Chief Editor
Manohar. R (Manu)
Photo Journalist
chitrataramanu@gmail.com
+91 9845549026
`ಎದೆಗಾರಿಕೆಗೆ` ಮಾತಿನ ಜೋಡಣೆ
Posted date: 09 Mon, Jul 2012 ? 08:22:39 AM

ಮೇಘ ಮೂವೀಸ್ ಲಾಂಛನದಲ್ಲಿ ಸೈಯದ್‌ಅಮಾನ್‌ಬಚ್ಚನ್ ಹಾಗೂ ಎಂ.ಎಸ್.ರವೀಂದ್ರ ನಿರ್ಮಿಸುತ್ತಿರುವ ‘ಎದೆಗಾರಿಕೆ ಚಿತ್ರಕ್ಕೆ ಬಾಲಾಜಿ ಡಿಜಿಟಲ್ ಸ್ಟುಡಿಯೋದಲ್ಲಿ ಮಾತಿನ ಜೋಡಣೆ ನಡೆಯುತ್ತಿದೆ. ಬೆಂಗಳೂರು, ಮುಂಬೈ, ಸಕಲೇಶಪುರ, ಮಂಗಳೂರು ಮುಂತಾದ ಕಡೆ ಚಿತ್ರಕ್ಕೆ ಮೂವತ್ತೈದು ದಿನಗಳ ಚಿತ್ರೀಕರಣ ನಡೆದಿದೆ.  
     ಸುಮನಾ ಕಿತ್ತೂರು ನಿರ್ದೇಶನದ ಈ ಚಿತ್ರಕ್ಕೆ ಅಗ್ನಿಶ್ರೀಧರ್ ಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಬಿ,ರಾಕೇಶ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ದೀಪಕ್ ಪಂಡಿತ್ ಸಂಗೀತ ನೀಡಿದ್ದಾರೆ.
    ಡಿಫ಼ರೆಂಟ್ ಡ್ಯಾನಿ ಸಾಹಸ ನಿರ್ದೇಶನ, ಅಂಥೋನಿ ರೂಬೆನ್ ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ಆದಿತ್ಯ, ಆಕಾಂಕ್ಷ, ಅತುಲ್ ಕುಲಕರ್ಣಿ, ಅಚ್ಯುತಕುಮಾರ್, ಸೃಜನ್ ಲೋಕೇಶ್, ಧರ್ಮ, ಶರತ್ ಲೋಹಿತಾಶ್ವಾ, ಮೇಘನಾ ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - `ಎದೆಗಾರಿಕೆಗೆ` ಮಾತಿನ ಜೋಡಣೆ - Chitratara.com
Copyright 2009 chitratara.com Reproduction is forbidden unless authorized. All rights reserved.