Chief Editor
Manohar. R (Manu)
Photo Journalist
chitrataramanu@gmail.com
+91 9845549026
?ಗುರು? ಚಿತ್ರಕ್ಕೆ ಬಿರುಸಿನ ಚಿತ್ರೀಕರಣ
Posted date: 09 Mon, Jul 2012 ? 08:10:18 AM

ತಮ್ಮ ಅಮೋಘ ಅಭಿನಯದಿಂದ ಚಿತ್ರರಸಿಕರ ಮನ ಗೆದ್ದಿರುವ ಜಗ್ಗೇಶ್ ಪ್ರಥಮ ನಿರ್ದೇಶನದ ’ಗುರು’ ಚಿತ್ರಕ್ಕೆ ನಗರದಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ.
      ಗುರುರಾಜ ಫಿಲಂಸ್  ಲಾಂಛನದಲ್ಲಿ ಜಗ್ಗೇಶ್ ಹಾಗೂ ಪರಿಮಳಾಜಗ್ಗೇಶ್ ಅವರು ನಿರ್ಮಿಸುತ್ತಿರುವ ಈ ಚಿತ್ರದ ನಾಯಕರಾಗಿ ಗುರುರಾಜ್ ಅಭಿನಯಿಸುತ್ತಿದ್ದಾರೆ. ಯತಿರಾಜ್, ರಶ್ಮಿಗೌತಮ್, ಗೌತಮಿ, ಶ್ರೀನಿವಾಸಮೂರ್ತಿ, ಶೋಭರಾಜ್, ಕಿಲ್ಲರ್ ವೆಂಕಟೇಶ್, ಶಂಕರ್ ಪಾಟೀಲ್, ಶೈಲಶ್ರೀ, ಅಭಿಜಿತ್, ಜೀವನ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಅಪ್ಪ ನಿರ್ದೇಶಿಸುತ್ತಿರುವ ಚಿತ್ರದಲ್ಲಿ ಪುತ್ರರಾದ ಗುರುರಾಜ್ ಹಾಗೂ ಯತಿರಾಜ್ ಅಭಿನಯಿಸುತ್ತಿರುವುದು ವಿಶೇಷ.
   ವಿನಯಚಂದ್ರ ಸಂಗೀತ ನೀಡಿರುವ ಈ ಚಿತ್ರಕ್ಕೆ ರಮೇಶ್‌ಬಾಬು ಅವರ ಛಾಯಾಗ್ರಹಣವಿದೆ. ಕೆ.ಎಂ.ಪ್ರಕಾಶ್ ಸಂಕಲನ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಟಿ.ಎ.ಆನಂದ್ ಸಹ ನಿರ್ದೇಶನ ಹಾಗೂ ರವಿಶಂಕರ್ ಅವರ ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕಿದೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ?ಗುರು? ಚಿತ್ರಕ್ಕೆ ಬಿರುಸಿನ ಚಿತ್ರೀಕರಣ - Chitratara.com
Copyright 2009 chitratara.com Reproduction is forbidden unless authorized. All rights reserved.