಳಿ ಬಿಡುಗಡೆ ಮಾಡುವುದಾಗಿ ನಿರ್ಮಾಪಕ ಮುರಳಿ ಕೃಷ್ಣ ಹೇಳಿಕೊಂಡಿದ್ದಾರೆ.

ಹಲವು ವೈಶಿಷ್ಟ್ಯಗಳೊಂದಿಗೆ ಆರಂಭದಿಂದಲೇ ಸದ್ದು ಮಾಡಿರುವ ’ಪ್ರೇಮ್ ಅಡ್ಡ’ ನಿರ್ಮಾಪಕ ಮುರಳಿ ಕೃಷ್ಣ ಅವರ ಮತ್ತೊಂದು ಅದ್ಧೂರಿ ಕನ್ನಡ ಚಿತ್ರವನ್ನು ಹೆಸರಾಂತ ನಿರ್ದೇಶಕ ಮಹೇಶ್ ಬಾಬು ನಿರ್ದೇಶನ ಮಾಡುತ್ತಿದ್ದಾರೆ. ’ಪ್ರೇಮ್ ಅಡ್ಡ’ ಶೀರ್ಷಿಕೆಯ ವಿಷಯದಲ್ಲಿ ವಿವಾದವಾದ ಬಳಿಕ ಚಿತ್ರೀಕರಣ ಸುಗುಮವಾಗಿ ಅಗಿದ್ಧ್ದು ಖ್ಯಾತ ನಿರ್ದೇಶಕ ಪ್ರೇಮ್ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಳ್ಳಿಯಲ್ಲಿ ಯುವಕರನ್ನು ರಾಜಕೀಯವಾಗಿ ದುರುಪಯೋಗ ಮಾಡಿಕೊಳ್ಳುವುದು ಈ ಚಿತ್ರದಲ್ಲಿ ತೋರಿಸಲಾಗುವುದು. ಹಳ್ಳಿಯ ಸೊಗಡು ಹಾಗೂ ಭಾಷೆಯನ್ನು ಗಮನವಿಟ್ಟು ಕಮರ್ಷಿಯಲ್ ಗುಣಗಳಿಟ್ಟು ಈ ಚಿತ್ರವನ್ನು ಕನ್ನಡದ ಪರಿಸರಕ್ಕೆ ತಯಾರಿಸಲಾಗುತ್ತಿದೆ ಎನ್ನುತ್ತಾರೆ ಪ್ರೇಮ್.

ದಾವಣಗೆರೆಯ ರಾಜಕೀಯ ವ್ಯಕ್ತಿ, ನಿರ್ಮಾಪಕ ಹಾಗೂ ವಿತರಕ ಮುರಳಿ ಕೃಷ್ಣ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಕನ್ನಡದ ಜನಪ್ರಿಯ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ೫ ಹಾಡುಗಳಲ್ಲಿ ೪ ಹಾಡುಗಳನ್ನು ಮೂಹೂರ್ತದ ದಿವಸದಂದೇ ನಿರ್ದೇಶಕ ಮಹೇಶ್ ಬಾಬು ಅವರ ಕೈಗಿಟ್ಟಿದ್ದಾರೆ.

ಚಿತ್ರದ ಕಥಾನಾಯಕಿ ಕೃತಿ ಕರಬಂದಾ. ಶಿವನಾಗು, ಚಂದ್ರ ಕಲಾ ಹಾಗೂ ಕನ್ನಡ ಸಿನಿಮಾಗಳ ೧೫ ನಿರ್ದೇಶಕರುಗಳು’ಪ್ರೇಮ್ ಅಡ್ಡ’ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಅದರಲ್ಲಿ ನಿರ್ದೇಶಕ ಸಂಘದ ಅಧ್ಯಕ್ಷ ಎಂ.ಎಸ್.ರಮೇಶ್ ಕೂಡ ಸೇರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - `ಪ್ರೇಮ್ ಅಡ್ಡ? ಟಾಕಿ ಮುಗೀತು` - Chitratara.com
Copyright 2009 chitratara.com Reproduction is forbidden unless authorized. All rights reserved.